ನಾಳೆ ಬೆಂಗಳೂರಿನ ಈ ಏರಿಯಾದಲ್ಲಿ ವಿದ್ಯುತ್ ಕಡಿತ!

By Sathish Kumar KH  |  First Published Nov 14, 2024, 3:09 PM IST

ನ.15ರಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಸ್ಕಾಂ ನಿರ್ವಹಣಾ ಕಾರ್ಯಗಳಿಂದಾಗಿ ಈ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಬೆಸ್ಕಾಂ ಮನವಿ ಮಾಡಿದೆ.


ಬೆಂಗಳೂರು (ನ.14): ಸಿಲಿಕಾನ್ ಸಿಟಿ ಬೆಂಗಳೂರಿಗೆ ವಿದ್ಯುತ್ ಪೂರೈಕೆ ಮಾಡುವ ಬೆಸ್ಕಾಂ ವತಿಯಿಂದ ವಿದ್ಯುತ್ ದುರಸ್ತಿ ಹಾಗೂ ಇತರೆ ನಿರ್ವಹಣಾ ಕಾರ್ಯಗಳನ್ನು ಕೈಗೊಂಡಿರುವುದರಿಂದ ನ.15ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. 

ಬೆಸ್ಕಾಂ ವತಿಯಿಂ ಜಲಸಿರಿ 24x7 ನೀರು ಸರಬರಾಜು ಯೋಜನೆ, ಹೈ-ಟೆನ್ಶನ್ (HT) ಲೈನ್ ರಿಕಂಡಕ್ಟರಿಂಗ್, RMUಗಳ ಸೇವೆ (ರಿಂಗ್ ಮುಖ್ಯ ಘಟಕಗಳು), HT ಸಂಪರ್ಕಗಳ ದುರಸ್ತಿ ಮತ್ತು ಬದಲಿ ಮಾಡುವುದು, ಮರದ ಟ್ರಿಮ್ಮಿಂಗ್, ಸಿಸ್ಟಮ್ ನವೀಕರಣಗಳು ಮತ್ತು ಇತರ ಅಗತ್ಯ ದುರಸ್ತಿಗಳಂತಹ ವಿವಿಧ ಮೂಲಸೌಕರ್ಯ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ನ.15ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

Tap to resize

Latest Videos

ಈ ಕೆಳಕಂಡ ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತ:
ಬಿಸಿಸಿ ಲೇಔಟ್, ವೆಂಕಟೇಶ್ವರ ಲೇಔಟ್, 8ನೇ ಮುಖ್ಯ ಆರ್‌ಪಿಸಿ ಲೇಔಟ್, ಪೈಪ್‌ಲೈನ್ ರಸ್ತೆ, ನೇತಾಜಿ ಲೇಔಟ್, ಅತ್ತಿಗುಪ್ಪೆ, ರಮೇಶನಗರ, ವಿಭೂತಿಪುರ, ಅಗಲಕುಪ್ಪೆ, ಅರೆಬೊಮ್ಮನಹಳ್ಳಿ, ಕುಲುವನಹಳ್ಳಿ, ಮನ್ನೆ, ಸೋಂಪುರ ಕೈಗಾರಿಕಾ ಪ್ರದೇಶ, ಬೀರಗೊಂಡನಹಳ್ಳಿ, ಸಿಟಿ ಡಿಸೈನ್, ಕಲಗಂಡನಹಳ್ಳಿ, ಸಿ.ಟಿ. , ಹಸಿರುವಳ್ಳಿ, ತ್ಯಾಮಗೊಂಡ್ಲು, ಮರಳಕುಂಟೆ, ನೆಲಮಂಗಲ ಟೌನ್, ಕೊಪ್ಪ, ಹರಪನಹಳ್ಳಿ, ನರಸಾಪುರ ಪೋಲನಾಯಕನಪಲ್ಲಿ, ಬೊಮ್ಮಸಂದ್ರ ಜಿಂಕಪಲ್ಲಿ, ಅಚ್ಚಾಗನಪಲ್ಲಿ, ಚಿಟಿಗಲಗುಟ್ಟ, ಕುಂಟಕಿಂದಪಲ್ಲಿ, ಬನಲಪಲ್ಲಿ, ಗುಂಡಮಾವಾರಿಪಲ್ಲಿ, ಮುತಕಡಳ್ಳಿ, ಗುಂಡಮಾವಾರಿಪಲ್ಲಿ, ಮಡ್ಕದಳ್ಳಿ, ಗುನ್ನಹಳ್ಳಿ, ಗುನ್ನಹಳ್ಳಿ, ಗುನ್ನಹಳ್ಳಿ ಸೇರಿದಂತ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ವಿದ್ಯುತ್ ಪೂರೈಕೆ ಸ್ಥಗಿತದ ವೇಳೆ ಸಂಸ್ಥೆಯೊಂದಿಗೆ ಸಹಕರಿಸಬೇಕು ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

click me!