ಮೊಡವೆ ಹೆಚ್ಚಳವಾಯಿತೆಂದು ನೊಂದು ವಿದ್ಯಾರ್ಥಿನಿ ಆತ್ಮಹತ್ಯೆ | ಚೂಡಿದಾರದ ಶಾಲ್‌ನಿಂದ ನೇಣು ಬಿಗಿದು ಆತ್ಮಹತ್ಯೆ
ಪುತ್ತೂರು(ಜ.03): ಮುಖದಲ್ಲಿ ಮೊಡವೆಗಳು ಹೆಚ್ಚದ ಕಾರಣಕ್ಕೆ ಮನನೊಂದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ನೇರೋಳ್ತಡ್ಕದಲ್ಲಿ ನಡೆದಿದೆ.
ಕೆಯ್ಯೂರು ಕರ್ನಾಟಕ ಪಬ್ಲಿಕ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಆಗಿರುವ ದಿವ್ಯಾ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೊದಲ ದಿನವಾದ ಶುಕ್ರವಾರ ಶಾಲೆಗೆ ಹೋಗಿ ಬರುವುದಾಗಿ ಮನೆಯಿಂದ ಹೊರಟ ದಿವ್ಯಾ, ಶಾಲೆಗೆ ಹೋಗದೆ ಮನೆಯ ಪಕ್ಕದಲ್ಲಿರುವ ಗೇರು ಗುಡ್ಡೆಯಲ್ಲಿ ಮರವೊಂದಕ್ಕೆ ಚೂಡಿದಾರದ ಶಾಲ್‌ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಯರ್ ಫೋನ್ ಖರೀದಿಸೋಕೆ ಬಂದು ಅಂಗಡಿಯನ್ನೇ ಸುಲಿಗೆ ಮಾಡಿದ್ರು
ಇನ್ನು ಮಣಿಪಾಲದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮೊಬೈಲ್‌ಗೆ ಅಡಿಕ್ಟ್ ಆಗಿರುವ ಹುಡುಗನೊಬ್ಬ, ತಾಯಿ ಬೈದರೆಂದು ಸ್ನಾನ ಗೃಹದ ಬಾಗಿಲು ಹಾಕಿ ಕುಳಿತು ಗಂಟೆ ಕಳೆದರೂ ತೆರೆಯದೆ ಮನೆಯವರನ್ನು ಆತಂಕಕ್ಕೀಡು ಮಾಡಿದ ಘಟನೆ ನಡೆದಿದೆ. ನಂತರ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬಾಲಕನನ್ನು ರಕ್ಷಿಸಿದ್ದಾರೆ.
ಮುಖದಲ್ಲಿ ಹೆಚ್ಚು ಮೊಡವೆಗಳು ಇವೆ ಎಂದು ದಿವ್ಯಾ ಸಂಬಂಧಿಕರು ಸೇರಿದಂತೆ ಯಾರ ಮನೆಗೂ ಹೋಗುತ್ತಿರಲಿಲ್ಲ. ಮೊಡವೆ ಹೊತ್ತ ಮುಖದಲ್ಲಿ ಶಾಲೆಗೆ ಹೇಗೆ ಹೋಗುವುದೆಂದು ಮನನೊಂದಿದ್ದಳು ಎಂದು ತಿಳಿದುಬಂದಿದೆ.