ಸೀಡಿ ಕೇಸ್ - ರಾಜ್ಯ ಉಪ ಚುನಾವಣೆ : ವಿಜಯೇಂದ್ರ ಏನೆಂದರು?

By Kannadaprabha NewsFirst Published Apr 1, 2021, 8:18 AM IST
Highlights

ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ ಯಾವುದೇ ಕಾರಣಕ್ಕೂ  ಉಪ ಚುನಾವಣೆ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ. 

ದಾವಣಗೆರೆ (ಏ.01): ಉಪಚುನಾವಣೆ ಮೇಲೆ ಸೀಡಿ ಪ್ರಕರಣ ಯಾವುದೇ ಪರಿಣಾಮ ಬೀರುವುದಿಲ್ಲ. ನಾವು ದೊಡ್ಡ ಅಂತರದಲ್ಲೇ ಗೆಲ್ಲುತ್ತೇವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರು ಸೀಡಿ ಬಗ್ಗೆ ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಅವರು, ಸೀಡಿ ಯುವತಿಗೆ ಬೆದರಿಕೆ ಇರುವ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಸೀಡಿ ವಿಚಾರದ ಬಗ್ಗೆ ನಾಡಿನ ಜನತೆ ನೋಡುತ್ತಿದ್ದಾರೆ. 

ರಾಜ್ಯದ ಜನ ಯಾರೂ ದಡ್ಡರಿಲ್ಲ. ಮುಂದಿನ ದಿನಗಳಲ್ಲಿ ಇಡೀ ಪ್ರಕರಣದ ಸತ್ಯಾಸತ್ಯತೆ ಹೊರ ಬರಲಿದೆ. ಒಂದು ಕಡೆ ಎಸ್‌ಐಟಿ ತನಿಖೆ ಸಾಗಿದೆ. ಕಳೆದ 28 ದಿನಗಳಿಂದ ಯಾರಾರ‍ಯರು ಯಾವ್ಯಾವ ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ಜನ ಗಮನಿಸುತ್ತಿದ್ದಾರೆ. ಪ್ರಕರಣ ಯಾವ ತಿರುವು ಪಡೆಯುತ್ತದೆ ಎಂದು ಕಾದು ನೋಡೋಣ ಎಂದು ತಿಳಿಸಿದರು. ರಾಜ್ಯದಲ್ಲಿ ಹಿಂದಿನ ಉಪಚುನಾವಣೆಗಳ ಪೈಕಿ 15 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ಈಗಿನ ಉಪ ಚುನಾವಣೆಗಳಲ್ಲೂ ನಾವೇ ಗೆಲ್ಲುತ್ತೇವೆ. ಬಿಜೆಪಿಯ ವಿಜಯೇಂದ್ರ ನಾಗಾಲೋಟ ತಡೆಯಲು ಯಾವ ಪಕ್ಷದಿಂದಲೂ ಸಾಧ್ಯವಾಗಲ್ಲ ಎಂದರು.

ಸಿಡಿ ಕೇಸಲ್ಲಿ ವಿಜಯೇಂದ್ರ-ಡಿಕೆಶಿ ಕೈವಾಡ: ಯತ್ನಾಳ್ ಮತ್ತೊಂದು ಆರೋಪ ...

ಮಸ್ಕಿ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಉಸ್ತುವಾರಿಯನ್ನು ಸಚಿವರಾದ ಶ್ರೀರಾಮುಲು, ರವಿಕುಮಾರ್‌ ಹಾಗೂ ನಾನು ಹೊತ್ತಿದ್ದೇವೆ. ನಾವೆಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ ಎಂದರು. ಇದೇ ವೇಳೆ ಸುದ್ದಿಗಾರರು ಯತ್ನಾಳ್‌ ಬಗ್ಗೆ ಪ್ರಶ್ನಿಸಿದಾಗ, ಶಾಸಕ ಯತ್ನಾಳ್‌ ಆರೋಪಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

- ಸತ್ಯಾಸತ್ಯತೆ ಹೊರಬರಲಿದೆ: ಬಿಜೆಪಿ ಉಪಾಧ್ಯಕ್ಷ

click me!