
ಚಿಕ್ಕಬಳ್ಳಾಪುರ(ಡಿ.14): ಸಾರ್ವಜನಿಕರ ಕೆಲಸ ಮಾಡಿಕೊಡಬೇಕಾದ ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯದ ವೇಳೆ ಕಚೇರಿಗೆ ಬೀಗ ಜಡಿದು, ಪಾರ್ಟಿಯಲ್ಲಿ ಭಾಗವಹಿಸಿದ ಆರೋಪ ಕೇಳಿಬಂದಿದೆ.
ಚಿಂತಾಮಣಿ ತಹಸೀಲ್ದಾರ್ ವಿಶ್ವನಾಥ್ ಅವರ ಹುಟ್ಟುಹಬ್ಬ ಶುಕ್ರವಾರ ಇದ್ದು, ಇವರ ಹುಟ್ಟಹಬ್ಬದ ಆಚರಣೆ ಜೊತೆಗೆ ಐಷರಾಮಿ ಹೋಟೆಲ್‌ನಲ್ಲಿ ಕಚೇರಿ ಸಿಬ್ಬಂದಿಗೆ ಪಾರ್ಟಿ ಕೊಡಿಸಿದ್ದಾರೆ ಎನ್ನಲಾಗಿದೆ. ಮಧ್ಯಾಹ್ನ 2 ಗಂಟೆಗೆ ತಾಲೂಕು ಕಚೇರಿಗೆ ಬೀಗ ಜಡಿದು ಹೊರ ಹೋಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಜೆ 4.30 ಆದರೂ ವಾಪಸ್ ಬಂದಿಲ್ಲ ಎಂದು ಸಾರ್ವಜದನಿಕರು ಆರೋಪಿಸಿದ್ದಾರೆ.
ಸುಳ್ವಾಡಿ ವಿಷ ದುರಂತ: ದೇವಳ ಬಾಗಿಲು ತೆರೆಯಲು ಹೆಚ್ಚಿದ ಒತ್ತಡ
ತಾಲೂಕು ಕಚೇರಿಗೆ ನಾನಾ ಕೆಲಸಗಳಿಗಾಗಿ ದೂರದ ಗ್ರಾಮಗಳಿಂದ ಆಗಮಿಸಿದ ಸಾರ್ವಜನಿಕರು ಬಂದ ಕೆಲಸಗಳಾಗದೆ, ಅಧಿಕಾರಿಗಳಿಲ್ಲದೆ ಪರದಾಡಿದ್ದು, ಅಧಿಕಾರಿಗಳ ವರ್ತನೆಗೆ ಹಿಡಿ ಶಾಪ ಹಾಕಿದ್ದಾರೆ. ಅಲ್ಲದೆ ಕಚೇರಿ ವೇಳೆಯಲ್ಲಿ ಹುಟ್ಟುಹಬ್ಬ ಅಚರಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ತಹಸೀಲ್ದಾರ್ ಸ್ಪಷ್ಟನೆ
ಕಚೇರಿ ಎಲ್ಲಾ ಸಿಬ್ಬಂದಿ ಮಧ್ಯಾಹ್ನ ಊಟ ಮುಗಿಸಿ ಕರ್ತವ್ಯಕ್ಕೆ ಹಾಜರಾಗಿದ್ದೇವೆ. ಉದ್ದೇಶಪೂರ್ವಕವಾಗಿ ಇಲ್ಲ ಸಲ್ಲದ ಸುಳ್ಳು ವದಂತಿ ಹಬ್ಬಿಸಿದ್ದಾರೆ ಎಂದು ತಹಸೀಲ್ದಾರ್ ಎಸ್.ಎಲ್. ವಿಶ್ವನಾಥ್ ಸ್ವಷ್ಟಪಡಿಸಿದರು.
ಆಕ್ಟೋಬರ್‌ನಲ್ಲಿ ನಗರಸಭೆ ಚುನಾವಣೆ ಸುಸೂತ್ರವಾಗಿ ನಡೆಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಚೇರಿಯ ಎಲ್ಲ ಸಿಬ್ಬಂದಿ ಸೇರಿ ಮಧ್ಯಾಹ್ನ ಊಟ ಮಾಡಿ ಕಚೇರಿಯಲ್ಲಿ ಎಲ್ಲರೂ ಹಾಜರಾಗಿದ್ದೇವೆ. ಯಾರೋ ಉದ್ದೇಶಪೂರ್ವಕವಾಗಿ ಮಾಧ್ಯಮದವರಿಗೆ ಸುಳ್ಳು ಮಾಹಿತಿ ಕೊಟ್ಟಿದ್ದಾರೆ ಎಂದು ತಹಸೀಲ್ದಾರ್ ಎಸ್.ಎಲ್. ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ.
ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯ ಹುಂಡಿ ಒಡೆದು ಲಕ್ಷ ಲಕ್ಷ ಕಳ್ಳತನ