ಅಪ್ರಾಪ್ತೆ ಬಾಲಕಿ ಮದ್ವೆಯಾಗಿ ಗರ್ಭಿಣಿ ಮಾಡಿದ ಯುವಕ, ಪೋಕ್ಸೊ ಕೇಸ್‌ಗೆ ಹೆದರಿ ಆತ್ಮಹತ್ಯೆಗೆ ಶರಣಾದ!

Published : Oct 10, 2023, 09:30 PM IST
ಅಪ್ರಾಪ್ತೆ ಬಾಲಕಿ ಮದ್ವೆಯಾಗಿ ಗರ್ಭಿಣಿ ಮಾಡಿದ ಯುವಕ, ಪೋಕ್ಸೊ ಕೇಸ್‌ಗೆ ಹೆದರಿ ಆತ್ಮಹತ್ಯೆಗೆ ಶರಣಾದ!

ಸಾರಾಂಶ

ಅಪ್ರಾಪ್ತ ಬಾಲಕಿಯನ್ನು ಮದುವೆ ಮಾಡಿಕೊಂಡು ಗರ್ಭಿಣಿ ಮಾಡಿದ ಯುವಕ, ಪೋಕ್ಸೋ ಕೇಸ್‌ಗೆ ಹೆದರಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ನಡೆದಿದೆ.

ಚಾಮರಾಜನಗರ (ಅ.10): ಅಪ್ರಾಪ್ತೆ ಬಾಲಕಿಯನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ ಯುವಕ ಆಕೆಯನ್ನು ಮದುವೆಯೂ ಆಗಿದ್ದಾನೆ. ಮದುವೆಯಾಗಿ ಪ್ರತ್ಯೇಕವಾಗಿದ್ದು, ಸಂಸಾರವನ್ನೂ ಆರಂಭಿಸಿದ್ದರಿಂದ ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಿದ್ದಾಳೆ. ಆದರೆ, ಆಸ್ಪತ್ರೆಗೆ ಹೋದಾಗ ಆಕೆಗೆ 18 ವರ್ಷ ತುಂಬಿಲ್ಲ ಎಂಬುದು ತಿಳಿದಿದ್ದು, ಪೋಕ್ಸೋ ಕೇಸ್‌ ದಾಖಲು ಮಾಡುವುದಾಗಿ ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. ಇದರಿಂದ ಪೋಕ್ಸೋ ಕೇಸ್‌ನಿಂದಾಗಿ ತಾನು ಜೈಲು ಸೇರುತ್ತೇನೆಂಬ ಭಯದಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಮಾಡಿ ನದಿಯ ಬಳಿ ನಾಪತ್ತೆಯಾಗಿದ್ದಾನೆ.

ಚಾಮರಾಜನಗರ ತಾಲ್ಲೂಕು ಬಿಸಲವಾಡಿ ಗ್ರಾಮದ ಕಾರ್ತಿಕ್ (28) ಆತ್ಮಹತ್ಯೆ ಮಾಡಿಕೊಳ್ಳೋದಾಗಿ ವೀಡಿಯೋ ಮಾಡಿ ನಾಪತ್ತೆಯಾಗಿರುವ ಯುವಕ ಆಗಿದ್ದಾನೆ. ಈತ ಅಪ್ರಾಪ್ತೆ ಯುವತಿಯನ್ನು ಮದುವೆಯಾಗಿ ಇಕ್ಕಟ್ಟಿಗೆ ಸಿಲುಕಿದ್ದಾನೆ. ಅಪ್ರಾಪ್ತೆಯನ್ನು ಮದುವೆಯಾದ ನಂತರ ಆಕೆ ಈಗ ಗರ್ಭಿಣಿಯಾಗಿರುವುದು ಅಸಲಿ ಸಮಸ್ಯೆಗೆ ಕಾರಣವಾಗಿದೆ. ಪೋಕ್ಸೋ ಕಾಯ್ದೆಗೆ ಹೆದರಿ ಆತ್ಮಹತ್ಯೆಗೆ ಮುಂದಾದ ಯುವಕನಾಗಿದ್ದಾನೆ. ತನಗೆ ಜೈಲು ಶಿಕ್ಷೆ ಆಗುತ್ತೆ ಎಂದು ಹೆದರಿ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೇಳಿ ವೀಡಿಯೋ ಕಳಿಸಿದ್ದಾನೆ.

ವಿಶ್ವಕಪ್‌ ಭಾರತ- ಪಾಕಿಸ್ತಾನ ಪಂದ್ಯಕ್ಕೆ ಭಾರತೀಯರಿಗೆ ವಿಶ್‌ ಮಾಡದ ಸಿಎಂ, ಡಿಸಿಎಂ: ಓಟ್‌ ಬ್ಯಾಂಕ್‌ ಮುಲಾಜು ನೋಡಿದ್ರಾ?

ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ, ನನ್ನ ಸಾವಿಗೆ ನಾನೇ ಕಾರಣ ಎಂದು ವೀಡಿಯೋ ಮಾಡಿದ್ದಾಳೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗಿದೆ. ಚಾಮರಾಜನಗರ ತಾಲ್ಲೂಕಿನ ಸುವರ್ಣಾವತಿ ಜಲಾಶಯದ ಬಳಿ ಕಾರ್ತಿಕ್ ಬೈಕ್ ಪತ್ತೆಯಾಗಿದೆ. ಆದರೆ, ಯುವಕ ಮಾತ್ರ ಅಲ್ಲಿ ಲಭ್ಯವಿಲ್ಲ. ಹೀಗಾಗಿ, ಸುವರ್ಣಾವತಿ ಜಲಾಶಯಕ್ಕೆ ಹಾರಿರುವ ಶಂಕೆ ವ್ಯಕ್ತವಾಗಿದೆ. ವೀಡಿಯೋ ನೋಡಿ ಜಲಾಶಯ ವ್ಯಾಪ್ತಿ  ಪೊಲೀಸರಿಂದ ಪರಿಶೀಲನೆ ಮಾಡಲಾಗುತ್ತಿದೆ.

ಮೈಸೂರು ಶಾಂತಿ ಕಾಪಾಡಿದ ಚಾಮುಂಡೇಶ್ವರಿ ದೇವಿ: ಮಹಿಷ ದಸರವೂ ಇಲ್ಲ, ಚಾಮುಂಡಿ ಬೆಟ್ಟ ಚಲೋನೂ ಇಲ್ಲ!

ನಾನು ಪ್ರೀತಿ ಮಾಡಿದ ಹುಡುಗಿಯನ್ನು ಮದುವೆಯಾಗಿ ಜೀವನದಲ್ಲಿ ಗೆದ್ದಿದ್ದೇನೆ ಎಂದು ತಿಳಿದುಕೊಂಡಿದ್ದೆನು. ಆದರೆ, ನಾನು ಜೀವನದಲ್ಲಿ ಸೋತಿದ್ದೇನೆ. ಸೋತ ಮೇಲೆ ಬದುಕಿರುವುದಕ್ಕೆ ನಾನು ಅರ್ಹನಲ್ಲ. ನನ್ನ ಸಾವಿಗೆ ನಾನೇ ಕಾರಣ. ನನ್ನ ಅಣ್ಣ, ತಮ್ಮಂದಿರು, ನನ್ನ ಸಂಬಂಧಿಕರು ಯಾರೂ ನನ್ನ ಸಾವಿಗೆ ಕಾರಣವಲ್ಲ. ಜೀವನದಲ್ಲಿ ಸೋತಿರುವ ನಾನು ಸಾಯುತ್ತಿದ್ದೇನೆ ಎಂದು ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ವಿಡಿಯೋ ರೆಕಾರ್ಡ್‌ ಮಾಡಿ ಕಳುಹಿಸಿದ್ದಾನೆ. ನದಿಯಲ್ಲಿ ಯುವಕನ ಮೃತದೇಹಕ್ಕೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. 

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ