ಬಿಜೆಪಿಯವರ ಕೆಲಸ ಮಾತ್ರ ಮಾಡ್ತೀರಾ ಹೇಳಿ ಸ್ವಾಮಿ : ರೇವಣ್ಣ ಅವಾಜ್ !

Kannadaprabha News   | Asianet News
Published : Dec 24, 2019, 12:04 PM IST
ಬಿಜೆಪಿಯವರ ಕೆಲಸ ಮಾತ್ರ ಮಾಡ್ತೀರಾ ಹೇಳಿ ಸ್ವಾಮಿ :  ರೇವಣ್ಣ ಅವಾಜ್ !

ಸಾರಾಂಶ

ಮಾಜಿ ಸಚಿವ ಎಚ್ ಡಿ ರೇವಣ್ಣ ಫುಲ್ ಗರಂ ಆಗಿ ಜಿಲ್ಲಾಧಿಕಾರಿಗೆ ಅವಜ್ ಹಾಕಿದ್ದಾರೆ. ನೀವೇನು ಬಿಜೆಪಿಯವರು ಹೇಳಿದ ಕೆಲಸ ಮಾತ್ರ ಮಾಡ್ತೀರಾ ಹೇಳಿ ಸ್ವಾಮಿ ಎಂದು ಹಾಸನ ಜಿಲ್ಲಾಧಿಕಾರಿಗೆ ತರಾಟೆ ತೆಗೆದುಕೊಂಡಿದ್ದಾರೆ. 

ಹಾಸನ [ಡಿ.24]:  ಹೊಳೆನರಸೀಪುರ ಕ್ಷೇತ್ರವನ್ನೆ ಟಾರ್ಗೇಟ್‌ ಮಾಡಿ ಅಭಿವೃದ್ಧಿ ಕೆಲಸಗಳು ಏಕೆ ವಿಳಂಬವಾಗುತ್ತಿದೆ ಎಂದು ಎಚ್‌.ಡಿ.ರೇವಣ್ಣ ಆರೋಪಿಸಿ ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಅವರಿಗೆ ಅವಾಜ್‌ ಹಾಕಿದರು.

ಜಿಲ್ಲಾಧಿಕಾರಿಯವರು ಬರುವ ಮೊದಲೆ ಎಚ್‌.ಡಿ.ರೇವಣ್ಣ ಆವರಣದಲ್ಲಿ ಬಂದು ಕಾರಿನಲ್ಲಿ ಕುಳಿತಿದ್ದರು. ಮಾಹಿತಿ ತಿಳಿದ ಡಿಸಿ ಆರ್‌.ಗಿರೀಶ್‌ ಕಚೇರಿಯಿಂದ ಹೊರಗೆ ಬಂದರು. ತಕ್ಷಣ ಒಳಗೆ ಬನ್ನಿ ಎಂದು ಕರೆದರೂ ಬಾರದೆ ಕಚೇರಿ ಹೊರಗೆ ಮಾತನಾಡಿ ತರಾಟೆಗೆ ತೆಗೆದುಕೊಂಡರು.

ಹೊಳೆನರಸೀಪುರದ 12 ಪುರಸಭೆ ಸದಸ್ಯರು ಕೂಡ ಸ್ಥಳದಲ್ಲಿದ್ದು, ನಾನು ಪೌರ ಕಾರ್ಮಿಕರ ಕೆಲಸಕ್ಕೆ ಬಂದಿರುವುದು, ದೊಡ್ಡವರ ಕೆಲಸಕ್ಕೆ ಬಂದಿಲ್ಲ ಸ್ವಾಮಿ ಎಂದರು. ನಿಮ್ಮ ಸಹಿಯನ್ನು ಹೇಗೆ ಫೋರ್ಜರಿ ಮಾಡಿದರು ಈ ಬಗ್ಗೆ ಉತ್ತರ ಕೊಡಬೇಕು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅದೇನು ಒಳಗೆ ಕುಳಿತು ಚರ್ಚೆ ಮಾಡುವ ಬನ್ನಿ ಸಾರ್‌.. ಎಂದು ಡಿಸಿ ಕರೆದರೂ ಒಳಗೆ ಹೋಗದ ರೇವಣ್ಣ, ಹೊರಗೆ ನಿಂತು ಕಿಡಿಕಾರಿ ನನ್ನ ಕ್ಷೇತ್ರವನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ದೂರಿದರು.

ನಿಮಗೆ ಏನಾದರೂ ಒತ್ತಡ ಇದೆಯಾ, ಇಲ್ಲವೂ? ಬಿಜೆಪಿಯವರ ಕೆಲಸ ಮಾತ್ರ ಮಾಡುತ್ತೀರಾ ಹೇಳಿ ಸ್ವಾಮಿ ಎಂದು ಪ್ರಶ್ನೆ ಮಾಡಿದರು. ಈಗಾಗಲೇ ಸ್ಲಂ ಜಾಗ ಎಂದು ಡಿಕ್ಲೇರ್‌ ಮಾಡಿದ್ದಾರೆ. ಅದರೆ, ಅವರ ಕೆಲಸ ಮಾಡಿಕೊಡುತ್ತಿಲ್ಲ ಎಂದು ಮಾತಿನ ವಾಗ್ದಾಳಿ ನಡೆಸಿ ಜಿಲ್ಲಾಧಿಕಾರಿಗಳ ಜೊತೆ ಅಸಮಾಧಾನ ಹೊರಹಾಕಿದರು. ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರಿ ಕೆಲಸಗಳಲ್ಲಿ ವಿಳಂಬವಾಗುತ್ತಿದೆ. ಹೊಳೆನರಸೀಪುರ ಪುರಸಭೆ ಸದಸ್ಯರ ಜೊತೆ ಡಿಸಿ ಕಚೇರಿ ಎದುರು ಧರಣಿಗೆ ನಿರ್ಧಾರ ಮಾಡುವುದಾಗಿ ಹೇಳಿದರು.

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ