ಬಾರ್ ಗೆ ಮದ್ಯ ಸರಬರಾಜು: ಸಿಸಿಬಿ ಅಧಿಕಾರಿಗಳ ಬಿಸಿ

Published : Sep 22, 2019, 08:06 AM IST
ಬಾರ್ ಗೆ ಮದ್ಯ  ಸರಬರಾಜು:  ಸಿಸಿಬಿ ಅಧಿಕಾರಿಗಳ ಬಿಸಿ

ಸಾರಾಂಶ

ಅಕ್ರಮ ಚಟುವಟಿಕೆ ಆರೋಪ ಹಿನ್ನೆಲೆಯಲ್ಲಿ ನಾಗವಾರ ಹೊರವರ್ತುಲ ರಸ್ತೆಯಲ್ಲಿರುವ ಕಂಟ್ರಿ ಯಾರ್ಡ್‌ ಮ್ಯಾರಿಯಟ್‌ ಹೋಟೆಲ್‌ನ ಟೆರೆಸ್‌ನಲ್ಲಿರುವ ಬಾರ್‌ ಅಂಡ್‌ ರೆಸ್ಟೋರೆಂಟ್‌ ಮೇಲೆ ಸಿಸಿಬಿ ದಾಳಿ ನಡೆಸಿ, ಮೂವರನ್ನು ಬಂಧಿಸಿದೆ.  

ಬೆಂಗಳೂರು [ಸೆ.22]:  ಅಕ್ರಮ ಚಟುವಟಿಕೆ ಆರೋಪ ಹಿನ್ನೆಲೆಯಲ್ಲಿ ನಾಗವಾರ ಹೊರವರ್ತುಲ ರಸ್ತೆಯಲ್ಲಿರುವ ಕಂಟ್ರಿ ಯಾರ್ಡ್‌ ಮ್ಯಾರಿಯಟ್‌ ಹೋಟೆಲ್‌ನ ಟೆರೆಸ್‌ನಲ್ಲಿರುವ ಬಾರ್‌ ಅಂಡ್‌ ರೆಸ್ಟೋರೆಂಟ್‌ ಮೇಲೆ ಸಿಸಿಬಿ ದಾಳಿ ನಡೆಸಿ, ಮೂವರನ್ನು ಬಂಧಿಸಿದೆ.

ಥಣಿಸಂದ್ರದ ವರುಣ್‌, ಜಗದೀಶ್‌ ನಗರದ ಧನರಾಜ್‌ ಶೆಟ್ಟಿಹಾಗೂ ವೀರಣ್ಣಪಾಳ್ಯದ ಆನಂದ್‌ವರ್ಧನ್‌ ಬಂಧಿತರು. ಆರೋಪಿಗಳಿಂದ 54 ಸಾವಿರ ನಗದು ಸೇರಿದಂತೆ ಮತ್ತಿತರರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕಂಟ್ರಿ ಯಾರ್ಡ್‌ ಹೋಟೆಲ್‌ನ ಮೇಲಿನ ರೆಸ್ಟೋರೆಂಟ್‌ನಲ್ಲಿ ಅಬಕಾರಿ ಪರವಾನಿಗೆ ಪಡೆಯದೆ ಮದ್ಯ ಪೂರೈಕೆ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶನಿವಾರ ಮುಂಜಾನೆ ದಾಳಿ ನಡೆಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಈ ಸಂಬಂಧ ಕಂಟ್ರಿ ಯಾರ್ಡ್‌ ಹೋಟೆಲ್‌ ಮಾಲಿಕ ಹಾಗೂ ಇತರೆ ಆರೋಪಿಗಳಾದ ಇಲಿಯಾಸ್‌, ನಕಾಶ್‌, ಗೌತಮ್‌ ಡಿ.ಜೆ.ಟಾಮ್‌ಜೆಟಾ ಮತ್ತು ತ್ರಿಶೂಲ್‌ ಬಿಲ್ಡ್‌ ಟೆಕ್‌ ಮತ್ತು ಇನ್‌ಫ್ರಾಸ್ಟ್ರಕ್ಚರ್‌ ಮಾಲಿಕರು ಮತ್ತು ಹೋಟೆಲ್‌ ಮಾಲಿಕ ವಿರುದ್ಧ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
click me!

Recommended Stories

Bigg boss 12 winner ‘ಗಿಲ್ಲಿ’ ನಟನಿಗೆ ಹೆಚ್‌ಡಿ ಕುಮಾರಸ್ವಾಮಿ ಅಭಿನಂದನೆ; ಮಂಡ್ಯದ ಮಣ್ಣಿನ ಮಗನ ಸಾಧನೆಗೆ ಮೆಚ್ಚುಗೆ!
ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಗಾಯಾಳು; ಕಾರು ನಿಲ್ಲಿಸಿ ಆಸ್ಪತ್ರೆಗೆ ಸೇರಿಸಿದ ಸಚಿವ ಪ್ರಿಯಾಂಕ್ ಖರ್ಗೆ!