ವಿನಾಯ್ತಿ ಇದ್ರೂ ಸಾಲ ಮರುಪಾವತಿಗೆ ಒತ್ತಡ: ಗ್ರಾಹಕರಿಗೆ ಕಾಲ್‌ ಮಾಡಿ ಕಿರಿಕಿರಿ

By Kannadaprabha News  |  First Published Apr 29, 2020, 3:51 PM IST

ಲಾಕ್‌ಡೌನ್‌ ಮುಕ್ತಾಯಕ್ಕೆ ಇನ್ನೂ ಸಮಯ ಬಾಕಿ ಉಳಿದಿದ್ದರೂ, ಕೆಲವು ಮೈಕ್ರೋ ಫೈನಾನ್ಸ್‌ಗಳು ದೂರವಾಣಿ ಕರೆ ಮಾಡಿ ಸಾಲ ಮರುಪಾವತಿಗೆ ಒತ್ತಡ ಹೇರುತ್ತಿದ್ದಾರೆ ಎಂದು ಮೈಕ್ರೋ ಫೈನಾನ್ಸ್‌ಗಳಿಂದ ಸಾಲ ಪಡೆದ ಗ್ರಾಹಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.


ಕೊಪ್ಪ(ಏ.29): ಕೋವಿಡ್‌-19 ಹಿನ್ನೆಲೆಯಲ್ಲಿ ತಿಂಗಳಿಗಿಂತ ಹೆಚ್ಚು ಕಾಲ ಲಾಕ್‌ಡೌನ್‌ನಿಂದಾಗಿ ದಿನಗೂಲಿ ನೌಕರರು ಸೇರಿ ಜನಸಾಮಾನ್ಯರು ಮನೆಯಿಂದ ಹೊರಬರಲಾಗದೆ ಕೆಲಸ ಕಾರ್ಯಕ್ಕೂ ಹೋಗಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಲಾಕ್‌ಡೌನ್‌ ಮುಕ್ತಾಯಕ್ಕೆ ಇನ್ನೂ ಸಮಯ ಬಾಕಿ ಉಳಿದಿದ್ದರೂ, ಕೆಲವು ಮೈಕ್ರೋ ಫೈನಾನ್ಸ್‌ಗಳು ದೂರವಾಣಿ ಕರೆ ಮಾಡಿ ಸಾಲ ಮರುಪಾವತಿಗೆ ಒತ್ತಡ ಹೇರುತ್ತಿದ್ದಾರೆ ಎಂದು ಮೈಕ್ರೋ ಫೈನಾನ್ಸ್‌ಗಳಿಂದ ಸಾಲ ಪಡೆದ ಗ್ರಾಹಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

Tap to resize

Latest Videos

ನೆಚ್ಚಿನ ಕಾರು ಬಳಸುವ ಮೊದಲೇ ಇಹಲೋಕ ತ್ಯಜಿಸಿದ ಇರ್ಫಾನ್ ಖಾನ್!

ತೀರ್ಥಹಳ್ಳಿಯಲ್ಲಿ ಕಚೇರಿ ತೆರೆದು ಕಾರ್ಯನಿರ್ವಹಿಸುತ್ತಿರುವ ಮುತ್ತೂಟ್‌, ಸಮಸ್ತ, ಎಲ್‌ಟಿ, ಎಸ್‌ಕೆಎಸ್‌ ಭಾರತ್‌, ಸ್ಪಂದನ, ಗ್ರಾಮೀಣ ಕೂಟ ಮುಂತಾದ ಮೈಕ್ರೋ ಫೈನಾನ್ಸ್‌ಗಳಿಂದ ಕೊಪ್ಪ, ಬಾಳೆಹೊನ್ನೂರು, ಕೊರಡಿಹಿತ್ಲು, ಕುದ್ರೆಗುಂಡಿ ಭಾಗಗಳಲ್ಲಿ ವಾರ, ಪಾಕ್ಷಿಕ ಮತ್ತು ಮಾಸಿಕ ಮರುಪಾವತಿ ಕಂತುಗಳ ಆಧಾರದಲ್ಲಿ ಸಾಲ ನೀಡಿದ್ದು, ಅದರಂತೆ ಸಾಲ ವಸೂಲಾತಿಯನ್ನು ಮಾಡುತ್ತಿತ್ತು. ಕೋವಿಡ್‌-19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮೈಕ್ರೋಫೈನಾನ್ಸ್‌ಗಳು ತಮ್ಮ ಕಚೇರಿ ಸಿಬ್ಬಂದಿಗೆ ರಜೆ ನೀಡಿ ಅವರವರ ಊರುಗಳಿಗೆ ಕಳುಹಿಸಿದ್ದಾರೆ.

ಕತ್ರಿಗುಪ್ಪೆಯಲ್ಲಿ ಕಂಡಕಂಡಲ್ಲಿ ಉಗಿಯುತ್ತಿದ್ದ ವ್ಯಕ್ತಿ ಅರೆಸ್ಟ್

ಈ ಸಿಬ್ಬಂದಿ ಅಲ್ಲಿಂದಲೇ ಸಾಲ ಪಡೆದ ಗ್ರಾಹಕರಿಗೆ ಕರೆ ಮಾಡಿ ಮೇಲಾಧಿಕಾರಿಗಳ ಆದೇಶವಿದೆ. ಕೂಡಲೇ ಸಾಲ ಮರುಪಾವತಿಸಿ ಎಂದು ಕರೆಮಾಡುವ ಮೂಲಕ ಮಾನಸಿಕ ಕಿರಿಕಿರಿ ಉಂಟುಮಾಡುತ್ತಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಯಾವುದೇ ಸಾಲದ ಕಂತುಗಳನ್ನು ಮೂರು ತಿಂಗಳವರೆಗೂ ಸಾಲ ಮರುಪಾವತಿಗೆ ಒತ್ತಾಯಿಸುವಂತಿಲ್ಲ.

ಲಾಕ್ ಡೌನ್ ಇದ್ದರೂ ತೆರೆದುಕೊಂಡ ಅಮಲಿನ ಲೋಕ

ಮನೆ ಬಾಡಿಗೆದಾರರೂ ಬಾಡಿಗಗಾಗಿ ಪೀಡಿಸುವಂತಿಲ್ಲ ಹಾಗೂ ಒಕ್ಕಲೆಬ್ಬಿಸುವಂತಿಲ್ಲ ಎಂದು ಸ್ವತಃ ಮುಖ್ಯಮಂತ್ರಿಗಳೇ ಮಾಧ್ಯಮ ಹೇಳಿಕೆ ನೀಡಿದ್ದರೂ, ಮೈಕ್ರೋಫೈನಾನ್ಸ್‌ಗಳು ಸರ್ಕಾರದ ಆದೇಶಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿರುವುದು ಸರಿಯೇ? ಎಂದು ಪ್ರಶ್ನಿಸಿರುವ ಮೈಕ್ರೋ ಗ್ರಾಹಕರು ಲಾಕ್‌ಡೌನ್‌ ಮುಗಿದ ಮೇಲೆ ಕೆಲಸಕ್ಕೆ ಹೋಗಿ ಲಾಕ್‌ಡೌನ್‌ ಸಮಯದಲ್ಲಿ ಹಳಿ ತಪ್ಪಿದ ಆರ್ಥಿಕ ಸಮತೋಲನವನ್ನು ಸರಿಪಡಿಸಿಕೊಳ್ಳಲು ಕನಿಷ್ಠ ತಿಂಗಳ ಕಾಲಾವಧಿಯಾದರೂ ಬೇಕಾಗಿರುವುದರಿಂದ ಸಾಲ ವಸೂಲಾತಿಗೆ ಕಾಲಾವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ.

click me!