ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ತ ಹೆಗ್ಡೆ ಬಗ್ಗೆ ಚಿಕ್ಕಮಗಳೂರಿನ ಎಬಿಸಿ ಕಾರ್ಮಿಕರು ಮಾತನಾಡಿದ್ದಾರೆ. ತಮ್ಮ ನೆಚ್ಚಿನ ಮಾಲೀಕ ಕಾಣೆಯಾದಾಗಿನಿಂದಲೂ ಅಲ್ಲಿನ ಸಿಬ್ಬಂದಿ ಆತಂಕಕ್ಕೊಳಗಾಗಿದ್ದರು. ಸಿದ್ಧಾರ್ಥ ಹೆಗ್ಡೆ ಅವರು ಯಜಮಾನರು ಮಾತ್ರವಲ್ಲ, ನಮ್ಮ ಪಾಲಿನ ದೇವರು ಎಂದು ಹೇಳುತ್ತಾರೆ ಎಬಿಸಿ ಕಾರ್ಮಿಕ ಸಂದೀಪ್.
ಚಿಕ್ಕಮಗಳೂರು(ಜು.31): ಕಾಫಿ ಉದ್ಯಮಿ, ಎಬಿಸಿ ಮಾಲೀಕ ಸಿದ್ಧಾರ್ಥ ಅವರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಪಾಲಿಗೆ ದೇವರು. ಹೀಗಂತ ಎಬಿಸಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಎಬಿಸಿಯಲ್ಲಿ ಎಂದಿನ ವಾತಾವರಣ ಇರಲಿಲ್ಲ, ಬೆರಳೆಣಿಕೆಯಷ್ಟುಮಾತ್ರ ಕೆಲವೇ ಯೂನಿಟ್‌ಗಳಲ್ಲಿ ಕೆಲಸಗಾರರು ಹಾಜರಿದ್ದರು. ಅವರಲ್ಲಿ ಹೆಚ್ಚಿನ ಮಂದಿ ಯಾರೊಂದಿಗೂ ಮಾತನಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಸಿದ್ಧಾರ್ಥ ಅವರು ಬಂದೇ ಬರುತ್ತಾರೆಂಬ ಆತ್ಮವಿಶ್ವಾಸದಲ್ಲೇ ಇದ್ದರು.
ಈ ಸಂಸ್ಥೆಯಲ್ಲಿ 20 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ನಮಗೆ ಬದುಕುವ ದಾರಿಯನ್ನು ತೋರಿಸಿದವರು ನಮ್ಮ ಬಾಸ್ (ಸಿದ್ಧಾರ್ಥ ಹೆಗ್ಡೆ), ಅವರು ಯಜಮಾನರು ಮಾತ್ರವಲ್ಲ, ನಮ್ಮ ಪಾಲಿನ ದೇವರು ಎಂದು ಎಬಿಸಿ ಕಾರ್ಮಿಕ ಸಂದೀಪ್ ಹೇಳಿದರು.
ಹಾಸನದಿಂದ ಕೆಲಸ ಅರಿಸಿ ಚಿಕ್ಕಮಗಳೂರಿಗೆ ಬಂದೆ, ಎಬಿಸಿಯಲ್ಲಿ ಕೆಲಸ ಸಿಕ್ಕಿತು. 20 ವರ್ಷ ಆಯಿತು. ಇಲ್ಲಿ ಉತ್ತಮ ಭವಿಷ್ಯವನ್ನು ಕಂಡುಕೊಂಡಿದ್ದೇವೆ ಎಂದರು.
undefined
ಕಾಫಿ ಬೆಳೆಗಾರ ವಂಶದ ಏಕೈಕ ಕುಡಿ ಸಿದ್ಧಾರ್ಥ, ಹುಟ್ಟೂರಿನ ಜನರಿಗಾಗಿ ಶಾಲಾ ಕಾಲೇಜು!
ಇದೇ ಸಂಸ್ಥೆಯಲ್ಲಿ ಕೆಲಸ ಮಾಡಿರುವ ಮಂಜುನಾಥ್ ಮಾತನಾಡಿ, ಅವರು ನಾಪತ್ತೆ ಆಗಿರುವ ವಿಷಯ ಕೇಳಿ ಮನಸ್ಸಿಗೆ ತುಂಬಾ ನೋವಾಗಿದೆ. ಅವರು ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ನಮಗೆ ಕೆಲಸ ಕೊಟ್ಟು, ಜೀವನ ಕೊಟ್ಟವರು, ಅಂತಹ ಒಳ್ಳೆಯ ವ್ಯಕ್ತಿಯನ್ನು ಮರೆಯಲು ಸಾಧ್ಯವಿಲ್ಲ. ನನ್ನ ಪಾಲಿಗೆ ದೇವರು ಬಿಟ್ಟರೆ ಎರಡನೇ ಸ್ಥಾನದಲ್ಲಿ ಅವರು ಇದ್ದಾರೆ ಎಂದು ಹೇಳಿದರು.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ