ರೋಗ ಮುಕ್ತ, ಸರಳ ಜೀವನಕ್ಕೆ ಸಿರಿಧಾನ್ಯ ಅವಶ್ಯಕ

By Kannadaprabha News  |  First Published Sep 24, 2023, 9:18 AM IST

ಆಧುನಿಕ ಆಹಾರ-ವಿಹಾರ ಶೈಲಿಯಿಂದ ಮಾನವ ಇನ್ನಿಲ್ಲದ ರೋಗಗಳಿಗೆ ಬಲಿಯಾಗುತ್ತಿದ್ದು, ಉತ್ತಮ ಆರೋಗ್ಯವನ್ನು ಪಡೆಯಬೇಕಾದರೆ ಸಿರಿಧಾನ್ಯಗಳ ಅವಶ್ಯಕತೆ ಇದ್ದು, ಇದರ ಬಳಕೆಯಿಂದ ರೋಗ ಮುಕ್ತ ಮತ್ತು ಸರಳ ಜೀವನ ನಡೆಸಲು ಸಾಧ್ಯ ಎಂದು ತುಮಕೂರು ಉಪ ಕೃಷಿ ನಿರ್ದೇಶಕ ಅಶೋಕ್ ತಿಳಿಸಿದರು.


  ತಿಪಟೂರು :  ಆಧುನಿಕ ಆಹಾರ-ವಿಹಾರ ಶೈಲಿಯಿಂದ ಮಾನವ ಇನ್ನಿಲ್ಲದ ರೋಗಗಳಿಗೆ ಬಲಿಯಾಗುತ್ತಿದ್ದು, ಉತ್ತಮ ಆರೋಗ್ಯವನ್ನು ಪಡೆಯಬೇಕಾದರೆ ಸಿರಿಧಾನ್ಯಗಳ ಅವಶ್ಯಕತೆ ಇದ್ದು, ಇದರ ಬಳಕೆಯಿಂದ ರೋಗ ಮುಕ್ತ ಮತ್ತು ಸರಳ ಜೀವನ ನಡೆಸಲು ಸಾಧ್ಯ ಎಂದು ತುಮಕೂರು ಉಪ ಕೃಷಿ ನಿರ್ದೇಶಕ ಅಶೋಕ್ ತಿಳಿಸಿದರು.

ತಾಲೂಕಿನ ಪರುವಗೊಂಡನಹಳ್ಳಿಯಲ್ಲಿ ವಿಶ್ವವಿದ್ಯಾನಿಲಯ ಬೆಂಗಳೂರು, ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರ, ಕೊನೇಹಳ್ಳಿ ವತಿಯಿಂದ ಆಯೋಜಿಸಿದ್ದ ಸಿರಿಧಾನ್ಯ ಪಾಕಸ್ಪರ್ಧೆ ಮತ್ತು ಆಹಾರ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನರ ಜೀವನಶೈಲಿ ಬದಲಾಗುತ್ತಿದ್ದಂತೆ ಸಾಂಪ್ರದಾಯಿಕ ಹಾಗೂ ಆರೋಗ್ಯಕರ ಅಡುಗೆ ತಿನಿಸುಗಳು ಮರೆತೆ ಹೋಗಿವೆ. ಸಿರಿಧಾನ್ಯಗಳು ಪೌಷ್ಟಿಕತೆಗೆ ಹೆಸರುವಾಸಿಯಾಗಿದ್ದು ಹೆಚ್ಚಿನ ಪ್ರಮಾಣದ ಪ್ರೋಟಿನ್, ನಾರಿನಾಂಶವಿರುತ್ತದೆ ಎನ್ನುವುದರ ಜೊತೆಗೆ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳ ಕಡಗೆ ಹೆಚ್ಚು ಗಮನಹರಿಸಬೇಕೆಂದು ತಿಳಿಸಿದರು.

Latest Videos

undefined

ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥ ಡಾ. ವಿ. ಗೋವಿಂದಗೌಡ ಮಾತನಾಡಿ, ಸಿರಿಧಾನ್ಯಗಳನ್ನು ಬೆಳೆಯಲು ಫಲವತ್ತಾದ ಭೂಮಿಯೇ ಬೇಕೆಂದಿಲ್ಲ್ಲ. ವಿಶಿಷ್ಟ ಗುಣಗಳಿರುವ ಸಿರಿಧಾನ್ಯಗಳನ್ನು ಕಡಿಮೆ ಮಳೆಯಾಶ್ರಿತ ಪ್ರದೇಶದಲ್ಲಿಯೂ ಬೆಳೆಯಬಹುದು. ಸಿರಿಧಾನ್ಯಗಳಿಂದ ಸಿದ್ಧಪಡಿಸಿದ ಅಡುಗೆಯ ರುಚಿಕರವಾಗಿರುತ್ತದೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಮಾಡುವುದರಿಂದ ಹೆಚ್ಚು ಆದಾಯ ಪಡೆಯಬಹುದು ಎಂದರು.

ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ ಮಾತನಾಡಿ, ಸಿರಿಧಾನ್ಯಗಳು ಅಂದು ಬಡವರ ಆಹಾರವಾಗಿತ್ತು ಇಂದು ಶ್ರೀಮಂತರ ಆಹಾರವಾಗಿದೆ. ಸಿರಿಧಾನ್ಯಗಳನ್ನು ಬಳಸಿದರೆ ಬಿ.ಪಿ, ಮಧುಮೇಹದಂತಹ ಕಾಯಿಲೆಗಳಿಂದ ದೂರವಿರಬಹುದಾಗಿದ್ದು, ಇಂತಹ ಪ್ರದರ್ಶನಗಳಿಂದ ಜನರಲ್ಲಿ ಅರಿವು ಮೂಡುತ್ತದೆ ಎಂದರು.

ಈ ಸಂದರ್ಭದಲ್ಲಿ ೩೫ಕ್ಕೂ ಹೆಚ್ಚು ಮಹಿಳೆಯರು ಸಿರಿಧಾನ್ಯಗಳಿಂದ ತಯಾರಿಸಿದ ಖಾದ್ಯಗಳನ್ನು ಪ್ರದರ್ಶಿಸಿದ್ದು ಅತ್ಯುತ್ತಮ ಸಿರಿಧಾನ್ಯ ಖಾದ್ಯವನ್ನು ತಯಾರಿಸಿದ ಮೊದಲ ೫ ಜನ ಮಹಿಳೆಯರಿಗೆ ಪ್ರಶಸ್ತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಕೆ. ನಿತ್ಯಶ್ರೀ, ಡಾ. ಕೆ. ಕೀರ್ತಿಶಂಕರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಕೇಶವಮೂರ್ತಿ, ಕ್ಷೇತ್ರ ಅಧೀಕ್ಷಕ ಡಾ. ಯೋಗೀಶ್, ಸಾರ್ಥವಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಭವ್ಯ ನವೀನ್, ಸದಸ್ಯರಾದ ರೇಣುಕಮೂರ್ತಿ, ಪವಿತ್ರ, ರತ್ನ, ಪಿಡಿಓ ಅಡವೀಶ್‌ಕುಮಾರ್, ತಡಸೂರಿನ ಪ್ರಗತಿ ಪರ ರೈತ ಯೋಗಾನಂದಮೂರ್ತಿ, ಶಿಕ್ಷಕರಾದ ಮೈತ್ರ, ಶಶಿಕಲಾದೇವಿ, ಧನಲಕ್ಷ್ಮಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

click me!