Mandya : 14ರಿಂದ 20ರವರೆಗೆ ಸಹಕಾರ ಸಪ್ತಾಹ ಆಚರಣೆ

By Kannadaprabha NewsFirst Published Nov 12, 2022, 5:32 AM IST
Highlights

ಮಂಡ್ಯ ಜಿಲ್ಲಾ ಸಹಕಾರಿ ಒಕ್ಕೂಟದಿಂದ ನ.14ರಿಂದ 20ರವರೆಗೆ ರಾಷ್ಟ್ರದಾದ್ಯಂತ ಸಹಕಾರ ಸಪ್ತಾಹ ಆಚರಿಸಲಾಗುತ್ತಿದ್ದು, ಜಿಲ್ಲೆಯಲ್ಲೂ ವಿವಿಧ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಸುಂದ್ರಪ್ಪ ತಿಳಿಸಿದರು.

 ಮಂಡ್ಯ (ನ.12):  ಮಂಡ್ಯ ಜಿಲ್ಲಾ ಸಹಕಾರಿ ಒಕ್ಕೂಟದಿಂದ ನ.14ರಿಂದ 20ರವರೆಗೆ ರಾಷ್ಟ್ರದಾದ್ಯಂತ ಸಹಕಾರ ಸಪ್ತಾಹ ಆಚರಿಸಲಾಗುತ್ತಿದ್ದು, ಜಿಲ್ಲೆಯಲ್ಲೂ ವಿವಿಧ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಸುಂದ್ರಪ್ಪ ತಿಳಿಸಿದರು.

ಮಾಜಿ ಪ್ರಧಾನಿ ಜವಹರ ಲಾಲ್‌ ನೆಹರು (Javaharalal Neharu)ನ.14ರಿಂದ ಪ್ರಾರಂಭವಾಗುವ ಸಹಕಾರಿ ಸಪ್ತಾಹ ಏಳು ದಿನಗಳ ಕಾಲ ನಡೆಯಲಿದ್ದು, ಜಿಲ್ಲಾದ್ಯಂತ ಸಂಭ್ರಮದಿಂದ ಆಚರಿಸಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

Latest Videos

ಸಪ್ತಾಹದ ಆಚರಣೆ ಸಂದರ್ಭದಲ್ಲಿ ಸಂಘದ ಕಟ್ಟಡಗಳನ್ನು (Buildings)  ತಳಿರು-ತೋರಣಗಳಿಂದ ಅಲಂಕರಿಸಿ, ಚಿಂತನ, ಮಂಥನ ಕೂಟಗಳನ್ನು ನಡೆಸುವುದು, ಸಂಘದ ನೈರ್ಮಲ್ಯದ ಬಗ್ಗೆ ಆಸಕ್ತಿ ವಹಿಸುವುದು, ಕಟ್ಟಡವನ್ನು ಸ್ವಚ್ಛವಾಗಿಡಲು ಶ್ರಮದಾನ, ಸಹಕಾರ ಕ್ಷೇತ್ರದ ಅಭಿವೃದ್ಧಿಗಾಗಿ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲು ಸಭೆ-ಸಮಾರಂಭಗಳನ್ನು ನಡೆಸುವುದು, ಸಹಕಾರಿಗಳಿಗೆ ಉಪಯುಕ್ತವಾಗುವ ಆರೋಗ್ಯ ಯೋಜನೆಯಡಿ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಗಿಡ ನೆಡುವುದು, ಸ್ವಚ್ಛತಾ ಆಂದೋಲನ ಸೇರಿದಂತೆ ಹತ್ತು ಹಲವು ಕಾರ‍್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ನ.14ರಂದು ಪಾಂಡವಪುರ ತಾಲೂಕು ನ್ಯಾಮನಹಳ್ಳಿಯ ಪ್ರಾಥಮಿಕ ಕೃಷಿ ಸಹಕಾರ ಸಂಘದ ಆವರಣದಲ್ಲಿ ಸಹಕಾರ ಸಪ್ತಾಹದ ಉದ್ಘಟನಾ ಸಮಾರಂಭ ಹಾಗೂ ಸಹಕಾರ ಸಂಸ್ಥೆಗಳಲ್ಲಿ ವ್ಯಾಪಾರದ ಸರಳೀಕರಣ, ಅಭಿವೃದ್ಧಿಗಾಗಿ ಜೆಮ್‌ ಪೋರ್ಟಲ್‌ ಬಳಕೆ ದಿನವನ್ನಾಗಿ ಆಚರಿಸಲಾಗುವುದು ಎಂದರು.

ನ.15ರಂದು ಕೆ.ಆರ್‌. ಪೇಟೆ ತಾಲೂಕು ಶಾರಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆವರಣದಲ್ಲಿ ಸಹಕಾರ ಮಾರುಕಟ್ಟೆಗ್ರಾಹಕ ರೂಪಾಂತರ ಮತ್ತು ಮೌಲ್ಯವರ್ಧನೆ ದಿನ, 16ರಂದು ನಾಗಮಂಗಲ ತಾಲೂಕಿನ ಕಾಳಿಂಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸಹಕಾರ ಶಿಕ್ಷಣ, ವೃತ್ತಿಪರ ನಿರ್ವಹಣೆಯನ್ನು ಮುಖ್ಯವಾಹಿನಿಗೆ ತರಲು ಪುನರ್‌ ನಿರ್ಮಿಸುವ ದಿನಾಚರಣೆ, 17ರಂದು ಮಂಡ್ಯ ತಾಲೂಕಿನ ಹೆಮ್ಮಿಗೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಆವಿಷ್ಕಾರ ಘೋಷಣೆ, ಸ್ಟಾರ್ಚ್‌ ಆಪ್‌ಗಳಿಗೆ ಉತ್ತೇಜನ ಮತ್ತು ತಂತ್ರಜ್ಞಾನದ ಉನ್ನತೀಕರಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ದಿನವನ್ನು ಆಚರಿಸಲಾಗುವುದು ಎಂದು ವಿವರಿಸಿದರು.

ನ.18ರಂದು ಶ್ರೀರಂಗಪಟ್ಟಣ ಟಿಎಪಿಸಿಎಂಎಸ್‌ ಆವರಣದಲ್ಲಿ ಉದ್ಯಮಶೀಲತೆ ಅಭಿವೃದ್ಧಿ ಮತ್ತು ಸಾರ್ವಜನಿಕ, ಖಾಸಗಿ ಸಹಕಾರಿ ಸಹಭಾಗಿತ್ವವನ್ನು ಬಲಗೊಳಿಸುವ ದಿನಾಚರಣೆ, 19ರಂದು ಮಳವಳ್ಳಿ ಗಾಯಿತ್ರಿ ಸಭಾ ಭವನದಲ್ಲಿ ಯುವಜನ, ಮಹಿಳೆ ಮತ್ತು ಅಬಲವರ್ಗ, ಆರೋಗ್ಯಕ್ಕಾಗಿ ಸಹಕಾರ ಸಂಸ್ಥೆ ದಿನ ಹಾಗೂ 20ರಂದು ಮದ್ದೂರು ತಾಲೂಕು ನೀಲಕಂಠನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಆರ್ಥಿಕ ಸೇರ್ಪಡೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳ ಡಿಜಿಟಲೀಕರಣ ಮತ್ತು ಸಹಕಾರ ಸಂಸ್ಥೆಗಳ ದತ್ತಾಂಶವನ್ನು ಬಲಪಡಿಸುವ ದಿನ ಮತ್ತು ಸಮಾರೋಪ ಸಮಾರಂಭ ಏರ್ಪಡಿಸಲಾಗಿದೆ ಎಂದರು.

ಸಹಕಾರಿ ಮುಖಂಡರಾದ ನಾಗೇಂದ್ರ, ವಿಕ್ರಂರಾಜೇಅರಸ್‌, ಶಿವಕುಮಾರ್‌, ನಿಂಗೇಗೌಡ, ಎ.ಆರ್‌.ನಾಗಭೂಷಣ್‌ ಗೋಷ್ಠಿಯಲ್ಲಿದ್ದರು.

ಮಂಡ್ಯ ಜಿಲ್ಲಾ ಸಹಕಾರಿ ಒಕ್ಕೂಟದಿಂದ ನ.14ರಿಂದ 20ರವರೆಗೆ ರಾಷ್ಟ್ರದಾದ್ಯಂತ ಸಹಕಾರ ಸಪ್ತಾಹ

ಹೆದ್ದಾರಿಗೆ 12 ಕೋಟಿ

  ಭಾರತೀನಗರ  (ನ.06 ) :  ತುಮಕೂರು ಕುಣಿಗಲ್‌ನಿಂದ ಮದ್ದೂರು ಮಾರ್ಗವಾಗಿ ಮಳವಳ್ಳಿ ಹೆದ್ದಾರಿ ಕಾಮಗಾರಿಗೆ ಮತ್ತೆ ಸರ್ಕಾರದಿಂದ ಹೋರಾಟ ಮಾಡಿ 12 ಕೋಟಿ ರು. ಮಂಜೂರು ಮಾಡಿಸಿ ರುವುದಾಗಿ ಶಾಸಕ ಡಿ.ಸಿ. ತಮ್ಮಣ್ಣ ತಿಳಿಸಿದರು.

ಇಲ್ಲಿಗೆ ಸಮೀಪದ ಬಿದರ ಹೊಸಹಳ್ಳಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಕುಣಿಗಲ್‌ನಿಂದ ಮಳವಳ್ಳಿ ವರೆಗೆ ಕೆಲವು ಕಾಮಗಾರಿಗಳು ಅರ್ಧಕ್ಕೆ ನಿಂತುಹೋಗಿತ್ತು. ಸರ್ಕಾರ ಮಟ್ಟದಲ್ಲಿ ಸಾಕಷ್ಟು ಹೋರಾಟ ನಡೆಸಿ ಇನ್ನುಳಿದ 45 ಕಿ.ಮೀ ವರೆಗೆ ಅರ್ಧಕ್ಕೆ ನಿಂತು ಹೋಗಿದ್ದ ಕಾಮಗಾರಿ ಪೂರ್ಣಗೊಳಿಸಲು 12 ಕೋಟಿ ರು. ಮಂಜೂರು ಮಾಡಿಸಿದ್ದೇನೆ ಎಂದರು.

. ಕ್ಷೇತ್ರದಲ್ಲಿ ಜನರು ನನಗೆ ನೀಡಿರುವ ರಾಜಕೀಯಶಕ್ತಿಯನ್ನು ಬಳಸಿಕೊಂಡು ರಾಜ್ಯದಲ್ಲಿ ಯಾವುದೇ ಸರ್ಕಾರ ಇದ್ದರೂ ನಾನಾ ಮೂಲಗಳಿಂದ ಅಗತ್ಯ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಜನರು ಮುಂದೆಯೂ ಸಹ ನನಗೆ ಇಂತಹ ಶಕ್ತಿ ನೀಡಿದರೆ ಆತ್ಮವಿಶ್ವಾಸದಿಂದ ಅಭಿವೃದ್ಧಿ ಕಾರ್ಯದಲ್ಲಿ ತೊಡಗುತ್ತೇನೆ. ಕ್ಷೇತ್ರದಲ್ಲಿ ಇನ್ನು ಸಾಕಷ್ಟುಅಭಿವೃದ್ಧಿ ಕೆಲಸಗಳನ್ನು ಮಾಡಬೇಕಿದೆ. ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿ ಮಾದರಿ ಕ್ಷೇತ್ರವನ್ನಾಗಿಸುವೆ ಎಂಬ ಭರವಸೆ ನೀಡಿದರು.

ಜೆಡಿಎಸ್‌ ಮುಖಂಡ ಮಾದನಾಯಕನಹಳ್ಳಿ ರಾಜಣ್ಣ ಮಾತನಾಡಿ, ಚುನಾವಣೆ ಗುರಿಯಾಗಿಸಿಕೊಂಡು ಕೆಲ ಉದ್ಯಮಿಗಳು ಹಣ ನೀರಿನಂತೆ ಖರ್ಚು ಮಾಡಿ ರಾಜಕಾರಣ ಮಾಡಲು ಮುಂದಾಗಿದ್ದಾರೆ. ಈ ಆಮಿಷಕ್ಕೆ ಮತದಾರರು ಒಳಗಾಗಬಾರದು. ಅಭಿವೃದ್ದಿ ಕಾರ್ಯ ನೋಡಿ ಬೆಂಬಲಿಸುವಂತೆ ಮನವಿ ಮಾಡಿದರು.

ಹಣ ಬರುತ್ತದೆ, ನಾಳೆ ಹೋಗುತ್ತದೆ. ಆದರೆ ಕ್ಷೇತ್ರದಲ್ಲಿ ನಡೆಸಿದ ಅಭಿವೃದ್ದಿ ಕಾರ್ಯಗಳು ಶಾಶ್ವತವಾಗಿ ಇರುತ್ತದೆ. ಡಿ.ಸಿ. ತಮ್ಮಣ್ಣರ ಅವಧಿಯಲ್ಲಿ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಿ ಕೆಲಸ ಮಾಡಿದ್ದಾರೆ. ಇಂತಹ ಜನನಾಯಕರನ್ನು ಪ್ರೋತ್ಸಾಹಿಸುವ, ಬೆಂಬಲಿಸುವ ಮನೋಭಾವನೆ ಜನಸಾಮಾನ್ಯರಲ್ಲಿ ಬರಬೇಕಿದೆ ಎಂದು ತಿಳಿಸಿದರು.

click me!