ಹಾಲು ಖರೀದಿ ದರ ಹೆಚ್ಚಳ : ಎಷ್ಟಾಯ್ತು ಏರಿಕೆ ?

Kannadaprabha News   | Asianet News
Published : Jan 02, 2020, 09:50 AM IST
ಹಾಲು ಖರೀದಿ ದರ ಹೆಚ್ಚಳ : ಎಷ್ಟಾಯ್ತು ಏರಿಕೆ ?

ಸಾರಾಂಶ

ಹಾಲು ಉತ್ಪಾದಕರಿಗೆ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ. ಖರೀದಿ ದರವನ್ನು ಭರ್ಜರಿ ಏರಿಕೆ ಮಾಡಲಾಗಿದೆ. ಇದರಿಂದ ಹೆಚ್ಚಿನ ದರವನ್ನು  ಉತ್ಪಾದಕರು ಪಡೆಯಲಿದ್ದಾರೆ. 

ಹಾಸನ [ಜ.02]: ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ಹಾಲು ಉತ್ಪಾದಕರಿಗೆ ಹಾಸನ ಹಾಲು ಒಕ್ಕೂಟವು ಹೊಸ ವರ್ಷದ ಸಂಭ್ರಮದ ವೇಳೆ ಸಿಹಿ ಸುದ್ದಿ ನೀಡಿದ್ದು, ಹಾಲಿ ಖರೀದಿ ದರವನ್ನು ಪ್ರತಿ ಕೆ.ಜಿ.ಗೆ ಒಂದೂವರೆ ರುಪಾಯಿ ಹೆಚ್ಚಿಸಿದೆ. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಎಚ್‌.ಡಿ.ರೇವಣ್ಣ, ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಹಾಲು ಉತ್ಪಾದಕರಿಂದ ಖರೀದಿಸುವ ಪ್ರತಿ ಕೆ.ಜಿ.ಗೆ ಹಾಲಿಗೆ 1.50 ರು. ಹೆಚ್ಚಿಗೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. 

ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಬಂಪರ್ ಘೋಷಣೆ...

ಇದರಿಂದ ಈಗ ಪ್ರತಿ ಕೆ.ಜಿ. ಹಾಲಿನ ದರ 29 ರು. ಆಗಲಿದ್ದು, ಇದು ರಾಜ್ಯದಲ್ಲೇ ಗರಿಷ್ಠ ದರವಾಗಲಿದೆ ಎಂದರು. ಹಾಲು ಒಕ್ಕೂಟವು ಪ್ರಸಕ್ತ ಸಾಲಿನಲ್ಲಿ 40 ಕೋಟಿ ರು. ಲಾಭ ಗಳಿಸಿದ್ದು, ಅದರಲ್ಲಿ ರೈತರಿಗೆ 25 ಕೋಟಿ ರು. ವಾಪಸ್‌ ನೀಡಲಾಗುವುದು. ದರ ಹೆಚ್ಚಳ ಮೂಲಕ ಮರಳಿ ನೀಡಲಾಗುತ್ತಿದೆ ಎಂದು ಎಚ್.ಡಿ.ರೇವಣ್ಣ ಹೇಳಿದರು.

PREV
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ