ಯತೀಂದ್ರ ಸಿದ್ದರಾಮಯ್ಯನಿಗೆ ಕೆಟ್ಟದಾಗಿ ಬೈದು ಪರಾರಿಯಾದ ಯುವಕ; ಕನಕ ಜಯಂತಿಯಲ್ಲಿ ಹೈಡ್ರಾಮಾ!

Published : Jan 27, 2024, 05:06 PM IST
ಯತೀಂದ್ರ ಸಿದ್ದರಾಮಯ್ಯನಿಗೆ ಕೆಟ್ಟದಾಗಿ ಬೈದು ಪರಾರಿಯಾದ ಯುವಕ; ಕನಕ ಜಯಂತಿಯಲ್ಲಿ ಹೈಡ್ರಾಮಾ!

ಸಾರಾಂಶ

ಗುಂಡ್ಲುಪೇಟೆ ಕಾರ್ಯಕ್ರಮದಲ್ಲಿ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಭಾಷಣ ಮಾಡುವಾಗ ಬುಲೆಟ್‌ನಲ್ಲಿ ಬಂದ ಯುವಕ ಕೆಟ್ಟದಾಗಿ ಬೈಯುತ್ತಾ ಪರಾರಿಯಾದ ಘಟನೆ ನಡೆದಿದೆ.

ಚಾಮರಾಜನಗರ (ಜ.27): ಗುಂಡ್ಲುಪೇಟೆಯಲ್ಲಿ ನಡೆಯುತ್ತಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಭಾಷಣ ಮಾಡುವಾಗ ಬುಲೆಟ್‌ನಲ್ಲಿ ಬಂದ ಯುವಕ ಕೆಟ್ಟದಾಗಿ ಬೈಯುತ್ತಾ ಪರಾರಿಯಾದ ಘಟನೆ ಶನಿವಾರ ನಡೆದಿದೆ.

ರಾಜ್ಯದಲ್ಲಿ ಈಗಾಗಲೇ ಲೋಕಸಭಾ ಚುನಾವಣೆ ಕಾವು ಹೆಚ್ಚಾಗುತ್ತಿದ್ದು, ವಿವಿಧೆಡೆ ಸಭೆ, ಸಮಾರಂಭ ಹಾಗೂ ಸಮಾವೇಶಗಳು ಶುರುವಾಗಿವೆ. ಇನ್ನು ರಾಜ್ಯದ ಗಡಿಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆಯ ದೇವರಾಜ ಅರಸ್ ಕ್ರೀಡಾಂಗಣದಲ್ಲಿ ಶನಿವಾರ ಆಯೋಜನೆ ಮಾಡಲಾಗಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಭಾಷಣ ಮಾಡುವಾಗ ಬುಲೆಟ್‌ ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಯತೀಂದ್ರ ಅವರಿಗೆ ಬಾಯಿಗೆ ಬಂದಂತೆ ಕೆಟ್ಟ ಪದಗಳನ್ನು ಬಳಸಿ ಬೈದು ಪರಾರಿ ಆಗಿರುವ ದುರ್ಘಟನೆ ನಡೆದಿದೆ.

ಅಯೋಧ್ಯ ರಾಮಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್‌ಗೆ 12 ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡ ಸರ್ಕಾರ!

ಕನಕ ಜಯಂತಿ ಕಾರ್ಯಕ್ರಮದ ವೇಳೆ ಗುಂಡ್ಲುಪೇಟೆ ಮೈದಾನದಲ್ಲಿ ಫುಲ್ ಹೈಡ್ರಾಮ ನಡೆದಿದೆ. ಯತೀಂದ್ರ ಸಿದ್ದರಾಮಯ್ಯಗೆ ಅವಾಚ್ಯ ಶಬ್ದದಿಂದ ನಿಂಧಿಸಿ ಅಲ್ಲಿಂದ ಪರಾರಿ ಆಗಿದ್ದಾನೆ. ಹೀಗೆ ಕೆಟ್ಟ ಪದಗಳಿಂದ ಬೈದು ಹೋದ ವ್ಯಕ್ತಿಯನ್ನು ಸ್ಥಳೀಯ ರಂಜಿತ್ ಎಂದು ಗುರುತಿಸಲಾಗಿದೆ. ಯತೀಂದ್ರ ಅವರು ಬಾಷಣ ಮಾಡುವಾಗ ಕೇಂದ್ರ ಸರ್ಕಾರ ಹಾಗೂ ರಾಮಮಂದಿರ ನಿರ್ಮಾಣದ ಬಗ್ಗೆ ಮಾತನಾಡುತ್ತಿದ್ದರು. ಬಿಜೆಪಿ ರಾಮಮಂದಿರ ನಿರ್ಮಾಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕೆ ಮಾಡಿದರು.

ನಂತರ, ನಮ್ಮ ದೇಶದಲ್ಲಿ ರಾಜ ಮಹಾರಾಜರು ಹಾಗೂ ಜನ ಸಾಮಾನ್ಯರು ಕೂಡ ದೇವಸ್ಥಾನ ಕಟ್ಟಿದ್ದಾರೆ. ಅದೇ ರೀತಿ ಈಗ ದೇಶದಲ್ಲಿ ರಾಮಮಂದಿರ ದೇವಸ್ಥಾನ ಕಟ್ಟುವುದು ಒಂದು ಭಾಗವಾಗಿದೆ. ಆದರೆ ರಾಮಮಂದಿರ ಕಟ್ಟಿದಾಕ್ಷಣ ರಾಮರಾಜ್ಯ ಸೃಷ್ಟಿಯಾಗುವುದಿಲ್ಲ. ಬಡವರನ್ನು, ದೀನದಲಿತರನ್ನು, ಅಬಲೆ ಮಹಿಳೆಯರಿಗೆ ನ್ಯಾಯ ಸಿಕ್ಕಾಗ ರಾಮರಾಜ್ಯವಾಗುತ್ತೆದೆ ಎಂದು ಹೇಳುವಾಗ ಬುಲೆಟ್‌ನಲ್ಲಿ ಬಂದ ರಂಜಿತ್ ಕೆಟ್ಟ ಪದಗಳಿಂದ ನಿಂದನೆ ಮಾಡಿದ್ದಾನೆ. ಈ ವೇಳೆ ಆತನನ್ನು ಹಿಡಿಯಲು ಕಾರ್ಯಕ್ರಮದಲ್ಲಿದ್ದ ಸಾರ್ವಜನಿಕರು ಹಾಗೂ ಕಾವಲಿದ್ದ ಪೊಲೀಸರು ಓಡಿ ಹೋದರೂ ಬೈಕ್‌ನಲ್ಲಿದ್ದರಿಂದ ಆತ ಅವರ ಕೈಗೆ ಸಿಗದೇ ಪರಾರಿ ಆಗಿದ್ದಾನೆ.

ಇನ್ನು ಆ ವ್ಯಕ್ತಿ ಬೈದು ಹೋದ ನಂತರ ಜನರು ಕೂಡ ಕಾರ್ಯಕ್ರಮದಲ್ಲಿ ಎದ್ದು ಕೂಡಲೇ ಆ ವ್ಯಕ್ತಿಯನ್ನು ಬಂಧಿಸಬೇಕು ಎಂದು ಪೊಲೀಸರ ಮುಂದೆ ಪಟ್ಟು ಹಿಡಿದಿದ್ದಾರೆ. ಇನ್ನು ಯತೀಂದ್ರ ಅವರ ಭಾಷಣವನ್ನೂ ಕೇಳದೇ ಗಲಾಟೆ ಆರಂಭಿಸಿದ್ದಾರೆ. ನೀವು ಕುಳಿತುಕೊಳ್ಳಿ, ಶತ ಶತಮಾನಗಳಿಂದಲೂ ದಲಿತರು ಹಾಗೂ ಕೆಳವರ್ಗದವರಿಗೆ ಈ ರೀತಿಯ ಅವಮಾನ ಆಗುತ್ತಿವೆ. ಆದರೆ, ಈಗ ಸಂವಿಧಾನ ನಮ್ಮ ದೇಶದಲ್ಲಿದೆ. ಕೆಟ್ಟದಾಗಿ ಬೈದು ಹೋದವನನ್ನು ಪೊಲೀಸರು ಹಿಡಿದು ತಕ್ಕ ಶಿಕ್ಷೆ ನೀಡುತ್ತಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರೂ ಜನರು ಕುಳಿತುಕೊಳ್ಳದೇ ಗಲಾಟೆ ಆರಂಭಿಸಿದ್ದರು. ಈ ವೇಳೆ ವೇದಿಕೆಯಲ್ಲಿದ್ದ ಸಚಿವ ಬೈರತಿ ಸುರೇಶ್ ಅವರು ಜನರನ್ನು ಸಮಾಧಾನ ಮಾಡಿದರು.

28 ಲೋಕಸಭಾ ಕ್ಷೇತ್ರಕ್ಕೆ ಉಸ್ತುವಾರಿ ನೇಮಕ ಮಾಡಿದ ಬಿಜೆಪಿ‌: ಕೇಂದ್ರದಿಂದ ಚುನಾವಣಾ ಪ್ರಭಾರಿ ನಿಯೋಜನೆ

ಯತೀಂದ್ರ ಅವರಿಗೆ ಬೈದು ಪರಾರಿ ಆಗಿದ್ದ ಯುವಕ ಕೆಲವೇ ಕ್ಷಣಗಳಲ್ಲಿ ಪುನಃ ವೇದಿಕೆ ಕಾರ್ಯಕ್ರಮದತ್ತ ಆಗಮಿಸಿದ್ದಾನೆ. ಆಗ ಪೊಲೀಸರು ಅಲರ್ಟ್‌ ಆಗಿದ್ದು, ಮೈದಾನಕ್ಕೆ ಆಗಮಿಸುತ್ತಿದ್ದಂತೆ ಲಾಕ್ ಮಾಡಿದ್ದಾರೆ. ಇವನೇ ರಂಜಿತ್ ಎಂಬುದನ್ನು ಜನರು ಕೂಗಿ ಹೇಳುತ್ತಿದ್ದಂತೆಯೇ ಅವನನ್ನು ಹಿಡಿದುಕೊಂಡಿದ್ದಾರೆ. ಕನಕ ಜಯಂತಿಯಲ್ಲಿ ಭಾಗಿಯಾಗಿದ್ದ ಜನರು ಆತನ ಮೇಲೆ ಹಲ್ಲೆ ಮಾಡುವುದಕ್ಕೆ ಮುಂದಾಗ ಆತನನ್ನು ವಶಕ್ಕೆ ಪಡೆದ ಜೀಪಿನಲ್ಲಿ ಹತ್ತಿಕೊಂಡು ಪೊಲೀಸ್‌ ಠಾಣೆಗೆ ಕರೆದೊಯ್ದಿದ್ದಾರೆ.

PREV
Read more Articles on
click me!

Recommended Stories

ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ
ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!