ನರಭಕ್ಷಕ ಚಿರತೆಗಳ ಶೂಟೌಟ್, ಶೀಘ್ರ ಅನುಮತಿ: ಆನಂದ್‌ ಸಿಂಗ್‌

By Kannadaprabha NewsFirst Published Jan 3, 2021, 11:02 AM IST
Highlights

ನರಭಕ್ಷಕ ಚಿರತೆಗಳ ಕಾಟ | ಜನರಲ್ಲಿ ಭೀತಿ | ರಭಕ್ಷಕ ಚಿರತೆಗಳ ಶೂಟೌಟ್‌ ಅನಿವಾರ್ಯ: ಆನಂದ್‌ ಸಿಂಗ್‌

ಗಂಗಾವತಿ(ಜ.03): ನರಭಕ್ಷಕ ಚಿರತೆಗಳನ್ನು ಶೂಟೌಟ್‌ ಮಾಡಲು ಸರ್ಕಾರದ ಅನುಮತಿ ಪಡೆಯಲಾಗುವುದು. ಚಿರತೆ ಸೆರೆ ಹಿಡಯಲು ಅರಣ್ಯ ಇಲಾಖೆ ನಡೆಸಿದ ಪ್ರಯತ್ನಗಳು ವಿಫಲವಾಗುತ್ತಿವೆ. ಆದ್ದರಿಂದ ನರಭಕ್ಷಕ ಚಿರತೆಗಳ ಶೂಟೌಟ್‌ ಮಾಡುವುದೊಂದೇ ದಾರಿ ಎಂದು ಅರಣ್ಯ ಸಚಿವ ಆನಂದ್‌ ಸಿಂಗ್‌ ಹೇಳಿದ್ದಾರೆ.

ತಾಲೂಕಿನ ವಿರೂಪಾಪುರಗಡ್ಡೆಯಲ್ಲಿ ಶುಕ್ರವಾರ ಚಿರತೆ ದಾಳಿಯಿಂದ ಯುವಕ ಮೃತಪಟ್ಟಹಿನ್ನೆಲೆಯಲ್ಲಿ ಕರಿಯಮ್ಮನಗಡ್ಡಿ ಪ್ರದೇಶದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದ ಪ್ರದೇಶಕ್ಕೆ ಭೇಟಿ ನೀಡಿದ ಸಚಿವರು, ಚಿರತೆಗಳ ಕೊಲ್ಲಲು ಸರ್ಕಾರದ ಅನುಮತಿ ಅಗತ್ಯವಿದೆ. ಈ ಪ್ರದೇಶದಲ್ಲಿ ಚಿರತೆಗಳ ದಾಳಿ ಅವ್ಯಾಹತವಾಗಿದೆ. ಅವುಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಗೆ ಸಂಪೂರ್ಣ ಅಧಿಕಾರ ನೀಡಿ ಆದೇಶ ಮಾಡಲಾಗಿದೆ. ಆದರೂ ಚಿರತೆ ಸಿಗುತ್ತಿಲ್ಲ. ಬೋನಿಗೆ ಬೀಳುತ್ತಿಲ್ಲ. ಆದ್ದರಿಂದ ಇಂತಹ ನರಭಕ್ಷಕ ಚಿರತೆಗಳ ಹತ್ಯೆಗೆ ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದರು.

ಮೊಡವೆ ಹೆಚ್ಚಾಯ್ತೆಂದು ನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

ಆನೆಗಳ ಮೇಲೆ ಕುಳಿತು ಚಿರತೆಗಳ ಶೂಟೌಟ್‌ ಮಾಡಲು ಇಲ್ಲಿ ಸಾಧ್ಯವಾಗುವುದಿಲ್ಲ. ಈ ಭಾಗದಲ್ಲಿ ಬೆಟ್ಟಗುಡ್ಡಗಳೇ ಇರುವುದರಿಂದ ಚಿರತೆ ತಪ್ಪಿಸಿಕೊಳ್ಳುತ್ತದೆ ಎಂದು ಹೇಳಿದರು.

ಚಿರತೆ ದಾಳಿಯಿಂದ ಮೃತಪಟ್ಟಯುವಕನ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 7.5 ಲಕ್ಷ ರು. ಪರಿಹಾರ ನೀಡಲಾಗುವುದು. ಜೊತೆಗೆ ಕುಟುಂಬದ ಸದಸ್ಯರೊಬ್ಬರಿಗೆ ಬಿಸಿಯೂಟ ಅಥವಾ ಅಂಗನವಾಡಿ ಕೇಂದ್ರದಲ್ಲಿ ಕೆಲಸ ನೀಡಲಾಗುವುದು ಎಂದು ಭರವಸೆ ನೀಡಿದರು.

click me!