ಬೌನ್ಸ್‌ನಲ್ಲಿ ಬರ್ತಾರೆ ಸರಗಳ್ಳರು..! ಬಾಡಿಗೆ ಬೈಕ್ ಪಡೆದು ಕೃತ್ಯ

Suvarna News   | Asianet News
Published : Dec 12, 2019, 11:52 AM ISTUpdated : Dec 12, 2019, 12:38 PM IST
ಬೌನ್ಸ್‌ನಲ್ಲಿ ಬರ್ತಾರೆ ಸರಗಳ್ಳರು..! ಬಾಡಿಗೆ ಬೈಕ್ ಪಡೆದು ಕೃತ್ಯ

ಸಾರಾಂಶ

ಬೈಕ್ ನಂಬರ್ ಹಿಡಿದು ತಮ್ಮನ್ನು ಸೆರೆ ಹಿಡಿಯುವುನ್ನು ತಡೆಯಲು ಇದೀಗ ಬಾಡಿಗೆ ಬೈಕ್‌ನಲ್ಲಿ ಸಾವರಿ ನಡೆಸುತ್ತಿದ್ದಾರೆ ಸರಗಳ್ಳರು. ಸರಗಳ್ಳರು ಫೇಮಸ್ ರೆಂಟಲ್ ವೆಹಿಕಲ್ ಬೌನ್ಸ್ ದುರುಪಯೋಗ ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ.

ಬೆಂಗಳೂರು(ಡಿ.12): ಸರಗಳ್ಳರ ಹಾವಳಿ ಮಿತಿ ಮೀರಿದ್ದು, ಎಲ್ಲೆಡೆ ಸಿಸಿಟಿವಿ ಅಳವಡಿಸುತ್ತಿರೋದರ ಪರಿಣಾಮ ಕಳ್ಳರು ಖತರ್ನಾಕ್ ಐಟಿಯಾ ಮಾಡಿಕೊಂಡಿದ್ದಾರೆ. ಬೈಕ್ ನಂಬರ್ ಹಿಡಿದು ತಮ್ಮನ್ನು ಸೆರೆ ಹಿಡಿಯುವುನ್ನು ತಡೆಯಲು ಇದೀಗ ಬಾಡಿಗೆ ಬೈಕ್‌ನಲ್ಲಿ ಸಾವರಿ ನಡೆಸುತ್ತಿದ್ದಾರೆ ಸರಗಳ್ಳರು. ಸರಗಳ್ಳರು ಫೇಮಸ್ ರೆಂಟಲ್ ವೆಹಿಕಲ್ ಬೌನ್ಸ್ ದುರುಪಯೋಗ ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ.

ಸರಗಳ್ಳತನಕ್ಕೆ ಬ್ಲಾಕ್ ಪಲ್ಸರ್ ಬಿಟ್ಟು ಎಲ್ಲೋ ಬೌನ್ಸ್ ಮೇಲೆ ಬರುತ್ತಿರುವ ಕಳ್ಲರು ವೆಹಿಕಲ್ ಮೂಲಕ ತಮ್ಮನ್ನು ಪತ್ತೆ ಹಚ್ಚದಂತೆ ಸೇಫ್ ಆಗುತ್ತಿದ್ದಾರೆ. ಕ್ರೈಂ ಆ್ಯಂಗಲ್ ಚೇಂಜ್ ಮಾಡಿದ ನಟೋರಿಯಸ್ ಸರಗಳ್ಳರು ಬಾಡಿಗೆ ಬೈಕ್‌ಗಳನ್ನ ಬಳಸಿ ಸರಗಳ್ಳತನಕ್ಕೆ ಇಳಿದಿದ್ದಾರೆ.

ಯೂಟ್ಯೂಬ್ ನೋಡಿ ಕಳ್ಳತನಕ್ಕಿಳಿದ ಖತರ್ನಾಕ್ ಕಳ್ಳರು..!

ಕೆ. ಆರ್. ಪುರಂನಲ್ಲಿ ನಡೆದ ಲೈವ್ ಚೈನ್ ಸ್ನ್ಯಾಚಿಂಗ್ ದೃಶ್ಯ ಸಿಸಿಟಿವಿಯಲ್ಲಿ‌ ಸೆರೆಯಾಗಿದ್ದು, ಮದರ್ ತೆರೆಸಾ ಸ್ಕೂಲ್ ಬಳಿಯ ಆರನೇ ಕ್ರಾಸ್‌ನಲ್ಲಿ ಕಳೆದ 10 ರಂದು ಘಟನೆ ನಡೆದಿದೆ.

ಬೌನ್ಸ್ ಬೈಕ್‌ನಲ್ಲಿ ಬಂದ ಕಳ್ಳರು ಮಹಿಳೆಯ ಕುತ್ತಿಗೆಗೆ ಕೈ ಚೈನ್ ಕಿತ್ತು ಪರಾರಿಯಾಗಿದ್ದಾರೆ. ಮಂಕಿ ಕ್ಯಾಪ್ ನಲ್ಲಿದ್ದ ಹಿಂಬದಿ ಸವಾರ ವಾಪಸ್ ಬಂದು ಚೈನ್ ಕಿತ್ತುಕೊಳ್ಳುತ್ತಾನೆ. ನಂತರ ದೊಣ್ಣೆಯಿಂದ ಮಹಿಳೆಯ ತಲೆಗೆ ಬಡಿದು ಹಲ್ಲೆ ಮಾಡಿದ್ದಾರೆ. ಜನರು ಹತ್ತಿರ ಬರುತ್ತಿರುವುದನ್ನು ಗಮನಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಕೆ. ಆರ್. ಪುರಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಬೌನ್ಸ್ ಸ್ಕೂಟರ್‌ಗೆ ಬೆಂಕಿ; ಆರೋಪಿಗಳನ್ನು ಬಂಧಿಸಿದ ಪೊಲೀಸ್!

PREV
click me!

Recommended Stories

ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್
ಗೆಳೆಯರ ಜೊತೆ ಟ್ರಿಪ್ ಹೋಗಿದ್ದ ಬೆಂಗಳೂರು ನಿವಾಸಿ ಗೋವಾ ನೈಟ್ ಕ್ಲಬ್ ದುರಂತದಲ್ಲಿ ಮೃತ