2 ದಿನ ಬೆಂಗಳೂರಲ್ಲಿ ಕಾವೇರಿ ನೀರು ಪೂರೈಕೆ ವ್ಯತ್ಯಯ!

Published : Jan 19, 2019, 09:56 PM ISTUpdated : Jan 29, 2019, 06:59 PM IST
2 ದಿನ ಬೆಂಗಳೂರಲ್ಲಿ ಕಾವೇರಿ ನೀರು ಪೂರೈಕೆ ವ್ಯತ್ಯಯ!

ಸಾರಾಂಶ

ಬೆಂಗಳೂರಲ್ಲಿ 2 ದಿನ ಕಾವೇರಿ ನೀರು ಪೂರೈಕೆ ಆಗಲ್ಲ. ತುರ್ತು ದುರಸ್ಥಿ ಕಾಮಗಾರಿಯಿಂದ 2 ದಿನ ಕಾವೇರಿ ನೀರು ಪೂರೈಕೆ ಮಾಡಲು ಸಾಧ್ಯವಿಲ್ಲ ಎಂದು ಜಲ ಮಂಡಳಿ ಹೇಳಿದೆ. ಹಾಗಾದರೆ ಯಾವ 2 ದಿನ ನೀರು ಇರೋದಿಲ್ಲ? ಇಲ್ಲಿದೆ  ವಿವರ.  

ಬೆಂಗಳೂರು(ಜ.19): ಪಂಪಿಂಗ್ ಸ್ಟೇಶನ್‌ಗಳಲ್ಲಿ ತುರ್ತು ಕಾಮಗಾರಿ ಕಾರಣದಿಂದ ಬೆಂಗಳೂರಿನಲ್ಲಿ 2 ದಿನ ಕಾವೇರಿ ನೀರು ಪೂರೈಕೆ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲ ಮಂಡಳಿ ಹೇಳಿದೆ. ಜನವರಿ 22 ಹಾಗೂ 23 ರಂದು ಕಾವೇರಿ1,2,3 ನೇ ಹಂತ ಯೋಜನೆಯಲ್ಲಿ ದುರಸ್ಥಿ ಕಾಮಗಾರಿ ನಡೆಯಲಿದೆ. ಹೀಗಾಗಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದಿದೆ.

ಇದನ್ನೂ ಓದಿ: ಬೆಂಗಳೂರು ಪೊಲೀಸ್ ಸೂಪರ್ ಚೇಸಿಂಗ್: ತಾಯಿ ಮಡಿಲು ಸೇರಿದ ಕಂದಮ್ಮ

ಜನವರಿ 22 ರಾತ್ರಿ 10 ಗಂಟೆಯಿಂದ ಜ 23 ಸಂಜೆ 4 ಗಂಟೆಯವರೆಗೆ ನೀರು ಪೂರೈಕೆ ವ್ಯತ್ಯಯವಾಗಲಿದೆ ಎಂದು ಜಲ ಮಂಡಳಿ ಹೇಳಿದೆ. ಇಡೀ ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಮಾಡೋ ಟಿಕೆ ಹಳ್ಳಿ, ಹಾರೋಹಳ್ಳಿ, ಮತ್ತು ತಾತ ಗುಣಿ ಯಲ್ಲಿನ ಪಂಪಿಂಗ್ ಸ್ಟೇಶನ್ ಗಳಲ್ಲಿ ದುರಸ್ಥಿ ಕಾಮಗಾರಿ ನಡೆಯಲಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮದ್ಯ ನಿಷೇಧವಾಗುತ್ತಾ..?

ತುರ್ತು ಕಾಮಗಾರಿಯಿಂದ ಯಶವಂತಪುರ, ಮಲ್ಲೇಶ್ವರಂ,ಮತ್ತಿಕೆರೆ,ಜಯಮಹಲ್ ವಸಂತನಗರ.ಆರ್ ಟಿ ನಗರ, ಮೆಜೆಸ್ಟಿಕ್,ಶಿವಾಜಿನಗರ,ಗವಿಪುರ,ಕೆ ಆರ್ ಮಾರುಕಟ್ಟೆ, ಮಡಿವಾಳ, ಸಂಪಂಗಿರಾಮನಗರ,ಚಾಮರಾಜಪೇಟೆ,ಕುಮಾರಸ್ವಾಮಿಲೇಔಟ್,ಭೈರಸಂದ್ರ,ಆಡುಗೋಡಿ ,ದೊಮ್ಮಲೂರು,  ಇಂದಿರಾನಗರ, ವಿಜಯನಗರ, ಚಿಕ್ಕಪೇಟೆ, ಹಲಸೂರು,ಕೋರಮಂಗಲ ಸೇರಿದಂತೆ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.  ಹೀಗಾಗಿ ಬೆಂಗಳೂರಿಗರು ಸಹಕರಿಸುವಂತೆ ಜಲಮಂಡಳಿ ಮನವಿ ಮಾಡಿದೆ.

PREV
click me!

Recommended Stories

ವಿದ್ಯಾರ್ಥಿ ರಾಜಕಾರಣಕ್ಕೆ ಗ್ರೀನ್ ಸಿಗ್ನಲ್? ಪಠ್ಯದ ಜೊತೆ ರಾಜಕೀಯ ಪಾಠ? ಉನ್ನತ ಶಿಕ್ಷಣ ಸಚಿವರ ಸ್ಫೋಟಕ ಸುಳಿವು, ಹೇಳಿದ್ದೇನು?
ಕೋಗಿಲು ಲೇಔಟ್‌ನಲ್ಲಿ 167 ಮನೆಗಳು ನೆಲಸಮ: ಆದ್ರೆ ಹೊಸ ಫ್ಲ್ಯಾಟ್‌ ಪಡೆಯಲು 250 ಅರ್ಜಿ ಸಲ್ಲಿಕೆ!