ಮಂಗಳೂರಲ್ಲೂ ಪೊಲೀಸರಿಂದ ಕ್ವಿಂಟಾಲ್‌ಗಟ್ಟಲೇ ಗಾಂಜಾ ವಶ

Kannadaprabha News   | Asianet News
Published : Aug 30, 2020, 10:15 AM IST
ಮಂಗಳೂರಲ್ಲೂ ಪೊಲೀಸರಿಂದ ಕ್ವಿಂಟಾಲ್‌ಗಟ್ಟಲೇ  ಗಾಂಜಾ ವಶ

ಸಾರಾಂಶ

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ ಮಾಫಿಯಾ ಭಾರೀ ಸದ್ದು  ಮಾಡುತ್ತಿರುವ ಬೆನ್ನಲ್ಲೇ ಮಘಳೂರಿನಲ್ಲಿಯೂ ಪೊಲೀಸ್ ಕ್ವಿಂಟಾಲ್‌ಗಟ್ಟಲೇ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಮಂಗಳೂರು (ಆ.30) : ನಗರ ಹಾಗೂ ಕೇರಳಕ್ಕೆ ಬೃಹತ್‌ ಪ್ರಮಾಣದಲ್ಲಿ ಪಿಕಪ್‌ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

 ಅವರಿಂದ ಸುಮಾರು 132 ಕೆ.ಜಿ. ಗಾಂಜಾ ಜಪ್ತಿ ಮಾಡಿದ್ದಾರೆ. ಮಂಜೇಶ್ವರ ಪಾವೂರಿನ ಕಲಂದರ್‌ ಮೊಹಮ್ಮದ್‌ ಶಾಹ(35), ಕುಂಜತ್ತೂರಿನ ಮೊಯಿದ್ದೀನ್‌ ಅನ್ಸಾರ್‌(27) ಆ.21ರಂದು ಪಂಪುವೆಲ್‌ ರಸ್ತೆಯ ತಾರೆತೋಟ ಬಳಿ ಪಿಕಪ್‌ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ.

ದೇಹ, ಮನಸ್ಸಿನ ಮೇಲೆ ಗಾಂಜಾ ಬೀರೋ ದುಷ್ಪರಿಣಾಮ ಒಂದೆರಡಲ್ಲ..!

132 ಕೆ.ಜಿ. ಗಾಂಜಾ, 2 ವಾಹನ, 2 ಮೊಬೈಲ್‌ ಸೇರಿದಂತೆ ಒಟ್ಟು .43 ಲಕ್ಷ ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ. ಇದೀಗ ಈ ಜಾಲದ ಬಗ್ಗೆಯೂ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಬಯಲಾಯ್ತು ಭಯಾನಕ ಡ್ರಗ್ಸ್‌ ಮಾಫಿಯಾ; ವಿದ್ಯಾರ್ಥಿಗಳೇ ಇವರ ಟಾರ್ಗೆಟ್..!...

ಈಗಾಗಲೇ ಸ್ಯಾಂಡಲ್ ವುಡ್‌ನಲ್ಲಿ ಡ್ರಗ್ ಮಾಫಿಯಾ ಭಾರೀ ಸದ್ದು ಮಾಡುತ್ತಿದ್ದು, ಇದರ ಬೆನ್ನಲ್ಲೇ ಲಕ್ಷಾಂತರ ರು. ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಕೋಟಿ ಕೋಟಿ ಮೌಲ್ಯದ ಗಾಂಜಾ ವ್ಯವಹಾರ ಮಾಡುತ್ತಿದ್ದವರು ಪೊಲೀಸರ ಬಲೆಗೆ ಬಿದ್ದಿದ್ದು, ದಿನದಿನಕ್ಕೂ ಹೊಸ ಹೊಸ ವಿಚಾರಗಳು ಹೊರಬರುತ್ತಲೇ ಇದೆ. 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!