ಎಲ್ಲರೂ ವಿವಿಧ ವಿದ್ಯುತ್ ದೀಪಾಲಂಕಾರ ಮಾಡಿ ವಿಶೇಷವಾಗಿ ಹೊಸ ವರ್ಷವನ್ನು ಸ್ವಾಗತಿಸಿದ್ದರೆ, ಕೊಡಗಿನ ನಾಪೋಕ್ಲಿನ ಜನರಿಗೆ ಆಚರಣೆ, ಬಿಡಿ ಆಚರಣೆಯನ್ನು ಟಿವಿ ಮೂಲಕ ಕಣ್ತುಂಬಿಕೊಳ್ಳುವ ಭಾಗ್ಯವೂ ಸಿಗಲಿಲ್ಲ. ಹೊಸ ವರ್ಷದಂದೇ ವಿದ್ಯುತ್ ಪೂರೈಕೆ ಸ್ಥಗಿತವಾಗಿ ಹೊಸ ವರ್ಷದ ಉತ್ಸಾಹದಲ್ಲಿದ್ದ ಜನ ಕತ್ತಲಲ್ಲಿ ಕಾಲ ಕಳೆದಿದ್ದಾರೆ.
ಮಡಿಕೇರಿ(ಜ.02): ಹೊಸ ವರ್ಷ 2020 ನ್ನು ಅದ್ಧೂರಿಯಾಗಿ ಸ್ವಾಗತಿಸಲು ದೇಶ- ವಿದೇಶಗಳಲ್ಲಿ ವಿಭಿನ್ನ ರೀತಿಯಿಂದ ತಯಾರು ಮಾಡಿಕೊಂಡಿರುವುದನ್ನು ಟಿವಿಯಲ್ಲಿ ನೋಡಿ ಕಣ್ಣತುಂಬಿಕೊಳ್ಳಲು ನಾಪೋಕ್ಲಿನ ಜನತೆ ಕಾತರದಿಂದ ಕಾಯುತ್ತಿದ್ದರು.
ಎಲ್ಲರೂ ವಿವಿಧ ವಿದ್ಯುತ್ ದೀಪಾಲಂಕಾರ ಮಾಡಿ ವಿಶೇಷವಾಗಿ ಹೊಸ ವರ್ಷವನ್ನು ಸ್ವಾಗತಿಸಿದ್ದರೆ, ಕೊಡಗಿನ ನಾಪೋಕ್ಲಿನ ಜನರಿಗೆ ಆಚರಣೆ, ಬಿಡಿ ಆಚರಣೆಯನ್ನು ಟಿವಿ ಮೂಲಕ ಕಣ್ತುಂಬಿಕೊಳ್ಳುವ ಭಾಗ್ಯವೂ ಸಿಗಲಿಲ್ಲ. ಹೊಸ ವರ್ಷದಂದೇ ವಿದ್ಯುತ್ ಪೂರೈಕೆ ಸ್ಥಗಿತವಾಗಿ ಹೊಸ ವರ್ಷದ ಉತ್ಸಾಹದಲ್ಲಿದ್ದ ಜನ ಕತ್ತಲಲ್ಲಿ ಕಾಲ ಕಳೆದಿದ್ದಾರೆ.
ಪ್ರವಾಹದಿಂದ ಹಾನಿ: 8 ವರ್ಷ ಹಳೆಯ ತೂಗು ಸೇತುವೆ ದುರಸ್ತಿಗೆ ಆಗ್ರಹ
ಆದರೆ ನಾಪೋಕ್ಲು ಜನರ ಕಾತರಕ್ಕೆ ಚೆಸ್ಕಾಂ ತಣ್ಣೀರು ಎರಚಿದ್ದು, ನೂತನ ವರ್ಷರಾಂಭಕ್ಕೆ ವಿದ್ಯುತ್ ಪೂರೈಕೆ ನಿಲುಗಡೆ ಮಾಡುವ ಮೂಲಕ ಕತ್ತಲು ಕೊಡಗು ನೀಡಿತು ಎಂದು ಈ ಭಾಗದ ನಾಗರಿಕರು ಆರೋಪಿಸಿದ್ದಾರೆ. ಮಳೆ ಗುಡುಗಿನಂತೆ ಯಾವ ಲಕ್ಷಣಗಳೂ ಇಲ್ಲದಿದ್ದರೂ ವಿದ್ಯುತ್ ಕಡಿತಗೊಳಿಸಿದ್ದ ಇಲಾಖಾ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೂರ್ಯಗ್ರಹಣದ ಸಂದರ್ಭದಲ್ಲೂ ವಿದ್ಯುತ್ ಕಟ್ ಮಾಡಿ ಗ್ರಹಣ ವೀಕ್ಷಣೆಗೂ ಚೆಸ್ಕಾಂ ಅವಕಾಶ ನೀಡಲಿಲ್ಲ ಎಂದು ಈ ಭಾಗದ ನಾಗರಿಕರು ಆರೋಪಿಸುತ್ತಾರೆ.