3 ವರ್ಷದ ಮಗುವನ್ನು ಹೊತ್ತೊಯ್ದಿದ್ದ ಚಿರತೆ ಸೆರೆ

By Kannadaprabha News  |  First Published May 14, 2020, 3:29 PM IST

ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿಗೆ ಚಿರತೆ ಸೆರೆಯಾದ ಘಟನೆ ತಾಲೂಕಿನ ಮಾಡಬಾಳ್‌ ಹೋಬಳಿ ಕದರಯ್ಯನಪಾಳ್ಯ ಗ್ರಾಮದಲ್ಲಿ ನಡೆದಿದೆ.


ಮಾಗಡಿ(ಮೇ 14): ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿಗೆ ಚಿರತೆ ಸೆರೆಯಾದ ಘಟನೆ ತಾಲೂಕಿನ ಮಾಡಬಾಳ್‌ ಹೋಬಳಿ ಕದರಯ್ಯನಪಾಳ್ಯ ಗ್ರಾಮದಲ್ಲಿ ನಡೆದಿದೆ.

ಮೇ 9 ರ ಬೆಳಿಗಿನ ಜಾವ ತಾಲೂಕಿನ ಕದರಯ್ಯನಪಾಳ್ಯ ಗ್ರಾಮದಲ್ಲಿ ಮನೆಯೊಳಕ್ಕೆ ನುಗ್ಗಿದ ಚಿರತೆ ಹೇಮಂತ್‌ಕುಮಾರ್‌ ಎನ್ನುವ 3 ವರ್ಷದ ಬಾಲಕನನ್ನು ಹೊತ್ತುಕೊಂಡು ಹೋಗಿ ತಿಂದುಹಾಕಿತ್ತು. ಆ ಸಮಯದಲ್ಲಿ ಅರಣ್ಯ ಸಚಿವ ಆನಂದ್‌ಸಿಂಗ್‌, ಸಂಸದ ಡಿ.ಕೆ.ಸುರೇಶ್‌ ಹಾಗೂ ಶಾಸಕ ಎ.ಬಾಲಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಬಳಿಕ ಅರಣ್ಯ ಇಲಾಖೆಯವರು ಚಿರತೆ ಹಿಡಿಯಲು ಬೋನ್‌ ಇರಿಸಿದ್ದರು.

Latest Videos

undefined

ರಾತ್ರಿ ಬೋನಿಗೆ ಬಿದ್ದ ಚಿರತೆ

ಕದರಯ್ಯನಪಾಳ್ಯ ಬಳಿ ಅರಣ್ಯ ಇಲಾಖೆಯವರು ಇರಿಸಿದ್ದ ಬೋನ್‌ನಲ್ಲಿ ಮಂಗಳವಾರ ರಾತ್ರಿ ಚಿರತೆ ಸೆರೆಯಾಗಿರುವುದನ್ನು ಕಂಡಿದ್ದ ಗ್ರಾಮಸ್ಥರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದು, ಸ್ಥಳಕ್ಕೆ ಧಾವಿಸಿ ಬಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆಯನ್ನು ದೂರದ ಕಾಡಿಗೆ ಬಿಟ್ಟಿದ್ದಾರೆ. ಈಗ ಸೆರೆಯಾಗಿರುವ ಚಿರತೆ ಮಗುವನ್ನು ಹೋತ್ತೋಯ್ದಿರುವುದಾ ಎನ್ನುವ ಅನುಮಾನ ಎಲ್ಲರನ್ನೂ ಕಾಡುತ್ತಿದೆ.

ಅರಣ್ಯಕ್ಕೆ ಚಿರತೆ:

ಈ ಬಗ್ಗೆ ವಲಯ ಅರಣ್ಯಾಧಿಕಾರಿ ಪುಷ್ಪಲತಾ ಮಾತನಾಡಿ, ಕದರಯ್ಯನಪಾಳ್ಯ ಸುತ್ತಮುತ್ತಲಿನ ಪ್ರದೇಶದಲ್ಲಿ ಒಟ್ಟು 6 ಬೋನ್‌ ಇರಿಸಿದ್ದೇವು, ಮಂಗಳವಾರ ರಾತ್ರಿಯ ಸಮಯ 2 ವರ್ಷ ವಯಸ್ಸಿನ ಗಂಡು ಚಿರತೆ ಸೆರೆಯಾಗಿದೆ.

ರಾಮನಗರ: ಮಲಗಿದ್ದ ಮಗು ಹೊತ್ತೊಯ್ದು ತಿಂದು ಭಕ್ಷಿಸಿದ ಚಿರತೆ..!

ಮಗುವನ್ನು ಹೋತ್ತೋಯ್ದ ಚಿರತೆಯ ಪಾದದ ಗುರುತಿಗೂ, ಈಗ ಸೆರೆಯಾಗಿರುವ ಚಿರತೆಯ ಪಾದದ ಗುರುತಿಗೆ ಹೊಲಿಕೆಯಾಗುವಂತೆ ಕಂಡು ಬರುತ್ತಿದ್ದು ದೂರದ ಅರಣ್ಯಕ್ಕೆ ಚಿರತೆಯನ್ನು ಬಿಟ್ಟಿದ್ದೇವೆ ಎಂದು ತಿಳಿಸಿದರು.

click me!