ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕೃಷಿಕರ ಅನುಕೂಲಕ್ಕೆ 10ಎಚ್‌ಪಿ ಪಂಪಸೆಟ್‌ಗಳಿಗೆ ಉಚಿತ ವಿದ್ಯುತ್ ಅನುಷ್ಠಾನಗೊಳಿಸಿದ್ದಾರೆ. ಅದನ್ನು ತೆಗೆದು ಕೃಷಿ ಪಂಪ್‌ಸೆಟ್‌ಗೆ ಮೀಟರ್ ಅಳವಡಿಸಿದರೆ ನಾನೇ ಮೊದಲು ಕಿತ್ತೊಗೆಯುತ್ತೇನೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.
ಮೈಸೂರು (ನ.12) : ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕೃಷಿಕರ ಅನುಕೂಲಕ್ಕೆ 10ಎಚ್‌ಪಿ ಪಂಪಸೆಟ್‌ಗಳಿಗೆ ಉಚಿತ ವಿದ್ಯುತ್ ಅನುಷ್ಠಾನಗೊಳಿಸಿದ್ದಾರೆ. ಅದನ್ನು ತೆಗೆದು ಕೃಷಿ ಪಂಪ್‌ಸೆಟ್‌ಗೆ ಮೀಟರ್ ಅಳವಡಿಸಿದರೆ ನಾನೇ ಮೊದಲು ಕಿತ್ತೊಗೆಯುತ್ತೇನೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.
ಮೈಸೂರಿನ (Congress) ಭವನದಲ್ಲಿ ಶುಕ್ರವಾರ ನಡೆದ ಹಿಂದುಳಿದ ವರ್ಗಗಳ ಕಾರ್ಯ ಕರ್ತರ ಸಭೆಯಲ್ಲಿ ಮಾತನಾಡಿದ ಅವರುಗಳಿಗೆ ಮೋಸಾ ಮಾಡಿದವರೇ ಬಿಜೆಪಿಯಾಗಿದ್ದು (BJP) , ರಾಜ್ಯದೆಲ್ಲೆಡೆ ಇಂದಿಗೂ ಬಂಗಾರಪ್ಪ ಅವರನ್ನು ಪಕ್ಷಾತೀತ ಹಾಗೂ ಜಾತ್ಯಾ ತೀತವಾಗಿ ನೆನೆಯುತ್ತಾರೆ. ಅವರು ಕೃಷಿ ಪಂಪ್ ಸೆಟ್‌ಗಳಿಗೆ ಕೊಟ್ಟ ಉಚಿತ ವಿದ್ಯುತ್ ಅನ್ನು ಕೇವಲ ಒಂದು ಸಮುದಾಯ ಮಾತ್ರವಲ್ಲ ಎಲ್ಲಾ ರೈತರು ಬಳಸಿಕೊಂಡಿದ್ದಾರೆ ಎಂದರು.
ಬಂಗಾರಪ್ಪ ಅವರ ಮಹತ್ವದ ಯೋಜನೆ ಸ್ಥಗಿತಗೊಳಿಸಲು ಬಿಜೆಪಿ ಸರ್ಕಾರ ಮುಂದಾಗಿದೆ. ಹಾಗೊಂದು ವೇಳೆ ವಿರೋಧದ ನಡುವೆ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅನ್ನು ಎಲ್ಲೇ ಅಳವಡಿಸಿದರೂ ನಾನೇ ಅದನ್ನು ಕೀಳುತ್ತೇನೆ ಎಂದು ಅವರು ಹೇಳಿದರು.
ಹಳೆ ಮೈಸೂರು ಭಾಗದಲ್ಲಿ ಶೇ.52 ರಷ್ಟುಮಂದಿ ಒಬಿಸಿಗಳು ಇಂದಿಗೂ ಕಾಂಗ್ರೆಸ್ ಪರವಾಗಿದ್ದಾರೆ. ಭಾರತ ಜೋಡೋ ಯಾತ್ರೆಯಲ್ಲಿ ಇಲ್ಲಿ ಸಿಕ್ಕ ಅಭೂತ ಪೂರ್ವ ಯಶಸ್ಸು ಮುಂದಿನ ದಿನಗಳಲ್ಲಿ ನಡೆಯುವ ಓಬಿಸಿ ರಾಜ್ಯ ಮಟ್ಟದ ಸಮಾವೇಶಕ್ಕೂ ಸಿಗಬೇಕು. ರಾಹುಲ್ ಗಾಂಧಿ ಅವರನ್ನು ಶಿವಮೊಗ್ಗಕ್ಕೆ ಆಹ್ವಾನಿಸಿ ಅಲ್ಲಿಯೇ ಒಬಿಸಿ ಸಮಾವೇಶ ನಡೆಸಲಾಗುವುದು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಲತಾ ಸಿದ್ದಶೆಟ್ಟಿ, ಒಬಿಸಿ ನಗರಾಧ್ಯಕ್ಷ ಶಿವಮುಲ್ಲು, ಜಿಲ್ಲಾಧ್ಯಕ್ಷ ಮಾರುತಿ, ಮುಖಂಡರಾದ ನಾಗಭೂಷಣ್, ಈಶ್ವರ್ ಚಕ್ಕಡಿ, ಮಹೇಶ್ ಮೊದಲಾದವರು ಇದ್ದರು.
.ಕೃಷಿ ಪಂಪ್‌ಸೆಟ್‌ಗೆ ಮೀಟರ್: ರೈತರ ವಿರೋಧ : ರೈಲು ನಿಲ್ದಾಣದ ಮುಂದೆ ತರಕಾರಿ ಸಮೇತ ರೈತಸಂಘದ ಪ್ರತಿಭಟನೆ
ಬಂಗಾರಪೇಟೆ, : ಕೇಂದ್ರ ಸರ್ಕಾರ ಕೃಷಿ ಕ್ಷೇತ್ರವನ್ನು ಬಂಡವಾಳ ಶಾಹಿಗಳ ಕೈಗೆ ಒಪ್ಪಿಸಲು ಹೊರಟಿದೆ ಎಂದು ಆರೋಪಿಸಿ ಹಾಗೂ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಆಳವಡಿಕೆ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ತರಕಾರಿ ಸಮೇತ ರೈಲು ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಲಾಯಿತು.
ಕೃಷಿ ಕ್ಷೇತ್ರಕ್ಕೆ ಮಾರಕವಾಗಿ ಕೋಟ್ಯಂತರ ರೈತ ಕುಟುಂಬಗಳನ್ನು ಬೀದಿ ಪಾಲು ಮಾಡುವ ವಿವಾದಿತ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದು ಕೃಷಿ ಕ್ಷೇತ್ರವನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರಾಟ ಮಾಡಿ ಅನ್ನದಿಂದ ಅಕ್ಷರದವರೆಗೂ ಖಾಸಗೀಕರಣ ಮಾಡಲು ಮುಂದಾಗುವ ಸರ್ಕಾರಗಳ ವಿರುದ್ಧ ಮಹಾಯುದ್ದಕ್ಕೆ ರೈತರು ಸಜ್ಜಾಗಬೇಕಾದ ಕಾಲ ಬಂದಿದೆ ಎಂದು ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.
ಅನ್ನದಾತನ ಕಣ್ಣಿರು ತರಿಸುತ್ತಿರುವ ವಿಮಾ ಕಂಪನಿಗಳ ಬಹುನೀರಿಕ್ಷೆಯ ಪ್ರಧಾನ ಮಂತ್ರಿ ಪಸಲ್ ಭೀಮಾ ಯೋಜನೆ ಸಂಪೂರ್ಣವಾಗಿ ವಿಪಲವಾಗಿದೆ. ಅತಿವೃಷ್ಟಿ, ಅನಾವೃಷ್ಟಿಯಿಂದ ನಷ್ಟವಾದಗ ಬೆಳೆ ವಿಮೆ ರೈತರ ಕೈ ಹಿಡಿಯಬಹುದೆಂಬ ಬಹುನಿರೀಕ್ಷೆಯ ವಿಮಾ ಕಂಪನಿಗಳು ರೈತರಿಗೆ ಮಾರಕವಾಗಿ ರೈತರ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಮಾಡುವ ವಿಮೆಯಾಗಿ ಮಾರ್ಪಟ್ಟು ಕಷ್ಟಕಾಲದಲ್ಲಿ ನೆರವಿಗೆ ಬಾರದೆ ಕೈಗೂ ಸಿಗದೆ ನಾಪತ್ತೆಯಾಗಿ ರೈತರನ್ನು ಸುಲಿಗೆ ಮಾಡುವ ಕಂಪನಿಗಳಾಗಿ ಮಾರ್ಪಟ್ಟು ಅಧಿಕಾರಿಗಳು ವಿಮಾ ಕಂಪನಿಗಳ ಗುಲಾಮರಾಗಿ ಕೆಲಸ ಮಾಡುವ ಮಟ್ಟಕ್ಕೆ ಯೋಜನೆ ಹದಗೆಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.