ದಂಡ ವಸೂಲಿಗೂ ಸೈ, ರಸ್ತೆ ರಿಪೇರಿಗೂ ಸೈ..! ಪೊಲೀಸರಿಗೆ ಸಾರ್ವಜನಿಕರ ಮೆಚ್ಚುಗೆ

By Suvarna NewsFirst Published Dec 24, 2019, 12:07 PM IST
Highlights

ಪೊಲೀಸರು ಸಿಕ್ಕಾಪಟ್ಟೆ ದಂಡ ಹಾಕ್ತಾರೆ, ಸುಮ್‌ ಸುಮ್ನೆ ಸುಲಿಗೆ ಮಾಡ್ತಾರೆ ಎನ್ನುವ ಆರೋಪ ಮಾಡುವಂತಹ ಸಂದರ್ಭದಲ್ಲಿ ಮೈಸೂರಿನ ಇಬ್ಬರು ಪೊಲೀಸರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಾರ್ವಜನಕರಿಗಾಗಿ ಕೆಲಸ ಮಾಡಿದ ಪೊಲೀಸರು ಇತರರಿಗೆ ಮಾದರಿಯಾಗಿದ್ದಾರೆ.

ಮೈಸೂರು(ಡಿ.24): ಪೊಲೀಸರು ಸಿಕ್ಕಾಪಟ್ಟೆ ದಂಡ ಹಾಕ್ತಾರೆ, ಸುಮ್‌ ಸುಮ್ನೆ ಸುಲಿಗೆ ಮಾಡ್ತಾರೆ ಎನ್ನುವ ಆರೋಪ ಮಾಡುವಂತಹ ಸಂದರ್ಭದಲ್ಲಿ ಮೈಸೂರಿನ ಇಬ್ಬರು ಪೊಲೀಸರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಾರ್ವಜನಕರಿಗಾಗಿ ಕೆಲಸ ಮಾಡಿದ ಪೊಲೀಸರು ಇತರರಿಗೆ ಮಾದರಿಯಾಗಿದ್ದಾರೆ.

ದಂಡ ವಸೂಲಿಗೂ ಸೈ, ರಸ್ತೆ ಸರಿಪಡಿಸೋಕ್ಕೂ ಸೈ ಎಂದಿದ್ದಾರೆ ಮೈಸೂರು ಪೊಲೀಸರು. ಮಾನವೀಯತೆ ಮೆರೆದ ಸಾಂಸ್ಕೃತಿಕ ನಗರಿ‌ ಸಂಚಾರಿ ಪೊಲೀಸ್ ಸಿಬ್ಬಂದಿ ಯಾರೋ ಅರೆಬರೆ ಮಾಡಿಟ್ಟಿದ್ದ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದ್ದಾರೆ.

ಸಂಪುಟ ವಿಸ್ತರಣೆ: ಸಂತೋಷವಾಗಿದ್ದೇನೆ, ಆ ಮಾತು ಈಗೇಕೆ ಎಂದ ಸಚಿವ

ಕೆ. ಆರ್. ಸಂಚಾರಿ ಪೊಲೀಸ್ ಸಿಬ್ಬಂದಿ ಕೆಲಸಕ್ಕೆ ಸಾರ್ವಜನಿಕರಿಂದ ಶಹಬ್ಬಾಸ್ ಗಿರಿ ಸಿಕ್ಕಿದೆ. ಯಾರೋ ಮಾಡಿದ್ದ ಬೇಜಾಬ್ದಾರಿ ಕೆಲಸವನ್ನ‌ ಸರಿಪಡಿಸಿದ ಸಂಚಾರಿ ಪೊಲೀಸ್ ‌ಸಿಬ್ಬಂದಿ ಪೊರಕೆ‌ ಹಿಡಿದು ರಸ್ತೆಯಲ್ಲಿ ಬಿದ್ದಿದ್ದ ಜಲ್ಲಿ ಕಲ್ಲು ಕ್ಲೀನ್ ಮಾಡಿದ್ದಾರೆ.

ಪೇದೆ ಆನಂದ ಮತ್ತು ಸಹ ಸಿಬ್ಬಂದಿ ಮೈಸೂರಿನ ಸರಸ್ವತಿಪುರಂನ‌ ಮೂರನೇ ಅಡ್ಡರಸ್ತೆಯಲ್ಲಿ ಬಿದ್ದಿದ್ದ ಜಲ್ಲಿ ಕಲ್ಲು ಕ್ಲೀನ್ ಮಾಡಿದ್ದಾರೆ. ಕರ್ತವ್ಯದ ಅವಧಿ ಮುಗಿದ ಬಳಿಕವೂ ತಮ್ಮದಲ್ಲದ ಕೆಲಸ ಮಾಡಿದ ಪೇದೆಗಳು ರಸ್ತೆಯಲ್ಲಿ ಬಿದ್ದಿದ್ದ ಜೆಲ್ಲಿಕಲ್ಲು ವಾಹನ ಸವಾರರ ಅಪಘಾತಕ್ಕೆ ಕಾರಣವಾಗುತ್ತೆ ಎಂದು ಕ್ಲೀನ್ ಮಾಡಿದ್ದಾರೆ.

'ಪ್ರತ್ಯೇಕ ಕರ್ನಾಟಕ ರಾಷ್ಟ್ರ ಮಾಡಿದ್ರೆ ನೆಮ್ಮದಿಯಿಂದ ಇರ್ತೀವಿ'..!

ಖಾಸಗಿ ಮಂದಿ ರಸ್ತೆಯಲ್ಲಿ ಬೇಜಾಬ್ದಾರಿಯಿಂದ ಚೆಲ್ಲಿದ್ದ ಜಲ್ಲಿ‌ಕಲ್ಲು ವಾಹನಸವಾರರಿಗೆ ಅಡಚಣೆಯಾಗುತ್ತಿತ್ತು. ಯಾರಿಗೂ ತೊಂದರೆ ಆಗಬಾರದು ಹಾಗೂ ಅಪಘಾತಗಳು ಆಗಬಾರದು ಎಂದು ಸಂಚಾರಿ ಪೊಲೀಸ್ ಸಿಬ್ಬಂದಿ ರಸ್ತೆ ಕ್ಲೀನ್ ಮಾಡಿದ್ದಾರೆ.

ಮೈಸೂರು: JDS ಮುಖಂಡ BJPಗೆ ಸೇರ್ಪಡೆ

click me!