ಸರ್ಕಾರದ ನಿರ್ಬಂಧದ ನಡುವೆಯೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರಮನೆಗುಡ್ಡ ಮತ್ತು ಎತ್ತಿನಭುಜ ಪ್ರವಾಸಿ ತಾಣಗಳಿಗೆ 200 ಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ಭಾರೀ ಮಳೆಯ ನಡುವೆಯೂ ಪ್ರವಾಸಿಗರು ಈ ಪ್ರದೇಶಗಳಿಗೆ ಭೇಟಿ ನೀಡುತ್ತಿರುವುದು ಸುರಕ್ಷತೆಯ ಬಗ್ಗೆ ಕಿಂಚಿತ್ತೂ ಆತಂಕವಿಲ್ಲದಂತೆ ತೋರುತ್ತಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಸೆ.03): ಸರ್ಕಾರದ ನಿರ್ಬಂಧದ ನಡುವೆಯೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರಮನೆಗುಡ್ಡ ಮತ್ತು ಎತ್ತಿನಭುಜ ಪ್ರವಾಸಿ ತಾಣಗಳಿಗೆ 200 ಕ್ಕೂ ಹೆಚ್ಚು ಚಾರಣಿಗರು ಬೆಟ್ಟವನ್ನು ಹತ್ತಿದ್ದಾರೆ. ಭಾರೀ ಮಳೆಯ ನಡುವೆಯೂ ಪ್ರವಾಸಿಗರು ಈ ಪ್ರದೇಶಗಳಿಗೆ ಭೇಟಿ ನೀಡುತ್ತಿರುವುದು ಸುರಕ್ಷತೆಯ ಬಗ್ಗೆ ಕಿಂಚಿತ್ತೂ ಆತಂಕವಿಲ್ಲದಂತೆ ತೋರುತ್ತಿದೆ.
ಸರ್ಕಾರದ ನಿರ್ಬಂಧದ ನಡುವೆಯೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಸಮೀಪದ ಪ್ರವಾಸಿ ತಾಣ ದೇವರಮನೆಗುಡ್ಡ, ಎತ್ತಿನಭುಜದಲ್ಲಿ ಇಂದು ಮತ್ತೆ 200ಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ. ಆದರೆ, ಸರ್ಕಾರದ ನಿಯಮ, ಅರಣ್ಯ ಸಚಿವರ ಆದೇಶಕ್ಕೆ ಬೆಲೆ ಇಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ. ಸರ್ಕಾರದ ಮಟ್ಟದಲ್ಲಿ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಒಂದು ಕಾನೂನು ಮಾಡಿದರೆ, ಜಿಲ್ಲೆ-ತಾಲೂಕು ಕೇಂದ್ರದಲ್ಲಿನ ಅಧಿಕಾರಿಗಳು ಮತ್ತೊಂದು ಮಾಡುತ್ತಾರೆ. ಜನ ಸಾಮಾನ್ಯರು ಹಾಗೂ ಪ್ರಕೃತಿ ಅನುಕೂಲಕ್ಕಾಗಿ ಒಂದು ಕಾನೂನನ್ನ ಜಾರಿಗೆ ತಂದಿದ್ದರೆ ಅಧಿಕಾರಿಗಳು ಅದನ್ನ ಸಂಪೂರ್ಣ ಗಾಳಿಗೆ ತೂರಿದ್ದಾರೆ. ಭಾರೀ ಮಳೆ ಮಧ್ಯೆಯೂ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರವಾಸಿಗರು ಎಣ್ಣೆ-ಗಾಂಜಾ ಹೊಡೆದುಕೊಂಡು ಮೋಜು-ಮಸ್ತಿ ಮಾಡುತ್ತಿದ್ದಾರೆ.
ನಮ್ ಶಾಲೇಲಿ ಟೀಚರ್ ಇಲ್ಲ, ನಿವೇ ಪಾಠ ಮಾಡಿ ಎಂದು ಬಿಇಒ ಕಚೇರಿಗೆ ಬಂದ ಮಕ್ಕಳು!
ಒಂದೆಡೆ ಭಾರೀ ಮಳೆ, ಮತ್ತೊಂದೆಡೆ ಕಿರಿದಾದ ಮಾರ್ಗವೆಂದು ಮುಂಜಾಗೃತ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅರಣ್ಯ ಸಚಿವ ಈಶ್ವರಖಂಡ್ರೆ ಹಾಗೂ ಹಿರಿಯ ಅಧಿಕಾರಿಗಳು ಮುಳ್ಳಯ್ಯನಗಿರಿ, ದತ್ತಪೀಠ ಸೇರಿದಂತೆ ಮೂಡಿಗೆರೆ ತಾಲೂಕಿನ ಬಾಳೂರು ಸಮೀಪದ ದೇವರಮನೆಗುಡ್ಡ, ಎತ್ತಿನಭುಜ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ತಾತ್ಕಾಲಿಕ ನಿರ್ಬಂಧ ಹೇರಿದ್ದರು. ಆದರೆ, ಸರ್ಕಾರದ ಆದೇಶಕ್ಕೆ ಕ್ಯಾರೇ ಎನ್ನದ ಪ್ರವಾಸಿಗರು ಹಾಗೂ ಸ್ಥಳೀಯ ಕೆಲವು ಟ್ರಕ್ಕಿಂಗ್ ಸಂಸ್ಥೆಗಳು ಬೇಕಾಬಿಟ್ಟಿಯಾಗಿ ಚಾರಣ ಮಾಡುತ್ತಾ ಸಾರ್ವಜನಿಕರ ಪ್ರಾಣದೊಂದಿಗೆ ಚೆಲ್ಲಾಟ ಆಗುತ್ತಿದ್ದಾರೆ.
ಕುದುರೆಮುಖದಲ್ಲೊಬ್ಬ ಪ್ರಾಣಿಪ್ರಿಯ, ಕಾಡಿನ ಮಧ್ಯೆ ಏಕಾಂಗಿ ಬದುಕು: 20 ವರ್ಷಗಳಿಂದ ಕಾಡಂಚಿನಲ್ಲೇ ವಾಸ..!
ಕೆಲ ಪ್ರವಾಸಿಗರಿಂದ ಮೋಜು ಮಸ್ತಿ : ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಗಾಲದ ವೇಳೆ ಕೆಲ ತಾಣಗಳಿಗೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಲಾಗಿದೆ. ಆದರೆ, ಮೂಡಿಗೆರೆ ತಾಲೂಕಿನ ದೇವರಮನೆಗುಡ್ಡ-ಎತ್ತಿನಭುಜಕ್ಕೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸದೇ ಹಾಗೆಯೇ ಮುಂದುವರೆಸಲಾಗಿದೆ. ಆದರೆ, ನಿನ್ನೆಯಿಂದ ಮತ್ತೆ 200ಕ್ಕೂ ಹೆಚ್ಚು ಜನ ಅದೇ ನಿರ್ಬಂಧ ಜಾಗಕ್ಕೆ ಭೇಟಿ ನೀಡಿ, ಮತ್ತೆ ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ. ಹಾಗಾದರೆ, ಸರ್ಕಾರ, ಸಚಿವರ ಆದೇಶಕ್ಕೆ ಬೆಲೆ ಇಲ್ಲವೇ ಎಂಬ ಪ್ರಶ್ನೆ ಜನಸಾಮಾನ್ಯರನ್ನ ಕಾಡ್ತಿದೆ. ಎತ್ತಿನಭುಜದ ಬಳಿ ಪೊಲೀಸರು ಇಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಇಲ್ಲ. ಆ ಜಾಗದಲ್ಲಿ ಯಾರೂ ಇರಲ್ಲ. ಮತ್ತೆ ಅದೇ ಜಾಗದಲ್ಲಿ ಏನಾದರೂ ಅನಾಹುತವಾದರೆ ಜವಾಬ್ದಾರಿ ಯಾರು? ಎಂಬ ಪ್ರಶ್ನೆ ಸಾರ್ವಜನಿಕರನ್ನ ಕಾಡುತ್ತಿದೆ.