ಧಾರವಾಡ; ಕೊನೆಗೂ ದರ್ಶನ ನೀಡದ ದರ್ಶನ್.. ಕಾದಿದ್ದೆ ಬಂತು

Published : Feb 28, 2021, 08:34 PM IST
ಧಾರವಾಡ; ಕೊನೆಗೂ ದರ್ಶನ ನೀಡದ ದರ್ಶನ್.. ಕಾದಿದ್ದೆ ಬಂತು

ಸಾರಾಂಶ

ದರ್ಶನ  ನೀಡದ ದರ್ಶನ್/ ಧಾರವಾಡದಲ್ಲಿ ಕಾದು ಸುಸ್ತಾದ ಅಭಿಮಾನಿಗಳು/ ವಿನಯ್ ಕುಲಕರ್ಣಿ ಮನೆಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದ್ದು/  ಬಿಸಿಲಿನಲ್ಲಿ ಕಾದಿದ್ದೆ ಬಂತು

ಧಾರವಾಡ (ಫೆ. 28) ನೆಚ್ಚಿನ ನಟ ದರ್ಶನ ಅವರನ್ನು ನೋಡಲು ಅವರ ಅಭಿಮಾನಿಗಳು ಬಿರು ಬಿಸಿಲಿನಲ್ಲಿ ಗಂಟೆ ಗಟ್ಟಲೇ ಕಾಯ್ದ ಘಟನೆ ಭಾನುವಾರ ನಡೆಯಿತು. ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ದರ್ಶನ್ ಮೊದಲಿನಿಂದಲೂ ಸ್ನೇಹಿತರು. ಹೀಗಾಗಿ ಧಾರವಾಡಕ್ಕೆ ಬಂದಾಗಲೆಲ್ಲಾ ದರ್ಶನ್ ಅವರು ವಿನಯ ಕುಲಕರ್ಣಿ ಅವರನ್ನು ಭೇಟಿಯಾಗುತ್ತಿದ್ದರು.

ಇದೀಗ ವಿನಯ ಅವರು ಕಾರಾಗೃಹದಲ್ಲಿರುವ ಕಾರಣ ಅವರ ಕುಟುಂಬದವರಿಗೆ ಸಾಂತ್ವಾನ ಹೇಳಲು ಬರುವುದು ನಿಗದಿಯಾಗಿತ್ತು. ರಾಬರ್ಟ್ ಸಿನಿಮಾದ ಧ್ವನಿ ಸುರುಳಿ ಬಿಡುಗಡೆ ನಿಮಿತ್ತ ಹುಬ್ಬಳ್ಳಿಗೆ ಶನಿವಾರ ರಾತ್ರಿ ಆಗಮಿಸಿದ್ದ ದರ್ಶನ ಅವರು ಭಾನುವಾರ ಬೆಳಿಗ್ಗೆ 10.30ಕ್ಕೆ ಬರುತ್ತಾರೆ ಎನ್ನಲಾಗುತ್ತು.

'ಬೇಬಿ ಡ್ಯಾನ್ಸ್ ಪ್ಲೋರ್ ರೆಡಿ' ರಾಬರ್ಟ್ ವಿಡಿಯೋ ಸಾಂಗ್ ಸಖತ್ತಾಗಿದೆ

ಅಂತೆಯೇ ದರ್ಶನ ಅಭಿಮಾನಿಗಳು ಹಾಗೂ ವಿನಯ ಕುಲಕರ್ಣಿ ಅಭಿಮಾನಿಗಳು ನಿಗದಿತ ಸಮಯಕ್ಕೆ ವಿನಯ ಕುಲಕರ್ಣಿ ಮನೆ ಎದುರು ಹಾಜರಾಗಿದ್ದರು. ಅಂತೆಯೇ ಗದ್ದಲ-ಗೊಂದಲ ಸೃಷ್ಟಿಯಾಗದಂತೆ ಪೊಲೀಸರು ಬಂದೋಬಸ್ತ ನೀಡಿದ್ದರು. ಆದರೆ, ಮಧ್ಯಾಹ್ನ 2ರ ಹೊತ್ತಿನವರೆಗೆ ಅಭಿಮಾನಿಗಳು ದರ್ಶನ ಅವರಿಗಾಗಿ ಉರಿ ಬಿಸಿಲಿನಲ್ಲಿ ಕಾದಿದ್ದೆ ಬಂತು. ದರ್ಶನ ಮಾತ್ರ ಕೊನೆಗೂ ದರ್ಶನ ನೀಡಲೇ ಇಲ್ಲ. 

PREV
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
'63% ಭ್ರಷ್ಟಾಚಾರ' ಹೇಳಿಕೆ ವಿವಾದ: 'ನನ್ನ ಹೇಳಿಕೆ ತಿರುಚಲಾಗಿದೆ' ಉಪಲೋಕಾಯುಕ್ತ ನ್ಯಾ. ವೀರಪ್ಪ ಸ್ಪಷ್ಟನೆ