ಉತ್ತರಕನ್ನಡ: ಗಾಂಧಿ ಜಯಂತಿ ದಿನ ಶಾಸ್ತ್ರೀಜಿ ಮರೆತ ಹಳಿಯಾಳ ತಾಲೂಕಾಡಳಿತ

By Girish Goudar  |  First Published Oct 3, 2023, 11:00 PM IST

ಉತ್ತರಕನ್ನಡ ಜಿಲ್ಲೆಯ ಹಳಿಯಾಳ ತಹಸೀಲ್ದಾರ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಾಸ್ತ್ರಿ ಅವರ ಭಾವಚಿತ್ರವನ್ನು ಇರಿಸದೇ ತಾಲೂಕಾಡಳಿತ ಅಗೌರವ ತೋರಿದೆ.


ಶಿರಸಿ(ಅ.03):  ಗಾಂಧೀಜಿ ಹಾಗೂ ಭಾರತದ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮದಿನದಂದು ನಿಯಮಗಳ ಪ್ರಕಾರ ಇಬ್ಬರ ಫೋಟೋಗಳನ್ನಿಟ್ಟು ಇಟ್ಟು ಗೌರವ ಸಲ್ಲಿಸಬೇಕು. ಆದರೆ, ಉತ್ತರಕನ್ನಡ ಜಿಲ್ಲೆಯ ಹಳಿಯಾಳ ತಹಸೀಲ್ದಾರ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಾಸ್ತ್ರಿ ಅವರ ಭಾವಚಿತ್ರವನ್ನು ಇರಿಸದೇ ತಾಲೂಕಾಡಳಿತ ಅಗೌರವ ತೋರಿದೆ.

ಹಳಿಯಾಳ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಮತ್ತು ಪುರಸಭೆ ಆಶ್ರಯದಲ್ಲಿ ಪಟ್ಟಣದ ಆಡಳಿತ ಸೌಧದ ಮುಂಭಾಗ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿಯನ್ನು ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ಆಚರಿಸಲಾಯಿತು. ಸ್ವಚ್ಚತಾ ಕಾರ್ಯಕ್ಕೂ ಮೊದಲು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ " ಮೇರಿ ಮಾಟಿ ಮೇರಿ ದೇಶ" ಅಮೃತ್ ಕಳಶ ಯಾತ್ರೆಗೆ  ತಹಶೀಲ್ದಾರ್ ಜಿ.ಕೆ. ರತ್ನಾಕರ್ ಚಾಲನೆ ಕೂಡಾ ನೀಡಿದರು. 

Tap to resize

Latest Videos

undefined

ಕಾಂಗ್ರೆಸ್ ಸರ್ಕಾರದಲ್ಲಿ ಯಾವುದು ಸರಿಯಿಲ್ವಾ?: ತಮ್ಮದೇ ಸರ್ಕಾರದ ವಿರುದ್ಧ ಸಿಡಿದೆದ್ದ ' ಕೈ' ಶಾಸಕ..!

ಕಳಶ ಯಾತ್ರೆಯೂ ಹಳಿಯಾಳ ಪಟ್ಟಣದ ಶಿವಾಜಿ ವೃತ್ತದಿಂದ ಪ್ರಾರಂಭಗೊಂಡು ವನಶ್ರೀ ವೃತ್ತ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವೃತ್ತ, ಮಾರುಕಟ್ಟೆ ರಸ್ತೆಯ ಮೂಲಕ ಸಂಚರಿಸಿ ತಾಲೂಕಾ ಆಡಳಿತ ಸೌಧದ ಎದುರು ಸಮಾರೋಪಗೊಂಡಿತ್ತು. ಇಷ್ಟೆಲ್ಲಾ ಮಾಡಿದ್ದ ಹಳಿಯಾಳ ತಾಲೂಕಾಡಳಿತಕ್ಕೆ ಗಾಂಧೀಜಿ ಅವರ ಭಾವಚಿತ್ರದ ಪಕ್ಕದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರವನ್ನು ಇರಿಸಿ ಗೌರವಿಸಬೇಕಾಗಿದ್ರೂ ತಾಲೂಕಾಡಳಿತ ಮರೆತು ನಿರ್ಲಕ್ಷ್ಯ ತೋರಿದೆ.‌ 

ಈ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಘಸ್ತೆ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ್ ಮಹಾಲೆ, ಪುರಸಭೆ ಮುಖ್ಯಾಧಿಕಾರಿ ಅಶೋಕ್ ಸಾಳೇನ್ನವರ, ಸಿಪಿಐ ಸುರೇಶ್ ಶಿಂಗೆ , ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಜೀಜಾಮಾತಾ ಸಂಘಟನೆಯ ಮಂಗಲಾ ಕಶೀಲಕರ, ಜಯ ಕರ್ನಾಟಕ ಸಂಘಟನೆಯ ಶಿರಾಜ ಮುನವಳ್ಳಿ ಮತ್ತಿತರರು ಭಾಗವಹಿಸಿದ್ದರು.

click me!