ಹೈದ್ರಾಬಾದ್ ಕಾರ್ಮಿಕರಿಗೆ ನೆರವಾಗಿಮಾನವೀಯತೆ ಮೆರೆದ ಕರ್ನಾಟಕ ಪೊಲೀಸರು

By Kannadaprabha NewsFirst Published Oct 24, 2021, 1:00 PM IST
Highlights
  • ಪೊಲೀಸ್‌ ಇಲಾಖೆ ಅಂದರೆ ಸಾಮಾನ್ಯವಾಗಿ ಸಾರ್ವಜನಿಕರಲ್ಲಿ ನಕಾರತ್ಮಕ ಅಂಶಗಳೇ ಹೆಚ್ಚು ಚರ್ಚೆಗೆ ಬರುತ್ತೇವೆ
  • ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಸಂಕಷ್ಟದಲ್ಲಿದ್ದ ವಲಸೆ ಕಾರ್ಮಿಕರಿಗೆ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.

 ಚಿಕ್ಕಬಳ್ಳಾಪುರ (ಅ.24):  ಪೊಲೀಸ್‌ ಇಲಾಖೆ (Police Department) ಅಂದರೆ ಸಾಮಾನ್ಯವಾಗಿ ಸಾರ್ವಜನಿಕರಲ್ಲಿ ನಕಾರತ್ಮಕ ಅಂಶಗಳೇ ಹೆಚ್ಚು ಚರ್ಚೆಗೆ ಬರುತ್ತೇವೆ. ಆದರೆ ಅವರಲ್ಲಿಯೂ ಮಾನವೀಯತೆ ಇದೆ ಎಂಬುದನ್ನು ಚಿಕ್ಕಬಳ್ಳಾಪುರ (Chikkaballapura) ನಗರ ಠಾಣೆ ಪೊಲೀಸರು (Police) ಸಂಕಷ್ಟದಲ್ಲಿದ್ದ ವಲಸೆ ಕಾರ್ಮಿಕರಿಗೆ (Labour) ನೆರವಾಗಿ ಮಾನವೀಯತೆ ಮೆರೆದಿದ್ದಾರೆ.

ಲಾರಿ ಚಾಲಕನನ್ನು ನಂಬಿ ಹೈದ್ರಾಬಾದ್‌ (Hyderabad) ಹೋಗಲು ಲಾರಿ ಹತ್ತಿದ್ದ ಮಾಹಾರಾಷ್ಟ್ರ (Maharshtra) ಮೂಲದ 6 ಮಂದಿಯನ್ನು ಲಾರಿ ಚಾಲಕ ಶನಿವಾರ ಚಿಕ್ಕಬಳ್ಳಾಪುರದ ವಾಪಸಂದ್ರದ ಮೇಲು ಸೇತುವೆ ಸಮೀಪ ಬಿಟ್ಟು ಹೊರಟಿದ್ದಾನೆ. ಈ ವೇಳೆ ಕೈಯಲ್ಲಿ ಕಾಸಿಲ್ಲದೇ ಹಸಿವು ನೀಗಿಸಿಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರ ಬಳಿ ಅಂಗಲಾಚುತ್ತಿದ್ದ ಕಾರ್ಮಿಕರಿಗೆ ಚಿಕ್ಕಬಳ್ಳಾಪುರ ಪೊಲೀಸರು (police) ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

'ಮಂಗಳೂರು ಗೋಲಿಬಾರಲ್ಲಿ ಪೊಲೀಸರದು ತಪ್ಪಿಲ್ಲ'

ವಲಸೆ ಕಾರ್ಮಿಕರಲ್ಲಿ (Migrant workers) ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರಿದ್ದರು. ಇವರೆಲ್ಲರೂ ಹಸಿವೆಯಿಂದ ತೀವ್ರ ಕಂಗಾಲಾಗಿದ್ದರು. ಲಾರಿ ಚಾಲಕನ ಮೋಸದಿಂದ ದಿಕ್ಕು ತೋಚದಂತೆ ಇದ್ದ ಇವರಿಗೆ ಹೈದ್ರಾಬಾದ್‌ಗೆ ತೆರಳಲು ಹಣ ಸಹ ಇಲ್ಲದ ಪರದಾಡುತ್ತಿದ್ದರು. ನಗರದ ಬಾಗೇಪಲ್ಲಿ (Bagepalli )ವೃತ್ತದಲ್ಲಿ ತಮಗೆ ಸಹಾಯ ಮಾಡುವಂತೆ ಸಾರ್ವಜನಿಕರಲ್ಲಿ ಬೇಡುತ್ತಿದ್ದರು.

ಮಲ್ಲೇಶ್ವರ ಪೊಲೀಸರ ಕೈಗೆ ಸಿಕ್ಕಿಬಿದ್ದವರ ಬಳಿ ಇತ್ತು 17 ಕೋಟಿ ರೂ. ಅಂಬರ್‌ ಗ್ರೀಸ್ !

ಇದನ್ನು ಗಮನಿಸಿದ ಹೈವೇ ಬಂದೋಬಸ್ತ್ ನಲ್ಲಿದ್ದ ಎಎಸ್‌ಐ (ASI) ಕೃಷ್ಣಪ್ಪ, ಪೊಲೀಸ್‌ ಪೇದೆ ಸಾದಿಕ್‌, ಚಾಲಕ ಹುರ್ಗಾ, ಮುಖ್ಯ ಪೇದೆ ರೂಪನಾಥ್‌ ಅವರು ಆರು ಮಂದಿಗೂ ತಮ್ಮ ಸ್ವಂತ ಹಣದಲ್ಲಿ ಆಹಾರದ ವ್ಯವಸ್ಥೆ ಮಾಡಿದರಲ್ಲದೆ, ಹೈದರಾಬಾದ್‌ಗೆ ತೆರಳಲು ವಾಹನದ ವ್ಯವಸ್ಥೆ ಮಾಡಿ ಆ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಪೊಲೀಸ್ ಇಲಾಖೆಗೆ ಕೊಡುಗೆ

 

ಕಳೆದರಡು ವರ್ಷಗಳಲ್ಲಿ ಪೊಲೀಸ್ (Police) ಇಲಾಖೆಗೆ 200 ಕೋಟಿ ರು. ಅನುದಾನವನ್ನು ರಾಜ್ಯ ಸರ್ಕಾರ (karnataka govt) ನೀಡಿ ದ್ದು, ಸ್ವಾತಂತ್ರ್ಯ (Freedom) ಬಂದ ನಂತರದಲ್ಲಿ ಇಷ್ಟು ಮೊತ್ತದ ಹಣವನ್ನು ಯಾರ ಕಾಲದಲ್ಲಿಯೂ ನೀಡಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga jnanendra) ಹೇಳಿದರು. 

ಮಂಡ್ಯದ (Mandya) ಡಿಎಆರ್ ಆವರಣದಲ್ಲಿ 36 ಪೊಲೀಸ್ ವಸತಿ ಗೃಹ, ಡಿಎಆರ್ ಆಡಳಿತ ಕಚೇರಿ ಕಟ್ಟಡ, ಶ್ವಾನದಳ, ಸೆಂಟ್ರಲ್ ಪೊಲೀಸ್ (Police) ಠಾಣೆ ಕಟ್ಟಡಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಪ್ರಸಕ್ತ ವರ್ಷ ರಾಜ್ಯದಲ್ಲಿ 100 ಪೊಲೀಸ್ ಠಾಣೆಗ ಳನ್ನು ನಿರ್ಮಿಸಲಾಗಿದೆ. 

ಇದುವರೆಗೆ ವರ್ಷಕ್ಕೆ 4 ರಿಂದ 5 ಪೊಲೀಸ್ ಠಾಣೆಗಳು ಮಾತ್ರ ನಿರ್ಮಾಣ ವಾಗುತ್ತಿದ್ದವು ಎಂದರು. ಪೊಲೀಸ್ ವಸತಿ ಗೃಹದ (Police Quarters) ಸಮಸ್ಯೆ ತೀವ್ರವಾಗಿರುವು ದನ್ನು ಮನಗಂಡು 11 ಸಾವಿರ ವಸತಿಗೃಹಗಳನ್ನು ಪೂರ್ಣಗೊಳಿಸಿ ಹಸ್ತಾಂತರಿಸಲಾಗಿದೆ. ಇನ್ನೂ 10 ಸಾವಿರ ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲು ನಿರ್ಧರಿಸಿ ಟೆಂಡರ್ ಕರೆಯಲಾಗಿದೆ. 

click me!