'ತಿಳಿದೋ, ತಿಳಿಯದೆಯೋ ಯಡಿಯೂರಪ್ಪ ಕೆಲವು ತಪ್ಪು ಮಾಡಿದ್ದಾರೆ'

By Suvarna News  |  First Published Jan 15, 2020, 3:14 PM IST

ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಚನ್ನಮಲ್ಲವೀರಭದ್ರ ಮಹಾಸ್ವಾಮೀಜಿ| ದರ್ಪ, ದಬ್ಬಾಳಿಕೆಯಿಂದ ಆದೇಶ ಮಾಡೋದು ಗುರುಗಳ ಕೆಲಸವಲ್ಲ| ಮುಖ್ಯಮಂತ್ರಿಗಳನ್ನ ಬೆದರಿಸುವ ತಂತ್ರ ಒಳ್ಳೆಯದಲ್ಲ|


ಹಾವೇರಿ(ಜ.15): ಯಡಿಯೂರಪ್ಪ ಕರ್ನಾಟಕ ಕಂಡಂತಹ ಅಂತಃಕರಣ ಇರುವಂತಹ ಮುಖ್ಯಮಂತ್ರಿಯಾಗಿದ್ದಾರೆ.  ಯಾವತ್ತೂ ಕೋಮುವಾದ ಮಾಡಿಲ್ಲ, ಕೇಳಿದವರಿಗೆಲ್ಲರಿಗೂ ಕೊಡುತ್ತಾರೆ. ಮಠ ಮಾನ್ಯಗಳಿಗೆ ಯಡಿಯೂರಪ್ಪ ಮಾಡಿದಷ್ಟು ಉದಾರ ಸಹಾಯವನ್ನ ಯಾವ ಸಿಎಂಗಳು ಮಾಡಿಲ್ಲ ಎಂದು ನಿಡುಮಾಮಿಡಿ ಮಠದ ಚನ್ನಮಲ್ಲವೀರಭದ್ರ ಮಹಾಸ್ವಾಮೀಜಿ ಹೇಳಿದ್ದಾರೆ. 

ಬುಧವಾರ ತಾಲೂಕಿನ ನರಸೀಪುರದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉದ್ಘಾಟಿಸಿದ್ದಾರೆ. 

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ವೇಳೆ ಮಾತನಾಡಿದ ಚನ್ನಮಲ್ಲವೀರಭದ್ರ ಮಹಾಸ್ವಾಮೀಜಿಗಳು, ಯಡಿಯೂರಪ್ಪ ತಾಯ್ತನದ ಗುಣ ಇಟ್ಟುಕೊಂಡು ಬಂದಿದ್ದಾರೆ. ಇದ್ದವರಿಗೆ ಕಡಿಮೆ ಕೊಟ್ಟು, ಇಲ್ಲದವರಿಗೆ ಹೆಚ್ಚು ಕೊಡುವಂತ ಕೆಲಸವನ್ನ ಯಡಿಯೂರಪ್ಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. 

ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಚನ್ನಮಲ್ಲವೀರಭದ್ರ ಮಹಾಸ್ವಾಮೀಜಿ, ದರ್ಪ, ದಬ್ಬಾಳಿಕೆಯಿಂದ ಆದೇಶ ಮಾಡೋದು ಗುರುಗಳ ಕೆಲಸವಲ್ಲ. ಮುಖ್ಯಮಂತ್ರಿಗಳನ್ನ ಬೆದರಿಸುವ ತಂತ್ರ ಒಳ್ಳೆಯದಲ್ಲ. ಸಂಖ್ಯಾಬಲದಿಂದ ಅಧಿಕಾರ ಬಲದಿಂದ ಸಿಎಂರನ್ನ ನಿಯಂತ್ರಣ ಮಾಡುತ್ತೇವೆ ಅನ್ನುವುದು ಸರಿಯಲ್ಲ ಎಂದು ಹೇಳಿದ್ದಾರೆ. 

ಪ್ರಧಾನಿ, ಸಿಎಂರನ್ನ ಸ್ವಾಮೀಜಿಗಳು ಅವರ ಎತ್ತರದ ಕೆಳಗೆ ಕೂರಿಸಬಾರದು. ನಮ್ಮ ಸಿಎಂರನ್ನ ಕಡಿಮೆ‌ ಎತ್ತರದಲ್ಲಿ ಕೂರಿಸಿದರೆ ನಾವು ಅವಮಾನ ಮಾಡುತ್ತಿದ್ದೇವೆ ಅನಿಸುತ್ತದೆ. ತಿಳಿದೋ, ತಿಳಿಯದೆಯೋ ಯಡಿಯೂರಪ್ಪ ಕೆಲವು ತಪ್ಪುಗಳನ್ನ ಮಾಡಿದ್ದಾರೆ. ನಿಮಗೆ ಕೆಟ್ಟ ಹೆಸರು ತರುವವರನ್ನ ಆದಷ್ಟು ದೂರವಿಡಿ. ಇತಿಹಾಸದಲ್ಲಿ ಹೆಸರು ಅಜರಾಮರ ಆಗಿರುವಂತಹ ಕೆಲಸ ಮಾಡಿ. ಬಲಿಷ್ಠರಿಗೆ ಬಾಗಬೇಡಿ, ದಮನಿತರ ಧ್ವನಿಯಾಗಿ. ನಿಮ್ಮ ಸಹನೆ, ತಾಳ್ಮೆಯನ್ನ ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. 
 

click me!