ಅಶ್ಲೀಲ ಜಾಲತಾಣ : ಕೇಂದ್ರದಿಂದ ಕಠಿಣ ಕ್ರಮ

By Kannadaprabha NewsFirst Published Sep 10, 2020, 3:32 PM IST
Highlights

ಅಶ್ಲೀಲ ಜಾಲತಾಣದ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ನಿರ್ಧಾರ ಮಾಡಿರುವುದನ್ನು ಸ್ವಾಗತಿಸಲಾಗಿದೆ. 

ಮಂಗಳೂರು (ಸೆ.10): ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೋದ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಿರುವುದನ್ನು ಭಾರತೀಯ ಜನಸೇವಾ ಟ್ರಸ್ಟ್‌ ಸ್ವಾಗತಿಸಿದೆ.

 ದೇಶದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯಕ್ಕೆ , ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೋಗಳ ಪ್ರಸಾರವೂ ಒಂದು ಕಾರಣವೆಂದು ಟ್ರಸ್ಟ್‌ ಈ ಹಿಂದೆಯೇ ಸರ್ಕಾರದ ಗಮನ ಸೆಳೆದಿತ್ತು. 

ಬೆಂಗ್ಳೂರು ಕಾಲೇಜ್ ವಿದ್ಯಾರ್ಥಿನಿಯರ ಫೋಟೋ ಪೋರ್ನ್ ಸೈಟ್ಸ್‌ನಲ್ಲಿ ಪತ್ತೆ..! .

ಕಳೆದ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಮಂಗಳೂರಿನಲ್ಲಿ ನಿರ್ಮಲಾ ಸೀತಾರಾಮನ್‌ ಅವರೊಂದಿಗಿನ ಸಂವಾದ ಕಾರ್ಯಕ್ರಮದಲ್ಲೂ ಟ್ರಸ್ಟ್‌ ಈ ಬಗ್ಗೆ ಅವರ ಗಮನ ಸೆಳೆದು ಇಂತಹ ಅಶ್ಲೀಲ ಜಾಲತಾಣಗಳನ್ನು ನಿಷೇಧಿಸುವ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿತ್ತು ಎಂದು ಭಾರತೀಯ ಜನಸೇವಾ ಟ್ರಸ್ಟ್‌ ಅಧ್ಯಕ್ಷ ವಸಂತ ಯೆಯ್ಯಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅನೇಕರಿಂದ ಪೋರ್ನ್ ಸೈಟ್ ನಿಷೇಧಕ್ಕೆ ಆಗ್ರಹ ಕೇಳಿ ಬಂದ ಬೆನ್ನಲ್ಲೇ ಕೇಂದ್ರ ಸರ್ಕಾರ ಪೋರ್ನ್ ಸೈಟ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಇದಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

click me!