ಆರು ವರ್ಷವಾದರೂ ಮುಗಿಯದ ಸಿಸಿ ರಸ್ತೆ ಕಾಮಗಾರಿ: ಅಧಿಕಾರಿಗಳಿಗೆ ಜಾಡಿಸಿದ ಸಚಿವ ಜೋಶಿ

By Suvarna News  |  First Published Oct 12, 2022, 4:56 PM IST

ಕಾಮಗಾರಿ ಶುರುವಾಗಿ ಆರು ವರ್ಷಗಳೇ ಕಳೆದರೂ  ಧಾರವಾಡದ ಸಿಸಿ ರಸ್ತೆ ಕಾಮಗಾರಿ ಇನ್ನು ಮುಗಿದಿಲ್ಲ ಎಂದು ಅಧಿಕಾರಿಗಳಿಗೆ ಸಚಿವ ಪ್ರಹ್ಲಾದ್ ಜೋಶಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು


ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ : ಧಾರವಾಡ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಈಗಾಗಲೇ 2016 ರಲ್ಲಿ 80 ಕೋಟಿ ವೆಚ್ಚದಲ್ಲಿ ಧಾರವಾಡ ಜ್ಯೂಬಿಲಿ ಸರ್ಕಲ್‌ನಿಂದ ನಿಂದ ವರ್ಡ್ ಎಸ್ ಪಿ , ಧಾರವಾಡ ಹೊಸ ಬಸ್ ನಿಲ್ದಾಣ, ಕೃಷಿ ವಿವಿ ಮಾರ್ಗವಾಗಿ ನರೇಂದ್ರ ಬೈಪಾಸ್‌ವರೆಗೂ ಸಿಸಿ ರಸ್ತೆ ನಿರ್ಮಾಣ ಮಾಡಲು 80 ಕೋಟಿ ಹಣವನ್ನ ಬಿಡುಗಡೆ ಮಾಡಲಾಗಿತ್ತು. ಆದರೆ ಆ ರಸ್ತೆ ಕಾಮಗಾರಿ ಇನ್ನು ಮುಗಿಯದ ಕಾರಣಕ್ಕೆ ಜಿ.ಪಂ. ಆವರಣದಲ್ಲಿ ದಿಶಾ ಸಭೆಯ ಅಧ್ಯಕ್ಷತೆಯನ್ನ‌ ವಹಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಧಿಕಾರಿಗಳ ವಿರುದ್ದ ಕಿಡಿಕಾರಿದರು. ಎರಡು ತಿಂಗಳಲ್ಲಿ ರಸ್ತೆ ನಿರ್ಮಾಣ ಮಾಡಲು ಖಡಕ್ ವಾರ್ನಿಂಗ್ ನೀಡಿದರು. ಈ ಹಿನ್ನೆಲೆಯಲ್ಲಿ ತಡವಾಗಿ ಎಚ್ಚೆತ್ತುಕ್ಕೊಂಡು ಅಧಿಕಾರಿಗಳು ಸದ್ಯ ರಸ್ತೆ ಕಾಮಗಾರಿ ಮುಗಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.

ಇನ್ನು ಕಳೆದ 6 ವರ್ಷದ ಹಿಂದೆ ಆರಂಭವಾಗಿ ಮುಗಿಯದ ರಸ್ತೆ ಕಾಮಗಾರಿ ನೋಡಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ಕಿಡಿಕಾರಿದ್ದಾರೆ. ಖಡಕ್ ವಾರ್ನಿಂಗ್ ನೀಡಿದ್ದ ಬೆನ್ನಲ್ಲೆ ಮತ್ತೆ ರಸ್ತೆ ಪಕ್ಕ ಫ್ಲೈಒವರ್ (Flyover) ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಇನ್ನು ಎರಡು ತಿಂಗಳಲ್ಲಿ ರಸ್ತೆ ಪೂರ್ತಿಯಾಗಿ ಮುಗಿಸಿ ಕೊಡಬೇಕು ಇಲ್ಲದಿದ್ರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು. ಜೋಶಿ ಅವರ ಈ ಖಡಕ್ ವಾರ್ನಿಂಗ್‌ ಬಳಿಕ ಅಧಿಕಾರಿಗಳು (Officers) ಹೊಸ ಬಸ್ ನಿಲ್ದಾಣದ ಬಳಿ ಬಾಕಿ ಇರುವ ಕಾಮಗಾರಿಯನ್ನ ಮಾಡಲು ಮುಂದಾಗಿದ್ದಾರೆ. ಅಲ್ಲದೇ ರಸ್ತೆ ಗುತ್ತಿಗೆ ಪಡೆದವರಿಗೆ ಅಧಿಕಾರಿಗಳು ಶೀಘ್ರವೇ ಕಾಮಗಾರಿ ಮುಗಿಸುವಂತೆ ವಾರ್ನ್ ಮಾಡಿದ್ದಾರೆ.

Tap to resize

Latest Videos

ಪ್ರಧಾನಿ ಮೋದಿ ಮನ್ ಕಿ ಬಾತ್: ಮುಗದ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದ ಜೋಶಿ

ರಸ್ತೆಯ ಎರಡು ಕಡೆ ಫಿನಿಶಿಂಗ್ ಕೆಲಸ ಆಗಿಲ್ಲ, ಎರಡು ಬದಿ ಸರಿಯಾಗಿ ಗಟಾರ ವ್ಯವಸ್ಥೆ ಮಾಡಿಲ್ಲ, ಡಿವೈಡರ್ (Divider) ಇಲ್ಲ, ವಿದ್ಯುತ್ (Power Line) ವ್ಯವಸ್ಥೆ ಇಲ್ಲ, ಈ ಹಿನ್ನೆಲೆಯಿಂದ ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ಎದುರಾಗಿದೆ. ಇದರಿಂದ ಅಪಘಾತಗಳು ಕೂಡಾ ಆಗ್ತಾ ಇವೆ. ಆದರೆ ಅಧಿಕಾರಿಗಳಿಗೆ ಹೆಳೋರಿಲ್ಲ, ಕೆಳೋರಿಲ್ಲ ಅನೋ ಹಾಗೆ ಆಗಿದೆ.

ಮೇಲೆ ಪ್ಲೇನು ಕೆಳಗೆ ಟ್ರೈನು... ಹುಬ್ಳಿ ಮಂದಿ ಕೈಗೆ ಸಿಗಲ್ಲ ಇನ್ನು

ಇನ್ನು ಅಧಿಕಾರಿಗಳನ್ನು ದಿಶಾ ಸಭೆಯಲ್ಲಿ ಹಿಗ್ಗಾಮುಗ್ಗಾ ಜಾಡಿಸಿದ ಬಳಿಕ ಅಧಿಕಾರಿಗಳು ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇಲ್ಲಿ ಎಲ್ಲದಕ್ಕೂ ಸಂಸದರೆ ಹೇಳಬೇಕಾದ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ಎಲ್ಲದಕ್ಕೂ ಸಂಸದ ಪ್ರಹ್ಲಾದ್ ಜೋಶಿ ಅವರೇ ಬರಬೇಕಾದರೆ ಅಧಿಕಾರಿಗಳು ಯಾಕೆ ಬೇಕು ಅಂತ ಸ್ಥಳೀಯ ಜನರು ಮಾತನಾಡುವ ಪರಿಸ್ಥಿತಿ ಸದ್ಯ ಸ್ಥಳೀಯ ವಲಯದಲ್ಲಿ ಕೇಳಿಬರುತ್ತಿದೆ. ಇನ್ನು ಎರಡು ತಿಂಗಳಲ್ಲಿ ಆ ಸಿಸಿ ರಸ್ತೆ ಕಂಪ್ಲಿಟ್ ಮಾಡಿ ಕೊಡೋದಾಗಿ ರಾಷ್ಟ್ರೀಯ ಹೆದ್ದಾರಿಗಳ (National High way) ಅಧಿಕಾರಿಯಾದ ಹುರಕಡ್ಲಿ ಅವರು ಮಾಹಿತಿಯನ್ನು ನೀಡಿದ್ದಾರೆ. ಇನ್ನು ಅಧಿಕಾರಿಗಳು ಕೂಡಾ ಆದಷ್ಟು ಬೇಗ ಈ ಉಳಿದಿರುವ ರಸ್ತೆಯ ಕಾಮಗಾರಿಯನ್ನ ಮುಗಿಸಲು ಕೆಲಸ ಮಾಡುತ್ತಿದ್ದಾರೆ.
 

click me!