ಐಎಂಎಗೆ ಸೇರಿದ ಬೇನಾಮಿ ಜಮೀನು ವಶ

Published : Jul 31, 2019, 11:25 AM ISTUpdated : Jul 31, 2019, 11:31 AM IST
ಐಎಂಎಗೆ ಸೇರಿದ ಬೇನಾಮಿ ಜಮೀನು ವಶ

ಸಾರಾಂಶ

ಐಎಂಎ ವಂಚಕ ಮನ್ಸೂರ್‌ಅಲಿಖಾನ್‌ ಸಂಬಂಧಿಕರ ಹೆಸರಿನಲ್ಲಿ ಟೇಕಲ್‌ನಲ್ಲಿದ್ದ ಒಂದು ಎಕರೆಗೂ ಹೆಚ್ಚಿನ ಭೂಮಿಯನ್ನು ಜಿಲ್ಲಾಡಳಿತ ವಶಪಡಿಸಿಕೊಂಡಿದೆ. ಸದರಿ ಪ್ರದೇಶಗಳಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಸೂಚನಾ ಫಲಕಗಳನ್ನು ಅಳವಡಿಸಿದೆ.

ಕೋಲಾರ(ಜು.31): ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿಯೂ ಹಲವು ಸಂಪರ್ಕಗಳಿವೆ ಎಂಬ ಮಾಹಿತಿ ಬೆನ್ನಹಿಂದೆಯೇ ಹಗರಣದ ಮುಖ್ಯ ಆರೋಪಿ ಮನ್ಸೂರ್‌ಅಲಿಖಾನ್‌ ಸಂಬಂಧಿಕರ ಹೆಸರಿನಲ್ಲಿ ಟೇಕಲ್‌ನಲ್ಲಿದ್ದ ಜಮೀನನ್ನು ಜಿಲ್ಲಾಡಳಿತ ವಶಪಡಿಸಿಕೊಂಡಿದೆ.

ಪ್ರವೇಶ ನಿರ್ಬಂಧ:

ಟೇಕಲ್‌ ಪಟ್ಟಣಕ್ಕೆ ಸಮೀಪದ ಬೈರತ್ನಹಳ್ಳಿಯಪುರ ಗ್ರಾಮದ ಸ.ನಂ.6 ರ 0-20 ಗುಂಟೆ, ಸರ್ವೆ ನಂ. 5 ರ 30 ಗುಂಟೆ ಜಮೀನು ಮತ್ತು ಬೈರತ್ನಹಳ್ಳಿಯಲ್ಲಿನ ಫಾರಂಹೌಸ್‌ ಅನ್ನು ಜಿಲ್ಲಾಡಳಿತ ವಶಪಡಿಸಿಕೊಂಡು ಸದರಿ ಪ್ರದೇಶಗಳಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಸೂಚನಾ ಫಲಕಗಳನ್ನು ಅಳವಡಿಸಿದೆ.

ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ಉಪವಿಭಾಗಾಧಿಕಾರಿ ವಿ.ಸೋಮಶೇಖರ್‌, ತಹಸೀಲ್ದಾರ್‌ ನಾಗರಾಜ್‌, ಕಂದಾಯ ನಿರೀಕ್ಷಕ ಮುನಿಸ್ವಾಮಿಶೆಟ್ಟಿ, ಗ್ರಾಮ ಲೆಕ್ಕಾಧಿಕಾರಿ ಶಿವಾನಂದ ಅವರು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಹಾಸನ: ಐಎಂಎ ಕಂಪನಿಗೆ ಸೇರಿದ ಜಾಗ ವಶಕ್ಕೆ

ಪುರ ಗ್ರಾಮದಲ್ಲಿ ಐಎಂಎ ಸಂಸ್ಥೆಗೆ ಸೇರಿದ 20 ಗುಂಟೆ ಜಮೀನು ನಜ್ಮಾಖಾನಂ ಕೋಂ ಖಲೀಮುಲ್ಲಾರವರ ಹೆಸರಿನಲ್ಲಿದ್ದು, ಇದರಲ್ಲಿ ಸಿಮೆಂಟ್‌ ಇಟ್ಟಿಗೆ ಕಾರ್ಖಾನೆ ಇದೆ.

ಇದೇ ಗ್ರಾಮದ ಸರ್ವೆ ನಂ. 5 ರಲ್ಲಿ 30 ಗುಂಟೆ ಜಮೀನು ಕೂಡಾ ಸದರಿ ನಜ್ಮಾಖಾನಂ ಕೋಂ ಖಲೀಮುಲ್ಲಾ ಅವರು ಖರೀದಿಸಿದ್ದು ಇನ್ನೂ ಖಾತೆ ಬದಲಾವಣೆಯಾಗಿಲ್ಲ. ಈ ಜಮೀನಿನಲ್ಲಿ ವಾಸದ ಮನೆ ಮತ್ತು ಉದ್ಯಾನವನವಿದೆ. ಇವೆರಡೂ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!