ಸಿ.ಟಿ ರವಿ ಗೆ ಮತ್ತೊಂದು ಶಾಕ್ ನೀಡಲು ಶಾಸಕ ಹೆಚ್ ಡಿ ತಮ್ಮಯ್ಯ ತೆರೆಮರೆಯಲ್ಲಿ ಕಸರತ್ತು!

By Suvarna News  |  First Published May 23, 2023, 5:56 PM IST

ಸಿ.ಟಿ ರವಿಗೆ ಸೋಲಿನ ರುಚಿಯನ್ನು ತೋರಿಸಿದ್ದ ಹೆಚ್ ಡಿ ತಮ್ಮಯ್ಯ ಈಗ  ಮತ್ತೊಂದು ಶಾಕ್ ನೀಡಲು ಮುಂದಾಗಿದ್ದಾರೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್  

ಚಿಕ್ಕಮಗಳೂರು (ಮೇ.23): ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಈ ಬಾರಿ  ತೀವ್ರ ಜಿದ್ದಾಜಿದ್ದಿನ ಕ್ಷೇತ್ರವಾಗಿ ಪರಿವರ್ತನೆಯಾಗಿತ್ತು. ಒಂದು ಕಾಲದಲ್ಲಿ ಸಿಟಿ ರವಿ ಆಪ್ತ ಬಣ್ಣದಲ್ಲಿ ಗುರುತಿಸಿಕೊಂಡಿದ್ದ ಹೆಚ್ ಡಿ ತಮ್ಮಯ್ಯನೇ ಎದುರಾಳಿಯಾಗಿ ಸಿ.ಟಿ ರವಿಗೆ ಸೋಲಿನ ರುಚಿಯನ್ನು ತೋರಿಸಿದ್ದರು. ಇದೀಗ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಎಚ್ ಡಿ ತಮ್ಮಯ್ಯ ಮಾಜಿ ಶಾಸಕ ಸಿಟಿ ರವಿಗೆ ಮತ್ತೊಂದು ಶಾಕ್ ನೀಡಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಮಾಜಿ ಶಾಸಕ ಸಿ ಟಿ ರವಿಗೆ ಟಕ್ಕರ್ ಕೊಡಲು ಮುಂದಾಗಿರುವ ಎಚ್ ಡಿ ತಮ್ಮಯ್ಯ ಸದ್ದಿಲ್ಲದೆ ಆಪರೇಷನ್ ಕಮಲಕ್ಕೆ ಮುಂದಾಗಿದ್ದಾರೆ. ನಗರಸಭೆ ಆಡಳಿತವನ್ನು ಬಿಜೆಪಿಯಿಂದ ತಪ್ಪಿಸಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಸರತ್ತು ಆರಂಭಿಸಿದ್ದಾರೆ. 

Latest Videos

undefined

ಬಿಜೆಪಿಯ ಪ್ರಾಬಲ್ಯ ತಗ್ಗಿಸಲು ನೂತನ ಶಾಸಕರ ಪ್ಲಾನ್:
ಕಳೆದ‌ ಒಂದುವರೆ ವರ್ಷದಿಂದ ಬಿಜೆಪಿ ಆಡಳಿತವನ್ನು ಹೊಂದಿರುವ ಚಿಕ್ಕಮಗಳೂರು ನಗರಸಭೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ತಂತ್ರಗಾರಿಕೆಯನ್ನು ನೂತನ ಶಾಸಕ ಎಚ್ ಡಿ ತಮ್ಮಯ್ಯ ಆರಂಭಿಸಿದ್ದಾರೆ. ನಗರಸಭೆಯಲ್ಲಿ ಹಾಲಿ ಬಿಜೆಪಿ ಪಕ್ಷದ ಬಹುಮತವನ್ನು ತಗ್ಗಿಸುವ ನಿಟ್ಟಿನಲ್ಲಿ ತಮ್ಮದೇ ಆದ ಕಾರ್ಯತಂತ್ರವನ್ನು ರೂಪಿಸಿದ್ದಾರೆ. ಎಚ್ ಡಿ ತಮ್ಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಹಾಲಿ ನಗರಸಭಾ ಸದಸ್ಯರಿಂದ ರಾಜಿನಾಮೆ ಕೊಡಿಸುವ ರಾಜಕೀಯ ತಂತ್ರಗಾರಿಕೆಯನ್ನು ನೂತನ ಶಾಸಕರು ಮಾಡಿದ್ದಾರೆ ಎನ್ನಲಾಗುತ್ತಿದೆ.

ಮೂವರು ನಗರಸಭಾ ಸದಸ್ಯರಿಂದ ರಾಜೀನಾಮೆ:
ಒಂದು ಮೂಲಗಳ ಮಾಹಿತಿ ಪ್ರಕಾರ ವಿಧಾನಸಭಾ ಅಧಿವೇಶನ ಮುಗಿದ ಬಳಿಕ ನಗರಸಭಾ ಸದಸ್ಯರ ರಾಜೀನಾಮೆ ನೀಡುತ್ತಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಎಚ್ ಡಿ ತಮ್ಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಮೂವರು ನಗರಸಭಾ ಸದಸ್ಯರಿಂದ ರಾಜೀನಾಮೆ ಕೊಡಿಸುವ ಮೂಲಕ ನಗರಸಭೆಯಲ್ಲಿ ಬಿಜೆಪಿ ಬಲವನ್ನು ತಗ್ಗಿಸುವ ಕಾರ್ಯತಂತ್ರವನ್ನು ಎಣಿದಿದ್ದಾರೆ. ಬಿಜೆಪಿ ಪಕ್ಷದಿಂದ ಆಯ್ಕೆಯಾಗಿರುವ ಮೂವರು ಸದಸ್ಯರು ರಾಜೀನಾಮೆ ಕೊಟ್ಟರೆ ನಗರಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ ಕುಸಿತಗೊಳ್ಳಲಿದೆ ಆಗ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಕ್ಷವನ್ನು ಅಧಿಕಾರಕ್ಕೆ ತರುವ ಯೋಜನೆಯನ್ನು ನೂತನ ಶಾಸಕ ಎಚ್ ಡಿ ತಮ್ಮಯ್ಯ ಮಾಡಿದ್ದಾರೆ ಎನ್ನಲಾಗುತ್ತಿದೆ.ಬಿಜೆಪಿ ಹಾಲಿ 18 ಸದಸ್ಯರು, ಎಸ್ ಡಿ ಪಿ ಐ 1, ಜೆಡಿಎಸ್‌ 2 ಕಾಂಗ್ರೆಸ್ 13, ಪಕ್ಷೇತರರು 1 ಸದಸ್ಯರಿದ್ದು ಬಿಜೆಪಿ‌ ಪಕ್ಷದಿಂದ ಆಯ್ಕೆ‌ ಮೂವರು  ಸದಸ್ಯರಿಂದ ರಾಜೀನಾಮೆ ಕೊಡಿಸಲು ಪ್ಲಾನ್ ರೂಪಿಸಿದ್ದಾರೆ.

ಉರಿಗೌಡ-ನಂಜೇಗೌಡ ಕೇಸಲ್ಲಿ ನಮ್ಮ ವಿರುದ್ಧ ನಿಂತ್ರಿ, ಇನ್ನು ಅದೆಲ್ಲ ನಡೆಯಲ್ಲ: ಪೊಲೀಸರಿಗೆ

ಸಂಖ್ಯಾಬಲ
ಬಿಜೆಪಿ‌ 18 
ಲೋಕಸಭಾ ಸದಸ್ಯರು 1
ವಿಧಾನಪರಿಷತ್  ಸದಸ್ಯರು 1
ಒಟ್ಟು : 20 

ಪೊಲೀಸ್ ಇಲಾಖೆಯನ್ನೇ ಕೇಸರಿಕರಣ ಮಾಡಲು ಹೊರಟಿದ್ದೀರಾ... ಅಧಿಕಾರಿಗಳ ವಿರುದ್ಧ ಡಿಕೆಶಿ ಗರಂ

ಕಾಂಗ್ರೆಸ್ ಜೆಡಿಎಸ್ ಮೈತ್ರಿ ಆದ್ರೆ ಅದರ ಬಲಾಬಲ 
ಕಾಂಗ್ರೆಸ್ 13
ಎಸ್ ಡಿ ಪಿ ಐ 1
ಜೆಡಿಎಸ್ 2 
ಪಕ್ಷೇತರರು 1
ಬಿಜೆಪಿ‌ ಪಕ್ಷದ ವಿಧಾನಸಭಾ ಶಾಸಕರು1 
ಜೆಡಿಎಸ್ ಪಕ್ಷದ ವಿಧಾನಪರಿಷತ್ ಸದಸ್ಯರ 1
ಒಟ್ಟು :19  ಸದಸ್ಯರಾಗುತ್ತಾರೆ.
ಒಂದು ವೇಳೆ ಹಾಲಿ ಬಿಜೆಪಿ ಸದಸ್ಯರು ಮೂವರು ರಾಜೀನಾಮೆ ನೀಡಿದರೆ ನಗರಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ ಕುಸಿತವಾಗಿ ಅಧಿಕಾರ ಕಳೆದುಕೊಳ್ಳುವ ಸ್ಥಿತಿ ಎದುರಾಗಲಿದೆ.

click me!