ಲಾಕ್‌ಡೌನ್‌ನಿಂದ ಎಲ್ಲೆಡೆ ನಷ್ಟ ಸಂಭವಿಸುತ್ತಿದ್ದು, ಮೈಸೂರಿನ ಪ್ರಸಿದ್ಧ ಚಾಮರಾಜೇಂದ್ರ ಮೃಗಾಲಯವೂ ಇದಕ್ಕೆ ಹೊರತಾಗಿಲ್ಲ. ಪ್ರವಾಸಿಗರ ಟಿಕೆಟ್ ಹಣ, ಪ್ರಾಣಿ ದತ್ತು ಯೋಜನೆಯಿಂದಲೇ ನಡೆಯುತ್ತಿದ್ದ ಮೃಗಾಲಯದಲ್ಲಿ ಈಗ ನಿರ್ವಹಣೆ ಕಷ್ಟವಾಗಿದೆ.
ಮೈಸೂರು(ಏ.29): ಲಾಕ್‌ಡೌನ್‌ನಿಂದ ಎಲ್ಲೆಡೆ ನಷ್ಟ ಸಂಭವಿಸುತ್ತಿದ್ದು, ಮೈಸೂರಿನ ಪ್ರಸಿದ್ಧ ಚಾಮರಾಜೇಂದ್ರ ಮೃಗಾಲಯವೂ ಇದಕ್ಕೆ ಹೊರತಾಗಿಲ್ಲ. ಪ್ರವಾಸಿಗರ ಟಿಕೆಟ್ ಹಣ, ಪ್ರಾಣಿ ದತ್ತು ಯೋಜನೆಯಿಂದಲೇ ನಡೆಯುತ್ತಿದ್ದ ಮೃಗಾಲಯದಲ್ಲಿ ಈಗ ನಿರ್ವಹಣೆ ಕಷ್ಟವಾಗಿದೆ.
ಮೃಗಾಲಯದಲ್ಲಿ ವಿದ್ಯುತ್, ನೀರು ಆಹಾರ ಸೇರಿ ಎಲ್ಲದಕ್ಕೂ ಸಮಸ್ಯೆಯಾಗಿದ್ದು, ನಿರ್ವಹಣೆಗೆ ತಿಂಗಳಿಗೆ ಸುಮಾರು 2 ಕೋಟಿ ರೂಪಾಯಿ ಖರ್ಚಾಗುತ್ತದೆ. ಆದರೆ ಲಾಕ್‌ಡೌನ್‌ನಿಂದ ಮೃಗಾಲಯ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.
undefined
ಕಲಬುರಗಿಯಲ್ಲಿ ಅರ್ಧ ಶತಕ ಬಾರಿಸಿದ ಕೊರೋನಾ, ಬೆಂಗ್ಳೂರು, ಮೈಸೂರು ಸೇಫ್..!
ಇದೀಗ ಮೃಗಾಲಯದ ನಿರ್ದೇಶಕರು ನೆರವಿಗಾಗಿ ಮನವಿ ಮಾಡಿದ್ದಾರೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಅವರು ದೇಣಿಗೆ ನೀಡಿ ನೆರವಾಗಿದ್ದರು. ಅಲ್ಲಿನ ಆನೆಯನ್ನೂ ದತ್ತು ಸ್ವೀಕರಿಸಿದ್ದರು.
ಬೇಸಗೆ ರಜಾದಿನಗಳಲ್ಲಿ ಅತ್ಯಂತ ಹೆಚ್ಚು ಪ್ರವಾಸಿಗರು ಭೇಟಿ ಕೊಡುವ ಮೃಗಾಲಯ ಮಾಮೂಲಿ ದಿನಗಳಲ್ಲಾದರೆ ಗಿಜಿಗಿಡುತ್ತಿರುತ್ತಿತ್ತೇನೋ.. ಆದರೆ ಈ ಬಾರಿ ಮಾತ್ರ ಮೃಗಾಲಯದಿಂದಲೇ ಸಾರ್ವಜನಿಕರ ನೆರವು ಕೋರುವಂತಾಗಿದೆ.