ಪುತ್ರನ ಸೋಲಿಸಿದ ದ್ವೇಷದಿಂದ ಮಾತು : ಸುಮಲತಾಗೆ ಕೈ ನಾಯಕ ಬೆಂಬಲ

Kannadaprabha News   | Asianet News
Published : Jul 06, 2021, 04:01 PM ISTUpdated : Jul 06, 2021, 04:04 PM IST
ಪುತ್ರನ ಸೋಲಿಸಿದ ದ್ವೇಷದಿಂದ ಮಾತು : ಸುಮಲತಾಗೆ ಕೈ ನಾಯಕ ಬೆಂಬಲ

ಸಾರಾಂಶ

ಮಾಜಿ ಸಿಎಂ ಕುಮಾರಸ್ವಾಮಿ ಮೊದಲು ಮಹಿಳೆಯರಿಗೆ ಗೌರವ ಕೊಡಲಿ   ಮಾಜಿ ಸಚಿವ ಚೆಲುವರಾಯಸ್ವಾಮಿ ಖಡಕ್ ವಾಗ್ದಾಳಿ ಜೆಡಿಎಸ್ ಚಿಹ್ನೆ ಮರೆತು ಕುಮಾರಸ್ವಾಮಿ ಮಾತನಾಡಿದ್ದಾರೆ.

ಮಂಡ್ಯ (ಜು.06): ಮಾಜಿ ಸಿಎಂ ಕುಮಾರಸ್ವಾಮಿ ಮೊದಲು ಮಹಿಳೆಯರಿಗೆ ಗೌರವ ಕೊಟ್ಟು ಮಾತನಾಡುವುದನ್ನು ಕಲಿಯಲಿ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.

ಸೋಮವಾರ ಮಂಡ್ಯದಲ್ಲಿ ಮಾತನಾಡಿದ ಕೈ ಮುಖಂಡ ಚೆಲುವರಾಯಸ್ವಾಮಿ, ಮಲಗಿಸಿದರೆ ಸರಿಹೋಗುತ್ತದೆ ಎನ್ನುವ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು ಹೆಣ್ಣಿಗೆ  ಗೌರವ ಕೊಡುವುದು ಈ ನೆಲದ ಸಂಸ್ಕೃತಿ.

ಬಹಿರಂಗ ಹೇಳಿಕೆ ಕೊಡಲಿ : ಎಚ್‌ಡಿಕೆ - ದೇವೇಗೌಡರಿಗೆ ಕೈ ನಾಯಕ ಸವಾಲ್

ಜೆಡಿಎಸ್ ಚಿಹ್ನೆ ಮರೆತು ಕುಮಾರಸ್ವಾಮಿ ಮಾತನಾಡಿದ್ದಾರೆ. ಅಲ್ಲಿರುವುದು ಮಹಿಳೆಯೇ. ಒಬ್ಬ ಮಾಜಿ ಮುಖ್ಯಮಂತ್ರಿಯೊಬ್ಬರ ಬಾಯಿಂದ ಇಂತಹ ಕೀಳು ಮಾತು ಯಾರೂ ನಿರೀಕ್ಷಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದು.

ಹೆಣ್ಣಿಗೆ ಅಗೌರವದಿಂದ ಮಾತನಾಡುವುದು ಅವರಿಗೆ ಹೊಸದೇನಲ್ಲ. ಹಿಂದೊಮ್ಮೆ  ಹಿಂದೊಮ್ಮೆ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆ ಬಗ್ಗೆಯೂ ಲಘುವಾಗಿ ಮಾತನಾಡಿದ್ದರು. ಈಗ ಲೋಕಸಭಾ ಚುನಾವಣೆಯಲ್ಲಿ ಪುತ್ರನನ್ನು ಸೋಲಿಸಿದರೆಂಬ ಕಾರಣವನ್ನು ಮುಂದಿಟ್ಟುಕೊಂಡು ರಾಜಕೀಯ ದ್ವೇಷ ಸಾಧಿಸುತ್ತಾ ಮಹಿಳಾ ಸಂಸದೆ ಬಗ್ಗೆ ಅಗೌರವ ತರುವ ಮಾತನಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ನಾಯಕ ಚೆಲುವರಾಯಸ್ವಾಮಿ ಹೇಳಿದರು

PREV
click me!

Recommended Stories

ಕಸದ ರಾಶಿಯಿಂದ ಹತ್ತಿಕೊಂಡ ಬೆಂಕಿ ನೀಲಗಿರಿ ತೋಪಿಗೆ ; ಸ್ಥಳೀಯರ ಸಾಹಸದಿಂದ ತಪ್ಪಿದ ಭಾರಿ ಅನಾಹುತ!
ರಸ್ತೆ ಮೇಲೆಯೇ ಕಾರ್ ಪಾರ್ಕ್ ಮಾಡಿ ಹೋದ ಆಸಾಮಿ! ಟ್ರಾಫಿಕ್ ಜಾಮ್, ಸಾರ್ವಜನಿಕರು ಸೇರಿ ಏನು ಮಾಡಿದ್ರು ನೋಡಿ!