* ಜುಲೈ 7 ರಿಂದ ಕೃಷ್ಣಾನ ಭಕ್ತರಿಗೆ ಗುಡ್ ನ್ಯೂಸ್
* ಕೋವಿಡ್ ಹಿನ್ನಲೆ ಕ್ಲೋಸ್ ಆಗಿದ್ದ ಇಸ್ಕಾನ್ ಟೆಂಪಲ್ ಓಪನ್
* ಎರಡು ತಿಂಗಳ ಬಳಿಕ ಒಪನ್ ಆಗುತ್ತಿದೆ ಇಸ್ಕಾನ್ ದೇವಸ್ಥಾನ
ಬೆಂಗಳೂರು, (ಜುಲೈ.06): ಕೋವಿಡ್ ಹಿನ್ನಲೆಯಲ್ಲಿ ಎರಡು ತಿಂಗಳಯ ಕಾಲ ಬಂದ್ ಆಗಿದ್ದ ರಾಜ್ಯದ ದೇವಸ್ಥಾನಗಳು ಇದೀಗ ಓಪನ್ ಆಗಿವೆ. ಕೋವಿಡ್ ಮಾರ್ಗಸೂಚಿಯಂತೆ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗಿದೆ.
ಅದರಂತೆ ನಾಳೆಯಿಂದ (ಜುಲೈ.07) ಅಧಿಕೃತವಾಗಿ ಬೆಂಗಳೂರಿನ ಇಸ್ಕಾನ್ ದೇವಾಲಯ ಓಪನ್ ಆಗಲಿದೆ. ಬೆಳಗ್ಗೆ 8:30 ರಿಂದ ಮಧ್ಯಾಹ್ನ 12:30ರವರೆಗೆ, ಮತ್ತೆ ಸಂಜೆ 4 ಗಂಟೆಯಿಂದ ರಾತ್ರಿ 8ರವರೆಗೆ ದೇಗುಲದ ಬಾಗಿಲು ತೆರೆದಿರಲಿದೆ.
undefined
ದೇವಸ್ಥಾನ ತೆರೆಯಲು ಸರ್ಕಾರ ಅನುಮತಿ: ಕಂಡೀಷನ್ಸ್ ಅಪ್ಲೈ
ಭಕ್ತರಿಗೆ ಪ್ರಾರ್ಥನೆ ಮತ್ತು ದರ್ಶನಕ್ಕಷ್ಟೆ ಅವಕಾಶ ನೀಡಲಾಗಿದೆ. ಕೋವಿಡ್ ಮಾರ್ಗಸೂಚಿಗಳನ್ನ ಅನುಸರಿಸಿ ಬರುವಂತೆ ಭಕ್ತರಿಗೆ ಮನವಿ ಮಾಡಲಾಗಿದೆ. ಎಂದಿನಂತೆ ದೇಗುಲದಲ್ಲಿ ಉಚಿತ ಪ್ರಸಾದ ವಿತರಿಸಲಾಗುತ್ತೆ.
ದೇವಸ್ಥಾನದ ಜೊತೆಗೆ ಕಲ್ಯಾಣ ಮಂಟಪ ಕೂಡ ಓಪನ್ ಇರುತ್ತೆ. ಮದುವೆ ಕಾರ್ಯಕ್ರಮಕ್ಕೆ ಕಲ್ಯಾಣ ಮಂಟಪ ತೆರೆದಿರಲಿದ್ದು, 100 ಜನರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ.
ಆದ್ರೆ, ಇಸ್ಕಾನ್ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಮದುವೆಗೆ ಮಾತ್ರ ಅವಕಾಶವಿದ್ದು. ಕೋವಿಡ್ ಗೈಡ್ ಲೈನ್ಸ್ ಪ್ರಕಾರ ಮದುವೆಗೆ 100 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.