ಚಿಕ್ಕಬಳ್ಳಾಪುರ: ಪಬ್‌ ಜೀ ಗೇಮ್‌ಗೆ 15ರ ಬಾಲಕ ಬಲಿ

By Suvarna News  |  First Published Dec 24, 2019, 12:29 PM IST

ಈ ಹಿಂದೆ ಹಲವರ ಸಾವಿಗೆ ಕಾರಣವಾಗಿ ಸದ್ದು ಮಾಡಿದ್ದ ಬ್ಲೂ ವೇಲ್‌ ಗೇಮ್‌ನ ನಂತರ ಇದೀಗ ಯುವ ಜನರು ಪಬ್‌ ಜೀ ಗೇಮ್‌ ವ್ಯಸನಿಗಳಾಗುತ್ತಿದ್ದಾರೆ. ಚಿಕ್ಕಬಳ್ಳಾಪುರದ ಬಾಲಕನೊಬ್ಬ ಪಬ್‌ ಜೀ ಗೇಮ್‌ಗೆ ಬಲಿಯಾಗಿದ್ದಾನೆ.


ಚಿಕ್ಕಬಳ್ಳಾಪುರ(ಡಿ.24): ಇಂಟರ್‌ನೆಟ್‌ ಗೇಮ್‌ಗಳಿಗೆ ಅಡಿಕ್ಟ್‌ ಆಗಿ ಯುವ ಜನರು ಪ್ರಾಣ ಕಳೆದುಕೊಳ್ಳವ ಘಟನೆ ನಡೆಯುತ್ತಲೇ ಇರುತ್ತದೆ. ಈ ಬಗ್ಗೆ ಎಷ್ಟೇ ಎಚ್ಚರಿಕೆ ನೀಡಿದರೂ ಹೊಸ ಗೇಮ್‌ಗಳು ಬಮದಾಗ ಮಕ್ಕಳು ಮತ್ತೆ ಹೊಸ ಇಂಟರ್‌ನೆಟ್‌ ಗೇಮ್‌ಗಳ ವ್ಯಸನಿಗಳಾಗಿಬಿಡುತ್ತಾರೆ.

ಪಬ್ ಜಿ ಗೇಮ್ ಆಡಲು ಮೊಬೈಲ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಮನನೊಂದಿರುವ ಬಾಲಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ  ಚೇಳೂರು ತಾಲೂಕಿನ ಮಂಡ್ಯಂಪಲ್ಲಿಯಲ್ಲಿ ನಡೆದಿದೆ.

Tap to resize

Latest Videos

undefined

ದಂಡ ವಸೂಲಿಗೂ ಸೈ, ರಸ್ತೆ ರಿಪೇರಿಗೂ ಸೈ..! ಪೊಲೀಸರಿಗೆ ಸಾರ್ವಜನಿಕರ ಮೆಚ್ಚುಗೆ

ಯಶ್ವಂತ್ ಮೃತಪಟ್ಟ ಬಾಲಕ.  ತನ್ನ ಅಕ್ಕಳಾದ ಅಖಿಲಳ ಬಳಿ ಮೊಬೈಲ್ ಕೇಳಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ಹೆಚ್ಚು ಮೊಬೈಲ್ ಬಳಸಬಾರದು ಎಂದು ಬುದ್ಧಿ ಮಾತು ಹೇಳಿದ್ದರು.

ಇಷ್ಟಕ್ಕೆ ಕೋಪಗೊಂಡ ಯಶ್ವಂತ್ ಗಿಡಗಳಿಗೆ ಸಿಂಪಡಿಸಲು ತಂದಿಟ್ಟಿದ್ದ ಕೀಟನಾಶಕ ಸೇವಿಸಿದ್ದ. ಕೂಡಲೇ ಆತನನ್ನು ಚೇಳೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದ್ರೆ ವೇಳೆ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾನೆ.

ಮಂಗಳೂರು ಗಲಭೆ: ಪೊಲೀಸ್‌ ಪ್ರವೇಶ ಸಮರ್ಥಿಸಿಕೊಂಡ ಹೈಲೆಂಡ್ ಆಸ್ಪತ್ರೆ

click me!