ಚಿತ್ರದುರ್ಗ: ಬಾಳೆಕಾಯಿ ಸಿದ್ದೇಶ್ವರ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ

By Web Desk  |  First Published Jul 25, 2019, 10:35 AM IST

ಆಹಾರಕ್ಕಾಗಿ ವನ್ಯ ಜೀವಿಗಳು ನಾಡಿನ ಕಡೆ ಮುಖ ಮಾಡುತ್ತಲೇ ಇರುತ್ತವೆ. ಚಿತ್ರದುರ್ಗದ ಬಾಳೆಕಾಯಿ ಸಿದ್ದೇಶ್ವರ ಬೆಟ್ಟದ ಮೇಲೆ ಚಿರತೆ ಕಾಣಿಸಿಕೊಂಡಿದೆ. ವಾಯ ವಿಹಾರಕ್ಕೆ ಬಂದವರು ಚಿರತೆ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.


ಚಿತ್ರದುರ್ಗ(ಜು.25): ಆಹಾರದ ಕೊರತೆಯಿಂದ ವನ್ಯ ಜೀವಿಗಳೂ ನಾಡಿನತ್ತ ಮುಖ ಮಾಡುತ್ತಿದೆ. ಕಾಡಾನೆ ದಾಳಿಯಂತೂ ಬಹಳ ಸಾಮಾನ್ಯವಾಗಿದ್ದು, ಇದೀಗ ಚಿರತೆಯಂತಹ ಪ್ರಾಣಿಗಳೂ ಆಹಾರವನ್ನರಸಿ ನಾಡಿನತ್ತ ಬರುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.

ಚಿತ್ರದುರ್ಗದ ಬಾಳೆಕಾಯಿ ಸಿದ್ದೇಶ್ವರ ಬೆಟ್ಟದ ಮೇಲೆ ಚಿರತೆ ಕಾಣಿಸಿಕೊಂಡಿದೆ. ಕುರುಮರುಡಿ ಕೆರೆ ಚಂದ್ರವಳ್ಳಿ ಗುಹೆ ಬಳಿ ಬಂಡೆಯ ಮೇಲೆ ಆಹಾರವನ್ನರಸಿ ಬಂದಿದ್ದ ಚಿರತೆ ಪ್ರತ್ಯಕ್ಷವಾಗಿದೆ. ಗ್ರಾಮದ ಬಳಿ ನಾಯಿ ಬೇಟೆಯಾಡಲು ಪ್ರಯತ್ನಿಸಿದೆ. ಕೆಲವು ಹೊತ್ತು ಚಿರತೆ ಹಾಗೂ ನಾಯಿ ಕಾಳಗ ನಡೆದಿದ್ದು, ನಾಯಿಯ ಬಾಯಿಗೆ ಹೆದರಿ ಚಿರತೆ ಕಾಲ್ಕಿತ್ತಿದೆ.

Latest Videos

undefined

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚಿತ್ರದುರ್ಗದ ಸುತ್ತಮುತ್ತ ಚಿರತೆ ಕಾಣಿಸಿಕೊಳ್ಳುತ್ತಿದ್ದು,  ಸಾರ್ವಜನಿಕರು ಮೊಬೈಲ್ ಕ್ಯಾಮರಾದಲ್ಲಿ ದೃಶ್ಯಾವಳಿಗಳನ್ನು ಸೆರೆಹಿಡಿದಿದ್ದಾರೆ. ವಾಯು ವಿಹಾರಿಗಳ ಮೊಬೈಲ್ ನಲ್ಲಿ ಚಿರತೆ ದೃಷ್ಯ ಸೆರೆಯಾಗಿದ್ದು, ಚಿತ್ರದುರ್ಗ ತಿಮ್ಮಣ್ಣ ನಾಯಕನ ಕೆರೆಯ ಬಳಿಯೂ ಆಗಾಗ ಚಿರತೆ ಕಾಣಿಸಿಕೊಳ್ಳುತ್ತಿದೆ.

"

ಸಿಎಂ ನಿವಾಸದ ಬಳಿ ಚಿರತೆ: ಸಿಸಿಟಿವಿ ದೃಶ್ಯ ವೈರಲ್

click me!