Chitradurga: ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಕಾರು ಅಪಘಾತ

Published : May 25, 2022, 10:04 AM IST
Chitradurga: ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಕಾರು ಅಪಘಾತ

ಸಾರಾಂಶ

*  ಹಿರಿಯೂರಿನ ಬಬ್ಬೂರು ಗ್ರಾಮದ ಸಮೀಪ ನಡೆದ ಅಪಘಾತ *  ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯವಿಲ್ಲ *  ಕಾರಿನಲ್ಲಿ ಶಾಸಕರು ಹಾಗೂ ವಾಹನ ಚಾಲಕ ಪ್ರಯಾಣ   

ಚಿತ್ರದುರ್ಗ(ಮೇ.25):  ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಶಾಸಕ ಟಿ. ರಘುಮೂರ್ತಿ ಕಾರು ಹಿರಿಯೂರಿನ ಬಬ್ಬೂರು ಗ್ರಾಮದ ಸಮೀಪ ಅಪಘಾತಕ್ಕೆ ಈಡಾದ ಘಟನೆ ನಿನ್ನೆ(ಮಂಗಳವಾರ) ನಡೆದಿದೆ. 

ಶಾಸಕರ ಕಾರಿಗೆ ಜೈಲೋ ಕಾರೊಂದು ಬಂದು ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಶಾಸಕರ ಕಾರಿನ ಮುಂಭಾಗ ಜಖಂ ಆಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ಕಾರಿನಲ್ಲಿ ಶಾಸಕರು ಹಾಗೂ ವಾಹನ ಚಾಲಕ ಪ್ರಯಾಣಿಸುತ್ತಿದ್ದರು ಅಂತ ತಿಳಿದು ಬಂದಿದೆ.  

ಹುಬ್ಬಳ್ಳಿ ಬಳಿ ಭೀಕರ ಅಪಘಾತ: ಜವರಾಯನ ಅಟ್ಟಹಾಸಕ್ಕೆ 8 ಮಂದಿ ಬಲಿ

ಶಾಸಕರು ಚಳ್ಳಕೆರೆ ಪಟ್ಟಣದಿಂದ ಮಸ್ಕಲ್‌ ಗೊಲ್ಲರಹಟ್ಟಿಗೆ ತೆರಳುತ್ತಿದ್ದರು. ಆ ಸಂದರ್ಭದಲ್ಲಿ ಎದುರುಗಡೆಯಿಂದ ಬಂದ ಕಾರೊಂದು ಶಾಸಕರ ಕಾರಿಗೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಹಿರಿಯೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಹಿರಿಯೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದೆ.  
 

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ