ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮೇ.27): ಕಾಫಿನಾಡೆಂದು ಪ್ರಸಿದ್ಧಿ ಪಡೆದಿರುವ ಚಿಕ್ಕಮಗಳೂರು (Chikkamagaluru) ಜಿಲ್ಲೆ ಮಾರುಕಟ್ಟೆಗೆ ಹಣ್ಣುಗಳ ರಾಜ ಮಾವು (Mango) ಲಗ್ಗೆ ಇಟ್ಟಿದೆ. ಜಿಲ್ಲೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿರುವ ಮಾವಿನ ಹಣ್ಣು (Fruit) ಹೊರರಾಜ್ಯ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದ ಮಾರುಕಟ್ಟೆಗೆ (Market) ಬಂದಿದೆ.
ಮಾರುಕಟ್ಟೆಯಲ್ಲಿ ಮಾವಿನ ಹಣ್ಣುಗೆ ಬೇಡಿಕೆ
ಚಿಕ್ಕಮಗಳೂರು ನಗರದ ಸೇರಿದಂತೆ ಇಡೀ ಜಿಲ್ಲಾದ್ಯಾಂತ ಭರ್ಜರಿಯಾಗಿ ಮಾವಿನ ಹಣ್ಣಿನ ವ್ಯಾಪಾರ ನಡೆಯುತ್ತಿದೆ. ಹಣ್ಣಿನ ರಾಣಿ ಮಲ್ಲಿಕಾ, ಒಳ್ಳೆಯ ರಸನೀಡುವ ಬೈಗನ್ಪಲ್ಲಿ, ಸುವಾಸನೆ ಬೀರುವ ಸುಂದರಿ ರಸಪೂರಿ, ಇಮಾಮ್ಪಸಂದ್, ಗೋಲಿಯಾಕಾರದ ಶುಗರ್ಬೇಬಿ, ಸರಪೂರಿ, ಆಲ್ಫೋನ್ಸ್, ಬಾದಾಮಿ, ಮಲಗೂಬ, ಕೇಸರ್, ದಸೇರಿ, ಚೂಸಿ, ಸೆಂಧೂರ, ರೊಮಾನಿಯಾ ಹೆಸರಿನ ಮಾವಿನ ಹಣ್ಣುಗಳ ಬಾಯಲ್ಲಿ ನೀರೂರುವಂತೆ ಮಾಡುತ್ತವೆ. ಆಂಧ್ರದಿಂದ ಬೈಗನ್ಪಲ್ಲಿ, ಮಲ್ಲಿಕಾ, ತುಮಕೂರು ಮತ್ತು ಬೆಂಗಳೂರಿನಿಂದ ಲೋಡುಗಟ್ಟಲೆ ಹಣ್ಣುಗಳು ಜಿಲ್ಲೆಯ ಮಾರುಕಟ್ಟೆಗೆ ಬಂದಿಳಿಯುತ್ತಿವೆ. ಈ ಜಿಲ್ಲೆಯ ಬೆಳವಾಡಿ, ಕಳಸಾಪುರ, ಬೆಳವಾಡಿ, ಸಿರಬಡಿಗೆ, ತರೀಕೆರೆ, ಬೀರೂರು ಮತ್ತು ಅಜ್ಜಂಪುರ ಜಾವಗಲ್, ಅಸೀಕೆರೆ ಉಳ್ಳೇನಹಳ್ಳಿಯಿಂದಲೂ ಮಾವಿನ ಹಣ್ಣು ಮಾರುಕಟ್ಟೆಗೆ ಪ್ರವೇಶಮಾಡಿದೆ.
ದೇಶದಲ್ಲಿ GOVERNMENT SCHOOLSಗೆ ಸೇರಲು ಹೆಚ್ಚು ಮಕ್ಕಳು ಉತ್ಸುಕ
ಸಗಟು ಮಾರಾಟ: ಚಿಕ್ಕಮಗಳೂರು ನಗರದ ಅಂಬೇಡ್ಕರ್ ಬೀದಿಯ ಜ್ಯೋತಿಚಿತ್ರಮಂದಿರದ ಮೇಲ್ಬಾಗದ ರಸ್ತೆಯ ಪಕ್ಕದಲ್ಲಿ ಎ.ಎಸ್.ಫ್ರೂಟ್ಸ್ ಹಣ್ಣಿನ ಮಂಡಿ ಇದ್ದು, ಇಲ್ಲಿಂದ ಚಿಲ್ಲರೆ ಮಾರಾಟಗಾರರು ಹಣ್ಣುಗಳನ್ನು ಖರೀದಿಸಿ ತಳ್ಳುಗಾಡಿ ಹಾಗೂ ಬುಟ್ಟಿಗಳಲ್ಲಿ ಹಣ್ಣುಗಳನ್ನಿಟ್ಟುಕೊಂಡು ಮಾರಾಟಕ್ಕೆ ಮುಂದಾಗುವರು. ಈ ಹಣ್ಣಿನ ಮಂಡಿಯಿಂದ ಬಯಲು ಪ್ರದೇಶದ ತರೀಕೆರೆ, ಅಜ್ಜಂಪುರ, ಕಡೂರು, ಮಲೆನಾಡು ಮತ್ತು ಬಯಲುಸೀಮೆ ವಾತಾವರಣಹೊಂದಿರುವ ಚಿಕ್ಕಮಗಳೂರು, ಮಲೆನಾಡಿನ ಮೂಡಿಗೆರೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ಹಾಸನ ಜಿಲ್ಲೆಯ ಬೇಲೂರು ಮತ್ತು ಸಕಲೇಶಪುರ ತಾಲೂಕುಗಳಿಗೆ ಹೋಗುತ್ತದೆ.
Koppal; ಭಾರೀ ವಿವಾದದಲ್ಲಿ ಸಚಿವ Sriramulu ಜೀರ್ಣೋದ್ಧಾರ ಮಾಡುತ್ತಿರುವ ದೇವಾಲಯ
ರಸಪೂರಿ(ಕಸಿ) ಕೆ.ಜಿ.ಗೆ 40ರಿಂದ 60, ಬಾದಾಮಿ 80ರಿಂದ 100 ಮೀಡಿಯಂ ಗಾತ್ರದವುಗಳು 60ರಿಂದ70ರೂ. ಸೆಂಧೂರ 50 ರಿಂದ 65 ರೂ. ದರದಲ್ಲಿ ಮಾರಾಟವಾಗುತ್ತಿವೆ. ರಸಪೂರಿ, ಬಾದಾಮಿ, ಬೈಗಲ್ಪಲ್ಲಿ, ಮಲಗೂಬ ಮತ್ತು ರಸಭರಿತ ಗಂಧರ್ವಕನ್ಯೆ ಎಂದು ಪ್ರಸಿದ್ಧಿ ಪಡೆದಿರುವ ಮಲ್ಲಿಕಾ ಮಾವಿನ ಹಣ್ಣುಗಳಿಗೆ ಬೇಡಿಕೆ ಉಂಟಾಗಿದೆ. ಇನ್ನು ಜಿಲ್ಲೆಯಲ್ಲಿ ಮಾವಿನ ಹಣ್ಣಿಗೆ ಬೇಡಿಕೆ ಇದ್ದು, ಬೇಡಿಕೆಗೆ ತಕ್ಕಂತೆ ಹಣ್ಣುಗಳು ಬರುತ್ತಿಲ್ಲ. ಹಾಗಾಗಿ ಮಂಗಳೂರು ಸೇರಿದಂತೆ ಬೇರೆ ಜಿಲ್ಲೆಗೆ ಮಾವುಕಳುಹಿಸಿಕೊಡಲು ಸಾಧ್ಯವಾಗುತ್ತಿಲ್ಲ ಎನ್ನುವವುದು ಎ.ಎಸ್.ಫ್ರೂಟ್ಸ್ ಮಾಲೀಕ ಏಜಾಜ್ ಅಹ್ಮದ್ ಮಾತಾಗಿದೆ.
ನಿವೃತ್ತಿಗೆ ಕೇವಲ 1 ದಿನ ಬಾಕಿ ಇರುವಾಗಲೇ ಎಸಿಬಿ ಬಲೆಗೆ ಬಿದ್ದ MUDA ಅಧಿಕಾರಿ
ಚೇಣಿಕೊಟ್ಟ ರೈತರಿಗೆ ಶುಕ್ರದೆಸೆ
ಈ ವರ್ಷ ಆರಂಭದಲ್ಲಿ ಮಾವಿನ ಮರದಲ್ಲಿ ಉತ್ತಮ ಹೂವುಗಳು ಬಿಟ್ಟಿದ್ದು, ಕಾಯಿ ಆದಾಗ ಮಳೆಬಾರದಿರುವುದು ಹಾಗೂ ಅಧಿಕಗಾಳಿ ಬೀಸಿದ್ದರಿಂದ ಮಾವಿನ ಪೀಚುಗಳ ಉದುರಿಹೋದ ಪರಿಣಾಮ ಮರದಲ್ಲಿ ಹೆಚ್ಚು ಮಾವಿನಕಾಯಿ ಉಳಿಯಲಿಲ್ಲ ಹಾಗಾಗಿ ಮಾವಿನ ಹಣ್ಣಿಗೆಬೇಡಿಕೆ ಇದೆ ಆದರೆ ಮಾವಿನ ಹಣ್ಣುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸುತ್ತಿಲ್ಲ. ಸಕಾಲದಲ್ಲಿ ಮಳೆಯಾಗದೆ ಬಳಿಕ ಅಧಿಕಗಾಳಿಗೆ ಮರದಲ್ಲಿ ಮಾವಿನ ಹೀಚುಗಳು ಉದುರೆಹೋಗಿ ದ್ದರಿಂದ ಈ ವರ್ಷ ಮಾವಿನ ಮರವನ್ನು ಚೇಣಿಪಡೆದವರಿಗೆ ಸ್ವಲ್ಪ ನಷ್ಟವುಂಟಾಗಿದ್ದು, ಚೇಣಿಕೊಟ್ಟ ರೈತರು ಶುಕ್ರದೆಸೆ ಉಂಟಾಗಿದೆ. ವಿವಿಧ ವಸ್ತುಗಳನ್ನು ಖರೀದಿಸಲು ನಗರಕ್ಕೆ ಬರುವ ವಿವಿಧ ಗ್ರಾಮಗಳ ಜನರು ಮಾವಿನ ಹಣ್ಣುಗಳನ್ನು ಖರೀದಿಸುತ್ತಿದ್ದಾರೆ.