ಹಂಪಿ ಉತ್ಸವಕ್ಕೆ ಜಾನಪದ ಅಕಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿಗೆ ಆಹ್ವಾನ ನೀಡದ ಜಿಲ್ಲಾಡಳಿತ| ಹಂಪಿ ಉತ್ಸವಕ್ಕೆ ಜಿಲ್ಲೆಯ ಕಲಾವಿದರಿಗೆ ಆಹ್ವಾನಿಸದಿರುವುದು ಜಿಲ್ಲಾಡಳಿತ ಅವಮಾನ ಮಾಡಿದೆ ಎಂಬ ಆರೋಪ|
ಬಳ್ಳಾರಿ(ಜ.11): ಜಿಲ್ಲೆಯಲ್ಲಿ ನಡೆಯುತ್ತಿರುವ ಹಂಪಿ ಉತ್ಸವಕ್ಕೆ ಜಾನಪದ ಅಕಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರನ್ನ ಆಹ್ವಾನಿಸದೆ ಜಿಲ್ಲಾಡಳಿತ ಕಡೆಗಣಿಸಿದೆ ಎಂಬ ಆರೋಪ ಕೇಳಿ ಬಂದಿದೆ.
ಜ. 10 ರಿಂದ ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ಚಾಲನೆ ನೀಡಲಾಗಿದೆ. ಆದರೆ ಜಿಲ್ಲೆಯ ಕಲಾವಿದರಿಗೆ ಆಹ್ವಾನಿಸದಿರುವುದು ಜಿಲ್ಲಾಡಳಿತ ಅವಮಾನ ಮಾಡಿದೆ ಎಂದು ಆರೋಪಿಸಲಾಗಿದೆ. ರಾಷ್ಟ್ರ ಮಟ್ಟದ ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಅವರಿಗೆ ಬಳ್ಳಾರಿ ಜಿಲ್ಲಾಡಳಿತ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ ಎಂದ ಆರೋಪ ವ್ಯಕ್ತವಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹಂಪಿ ಉತ್ಸವದಲ್ಲಿ ಜಾನಪದ ಕಲೆಗಳಿಗೆ ಹೆಚ್ಚಿನ ಆದ್ಯತೆ ಇರುತ್ತದೆ. ಆದರೆ ಇದ್ಯಾವುದನ್ನ ಲೆಕ್ಕಿಸದೆ ಜಿಲ್ಲಾಡಳಿತ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರಿಗೆ ಆಹ್ವಾನ ನೀಡಿಲ್ಲ. ಆಮಂತ್ರಣ ಪತ್ರಿಕೆಯಲ್ಲೂ ಮಂಜಮ್ಮ ಜೋಗತಿಯ ಹೆಸರು ಪ್ರಸ್ತಾಪವಾಗಿಲ್ಲ.
ಈ ಬಗ್ಗೆ ಮಾತನಾಡಿದ ಮಂಜಮ್ಮ ಜೋಗತಿ ಅವರು, ಐತಿಹಾಸಿಕ ಹಂಪಿ ಉತ್ಸವಕ್ಕೆ ತಮಗೆ ಆಹ್ವಾ ನೀಡದಿರುವುದು ಮನಸಸ್ಸಿಗೆ ನೋವಾಗಿದೆ. ಸೌಜನ್ಯಕ್ಕೂ ಒಂದು ಮಾತು ಬನ್ನಿ ಅಂತ ಕರೆ ಮಾಡಿಲ್ಲ, ನನ್ನ ತವರು ಜಿಲ್ಲೆಯಲ್ಲೇ ನನಗೆ ಅವಮಾನ ಮಾಡಿದ್ದಾರೆ.ಇದು ಇಡೀ ಜಾನಪದ ಕಲಾವಿದರಿಗೆ ಮಾಡಿದ ಅವಮಾನವಾಗಿದೆ ಎಂದು ಹೇಳಿದ್ದಾರೆ.
ಇತಿಹಾಸದಲ್ಲಿ ಮಂಗಳಮುಖಿ ಒಬ್ಬರು ಜನಪದ ಅಕಾಡೆಮೆ ಅಧ್ಯೆಕ್ಷೆ ಆಗಿರೋದು ಇದೇ ಮೊದಲು. ಆದರೆ ಹಂಪಿ ಉತ್ಸವಕ್ಕೆ ಮಂಜಮ್ಮ ಜೋಗತಿ ಅವರಿಗೆ ಆಹ್ವಾನ ನೀಡದಿರುವುದು ಮಾತ್ರ ವಿಪರ್ಯಾಸ.