
ಉತ್ತರಕನ್ನಡ(ಅ.04): ತ್ರಿಶೂಲ ಹಿಡಿಯುವುದಕ್ಕೂ, ತಲ್ವಾರ್ ಹಿಡಿಯುವುದಕ್ಕೂ ವ್ಯತ್ಯಾಸವಿದೆ. ತ್ರಿಶೂಲ ಹಿಡಿದವರು ಯಾರ ಮೇಲೂ ಕಲ್ಲು ಎಸೆಯಲ್ಲ. ನಾಲ್ಕೇ ಜನ ತಲ್ವಾರ್ ಹಿಡಿದವರು ಇಡೀ ಶಿವಮೊಗ್ಗದ ಮೇಲೆ ಕಲ್ಲು ಎಸೆದ್ರು. ತ್ರಿಶೂಲ ಹಿಡಿದವರ ಭಾವನೆ ಏನು, ತಲ್ವಾರ ಹಿಡಿದರವ ಭಾವನೆ ಏನು ಅಂತಾ ಎಲ್ಲರಿಗೂ ಗೊತ್ತಾಗುತ್ತೆ ಎಂದು ಮಧು ಬಂಗಾರಪ್ಪ ಹೇಳಿಕೆ ಖಂಡಿಸಿ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯಿಸಿದ್ದಾರೆ.
ಜನಮನಮನ ಬೈಕ್ ರ್ಯಾಲಿ ನಡೆಸಿಕೊಂಡು ಕಾರವಾರಕ್ಕೆ ಬಂದ ವೇಳೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಹಿಂದೂಗಳು ಪ್ರಚೋದನೆಗೆ ಒಳಗಾಗಿಲ್ಲ ಅಂತಾ ಪೊಲೀಸರನ್ನೇ ಬಡಿದಿದ್ದಾರೆ. ಶಿವಮೊಗ್ಗ ಘಟನೆಯನ್ನು ಖಂಡಿಸುವ ಮನಸ್ಥಿತಿ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ. ಕಾಂಗ್ರೆಸ್ ಸರ್ಕಾರದಲ್ಲಿರುವ ಮಂತ್ರಿಗಳು ಸೇರಿದಂತೆ ಎಲ್ಲರೂ ತಾವು ಮುಸ್ಲಿಮರಿಗೆ ಹತ್ತಿರ ಅಂತಾ ತೋರಿಸಲು ಹೊರಟಿದ್ದಾರೆ. ಅದರ ಪ್ರತಿಫಲವಾಗಿ ಊರು ಊರುಗಳಲ್ಲಿ ದಂಗೆ ವಾತಾವರಣ ನಿರ್ಮಾಣಗೊಳ್ಳುತ್ತಿದೆ. ಈ ಎಲ್ಲಾ ಧಂಗೆಗಳ ಹಿಂದೆ ಕಾಂಗ್ರೆಸ್ ಸರ್ಕಾರದ ಬೆಂಬಲವಿದೆ ಎಂಬುದು ದುರದೃಷ್ಟಕರ. ಕರ್ನಾಟಕದಲ್ಲಿ ಮುಂಬರುವ ದಿನಗಳು ಹೇಗಿರಲಿವೆ ಎಂದು ಅವರು ತೋರಿಸಲು ಹೊರಟಿದ್ದಾರೆ. ಬೇರೆ ಭಾಗದಿಂದ ಬಂದಿರುವವರ ಕೃತ್ಯ ಎಂದು ನಾನು ಭಾವಿಸಲ್ಲ, ಯಾಕಂದ್ರೆ ಹೊರಗಿನಿಂದ ಬರುವವರಿಗೆ ಲಿಂಕ್ ಮಾಡಿಕೊಡುವವರೇ ಸ್ಥಳೀಯರು. ಎನ್‌ಐಎ ಪ್ರವೇಶಿಸದಿದ್ದರೆ ಶಿವಮೊಗ್ಗದಲ್ಲಿ ಬಾಂಬ್ ತಯಾರಾಗ್ತಿದೆ ಎಂದು ಗೊತ್ತಾಗ್ತಿರ್ಲಿಲ್ಲ. ತಲ್ವಾರು ಹಿಡಿದುಕೊಂಡು ಬರುವವರ ಮುಂದೆ ಪಾಪ ಲಾಠಿ ಹಿಡಿದುಕೊಂಡು ಬರುವ ಪೊಲೀಸರಾದ್ರೂ ಏನು ಮಾಡ್ತಾರೆ. ಮುಸಲ್ಮಾನರ ಮಾನಸಿಕ ಸ್ಥಿತಿ ಎಷ್ಟು ಕೆಟ್ಟದ್ದೋ ಅದಕ್ಕಿಂತ ಹೆಚ್ಚು ಕೆಟ್ಟ ಸ್ಥಿತಿ ಕಾಂಗ್ರೆಸಿಗರಿಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಯಾವುದು ಸರಿಯಿಲ್ವಾ?: ತಮ್ಮದೇ ಸರ್ಕಾರದ ವಿರುದ್ಧ ಸಿಡಿದೆದ್ದ ' ಕೈ' ಶಾಸಕ..!
ದೇಶದಲ್ಲಿ ಎಲ್ಲೆಲ್ಲಿ ಕಾಂಗ್ರೆಸ್ ಸರ್ಕಾರವಿದೆ ಅಲ್ಲೆಲ್ಲಾ ಇಂತವರು ರಾಜಾರೋಶವಾಗಿ ಓಡಾಡುತ್ತಿದ್ದಾರೆ. ಸರ್ಕಾರ ಅವರಿಗೆ ಏನೂ ಮಾಡುವುದಿಲ್ಲ ಅನ್ನೋ ಧೈರ್ಯ ಅವರಿಗಿದೆ. ಹೀಗಾಗಿ ಅವರ ಮೇಲೆ ಏನೂ ಕ್ರಮ ಆಗುವುದಿಲ್ಲ. ಕರ್ನಾಟಕದಲ್ಲಿ ಬರುವ ದಿನಗಳು ಭಯಾನಕ ವಾಗಿರುತ್ತೆ. ಈಗಾಗಲೇ ಅವರು ಎಚ್ಚರಿಕೆ ನೀಡುತ್ತಿದ್ದಾರೆ. ಕರ್ನಾಟಕಕ್ಕೆ ಬೆಂಕಿ ಹಚ್ಚುತ್ತೇವೆ ಅನ್ನೋ ಮಾತನ್ನು ಹೇಳುತ್ತಿದ್ದಾರೆ. ಇದಕ್ಕೆಲ್ಲಾ ಮುಂದೆ ಕಾರಣ ಸಿದ್ಧರಾಮಯ್ಯನವರೇ ಆಗಲಿದ್ದಾರೆ ಅನ್ನೋದನ್ನ ನಾವು ನೋಡುವವರಿದ್ದೇವೆ ಎಂದು ಹೇಳಿದರು. ಕಳೆದ 3-4 ವರ್ಷದಲ್ಲಿ ಶಿವಮೊಗ್ಗದಲ್ಲಿ ಇಂತಹ ಕೋಮುಗಲಭೆಗಳು ಸೈಲೆಂಟ್ ಇದ್ದವು. ಈ ರೀತಿ ಮುಕ್ತವಾಗಿ ಬೀದಿಗೆ ಬಂದು ಗಲಭೆ ಮಾಡುತ್ತಿರಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ಅವರು ಬಾಲ ಬಿಚ್ಚಿದ್ದಾರೆ. ಶಿವಮೊಗ್ಗದ ಮುಸ್ಲಿಮರೇ ತಮ್ಮ ನೆಟ್ವರ್ಕ್ ಮೂಲಕ ಹೊರಗಿನವರನ್ನು ಕರೆಯಿಸಿ ಇಂತಹ ಗಲಭೆ ಎಬ್ಬಿಸ್ತಿದ್ದಾರೆ. ಹೊರಗಿನವರು ಬಂದು ಇಂತಹ ಕೃತ್ಯ ಮಾಡಿದ್ದಾರೆ ಅಂತಾ ಶಿವಮೊಗ್ಗದವರನ್ನು ಬಿಡುವ ಹಾಗಿಲ್ಲ. ಶಿವಮೊಗ್ಗ ಸ್ಲೀಪರ್ ಸೆಲ್‌ಗಳ ಅಡ್ಡ ಆಗಿದೆ. ಅವರಿಗೆ ಮಂಗಳೂರಲ್ಲಿ ಇಂತಹ ಕೃತ್ಯ ಮಾಡಲಾಗಿಲ್ಲ ಅಂತಾ ಶಿವಮೊಗ್ಗಕ್ಕೆ ಶಿಫ್ಟ್ ಮಾಡಿದ್ದಾರೆ. ಶಿವಮೊಗ್ಗ ಈಗ ಅವರ ಬ್ರೀಡಿಂಗ್ ಸೆಂಟರ್ ಆಗುತ್ತಿದೆ. ಮುಂದಿನ ದಿನಗಳಲ್ಲಿ ಐಸಿಸ್ ಮತ್ತು ಎಲ್‌ಇಟಿಗೆ ಶಿವಮೊಗ್ಗದಿಂದಲೇ ಕೆಲವು ಮುಸ್ಲಿಂ ಯುವಕರು ಹೋದರೂ ಆಶ್ಚರ್ಯವಿಲ್ಲ.ಶಿವಮೊಗ್ಗ ಈಗ ತುಂಬಾ ಅಪಾಯಕಾರಿಯಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಕಾಂಗ್ರೆಸ್ ಪಕ್ಷ ಇವರ ರಕ್ಷಣೆಗೆ ಇದೆ ಎಂಬ ಕಾರಣಕ್ಕೆ ಶಿವಮೊಗ್ಗದಲ್ಲಿ ಈ ಘಟನೆ ನಡೆದಿದೆ. ಸ್ವತಃ ಗೃಹ ಸಚಿವರೇ ಜೈಲರ್‌ಗೆ ಪತ್ರ ಬರೆದು ಅಮಾಯಕರನ್ನು ಒಳಗೆ ಹಾಕಿದ್ದಾರೆ ಅವರನ್ನು ಬಿಡಿಸಿ ಅಂತಾ ಬರೀತಾರೆ. ಇನ್ನು ಯಾವ ಧೈರ್ಯದ ಮೇಲೆ ಪೊಲೀಸರು ಕೆಲಸ ಮಾಡಬೇಕು. ತಲ್ವಾರು ಹಿಡಿದುಕೊಂಡು ಬರುವ ಪುಂಡರ ಮುಂದೆ ಲಾಠಿ ಹಿಡಿದ ಪೊಲೀಸರು ಏನು ಮಾಡುವುದಕ್ಕೆ ಆಗುತ್ತೆ. ಪ್ರಾಣ ಪಣಕ್ಕಿಟ್ಟು ಹಿಡಿದುಕೊಂಡು ಬಂದರೆ ಗೃಹ ಸಚಿವರು ಪತ್ರ ಬರೆದು ಬಿಡು ಅಂದ್ರೆ ಏನು ಮಾಡುವುದಕ್ಕೆ ಆಗುತ್ತೆ. ಒಂದು ಕಡೆ ಪತ್ರ ಬರೆದು ಇಂತಹ ರಾಕ್ಷಸೀ ಪ್ರವೃತ್ತಿಯವರನ್ನು ಬಿಡಿಸಿದ್ರೆ, ಮತ್ತೊಂದು ಕಡೆ ಜಮೀರ್ ನಂತವರು ಹಾರ ಹಾಕ್ತಾರೆ. ಅವರ ಮನೆಗೆ ದೊಡ್ಡ ಮೊತ್ತದ ಹಣವನ್ನು ಮೀಡಿಯಾಗಳ ಮುಂದೆಯೇ ಕೊಡುತ್ತಾರೆ. ಅವರಿಗೆ ಗೊತ್ತಾಗಿದೆ ಕಾಂಗ್ರೆಸ್ ಸರ್ಕಾರ ಇರುವಾಗಲೇ ನಾವು ಏನು ಮಾಡಬೇಕು ಅಂತಾ. ಚುನಾವಣೆ ನಡೆಯುವ ಮುನ್ನ ಮೂರು ತಿಂಗಳು ಮಾತ್ರ ಅವರು ಶಾಂತವಾಗಿದ್ರು. ಯಾಕೆಂದರೆ ಚುನಾವಣೆ ಪೂರ್ವದಲ್ಲಿ ಗಲಾಟೆ ಮಾಡಿದ್ರೆ ಹಿಂದೂಗಳು ಒಟ್ಟಾಗುತ್ತಾರೆ ಎಂಬ ಭಯ ಇತ್ತು. ಇನ್ನು ಮುಂದಿನ ಐದು ವರ್ಷಗಳ ಕಾಲ ನಿರಂತರ ಇಂತಹ ಕೃತ್ಯಗಳು ನಡೆಯುತ್ತವೆ. ಯಾಕೆಂದರೆ ಕಾಂಗ್ರೆಸ್ ಪಕ್ಷವೇ ಅವರ ಪರವಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ದೂರಿದರು.