Chikkaballapura: DC ಕಚೇರಿ FDA ಮನೆಗಳ ಮೇಲೆ ಲೋಕಾಯುಕ್ತ ದಾಳಿ; ಕೋಟಿ ಕೋಟಿ ಆಸ್ತಿ ಪತ್ತೆ

Published : Sep 22, 2026, 01:29 PM IST
Chikkaballapura Lokayukta raids homes of an FDA official from the DC office

ಸಾರಾಂಶ

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಚಿಕ್ಕಬಳ್ಳಾಪುರ ಡಿಸಿ ಕಚೇರಿ ಸಹಾಯಕ ದರ್ಶನ್ ಗೌಡ ಹಾಗೂ ಮಡಿಕೇರಿ ನಗರಸಭೆ ಆಯುಕ್ತ ರಮೇಶ್ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಬೆಂಗಳೂರು, ತುಮಕೂರು ಸೇರಿದಂತೆ ಹಲವೆಡೆ ಏಕಕಾಲದಲ್ಲಿ ಶೋಧ ಕಾರ್ಯ ಮುಂದುವರಿದಿದ್ದು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚಿಕ್ಕಬಳ್ಳಾಪುರ: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ದರ್ಶನ್ ಗೌಡ ಜೆ. ಅವರ ನಿವಾಸ ಮತ್ತು ಅವರ ಸಂಬಂಧಿಕರ ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಲೋಕಾಯುಕ್ತ ಭರ್ಜರಿ ಬೇಟೆ: ಸಿಕ್ಕಿಬಿದ್ದ ಆ ಅಧಿಕಾರಿಗಳು ಯಾರು?

ಜಿಲ್ಲಾಧಿಕಾರಿ ಕಚೇರಿಯಲ್ಲಿ ದರ್ಶನ್ ಗೌಡ ಕೆಲಸ ನಿರ್ವಹಿಸುತ್ತಿರುವ ಕಚೇರಿ, ಬೆಂಗಳೂರಿನ ಆರು ಮನೆಗಳು ಮತ್ತು ತುರುವೇಕೆರೆ ತಾಲೂಕಿನ ನಿವಾಸ ಸೇರಿ 8 ಕಡೆ ದಾಳಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಬಾಗಲಗುಂಟೆಯ ಸೌಂದರ್ಯ ಬಡಾವಣೆಯಲ್ಲಿನ ಎರಡು ಮನೆಗಳು, ಮಲ್ಲಸಂದ್ರದಲ್ಲಿನ ಎರಡು ಮನೆಗಳು, ಹೆಸರಘಟ್ಟದ ಸೋಲದೇವನಹಳ್ಳಿಯಲ್ಲಿನ ಒಂದು ಮನೆ, ತುಮಕೂರು ಜಿಲ್ಲೆಯ ತುರುವೇಕರೆ ತಾಲೂಕು ವಡನಘಟ್ಟದಲ್ಲಿನ ಅವರ ಮಾವನ ಮನೆಯ ಮೇಲೆ ದಾಳಿ ನಡೆದಿದೆ.

ದರ್ಶನ್ ಗೌಡ ಅವರ ಆದಾಯದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ಆದಾಯಕ್ಕಿಂತಲೂ ಆಸ್ತಿಯು ಶೇಕಡಾ 138.22ರಷ್ಟು ಹೆಚ್ಚಿದೆ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ. ಚಿಕ್ಕಬಳ್ಳಾಪುರ ಜಿಲ್ಲಾ ಲೋಕಾಯುಕ್ತ ಎಸ್‌ಪಿ ಶಿವಕುಮಾರ್ ನೇತೃತ್ವದ ತಂಡದಿಂದ ಈ ದಾಳಿಗಳು ನಡೆದಿವೆ.

ಚಿಕ್ಕಬಳ್ಳಾಪುರ ಮಾತ್ರವಲ್ಲದೇ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಬಿಸಿಮುಟ್ಟಿಸುವ ಕೆಲಸ ಮಾಡಿದ್ದಾರೆ. ಇಂದು ಏಕಕಾಲದಲ್ಲಿ ರಾಜ್ಯದ ಹಲವು ಕಡೆ ದಾಳಿ ನಡೆಸಲಾಗಿದೆ. ಮಡಿಕೇರಿ ನಗರಸಭೆ ಆಯುಕ್ತರ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ನಾಲ್ಕು ವಾಹನಗಳಲ್ಲಿ ಬೆಂಗಳೂರಿನಿಂದ ಬಂದಿರುವ ಲೋಕಾಯುಕ್ತ ಪೊಲೀಸರು ಮಡಿಕೇರಿ ನಗರಸಭೆ ಆಯುಕ್ತ ರಮೇಶ್ ಅವರ ನಿವಾಸದಲ್ಲಿ ಪರಿಶೀಲನೆ ನಡೆಸಿದ್ದಾರೆ. ಮಡಿಕೇರಿ ನಗರಸಭೆ, ಅವರ ಮನೆ ಮತ್ತು ಅವರ ತಾಯಿ ಮನೆ ಮೇಲೆ ಏಕಾಏಕ ಕಾಲದಲ್ಲಿ ದಾಲಿ ನಡೆಸಲಾಗಿದೆ. ಒಟ್ಟು ಎಂಟು ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ನಡೆಸಿದ್ದು, ದಾಸವಾಳದಲ್ಲಿರುವ ಮನೆಯಿಂದ ದಾಖಲೆ ಚಿನ್ನಾಭರಣ ಒಂದಷ್ಟು ನಗದು ವಶಕ್ಕೆ ಪಡೆದುಕೊಂಡಿರುವ ಮಾಹಿತಿ ಲಭ್ಯವಾಗಿದ್ದು, ಇನ್ನು ಕೆಲವು ಅಧಿಕಾರಿಗಳಿಂದ ಮನೆಯಲ್ಲಿ ಶೋಧ ಮುಂದುವರಿದಿದೆ.

PREV
Read more Articles on
click me!

Recommended Stories

Kodagu: ಮಡಿಕೇರಿ ದಸರಾ ಜನೋತ್ಸವದ ಮೇಲೆ ಕರಿನೆರಳು; ಸಿದ್ಧತಾ ಕೆಲಸ ಕಾರ್ಯಗಳಿಗೆ ಚಾಲನೆ ನೀಡಲು ಸಾಧ್ಯವಾಗದ ಸ್ಥಿತಿ!
​ಒಣಭೂಮಿಯಲ್ಲಿ ಚಿನ್ನದ ಬೆಳೆ: 2 ಎಕರೆಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ಲಕ್ಷ ಲಕ್ಷ ಗಳಿಸುತ್ತಿರುವ ವಿಜಯಪುರದ ಯುವ ರೈತ!