ಕಾವೇರಿ ನೀರು ಹೋರಾಟ: ಬೆಂಗಳೂರು, ಮೈಸೂರು ಜನರು ನೀರಿಲ್ಲದೇ ಪೇಪರ್‌ ಬಳಸುವ ಸ್ಥಿತಿ ಬರುತ್ತದೆ

By Sathish Kumar KH  |  First Published Sep 5, 2023, 11:56 AM IST

ಕಾಂಗ್ರೆಸ್‌ ಸರ್ಕಾರವು ಕಾವೇರಿ ನೀರನ್ನು ಹೀಗೆ ತಮಿಳುನಾಡಿಗೆ ಹರಿಸುತ್ತಿದ್ದರೆ, ಬೆಂಗಳೂರು ಮತ್ತು ಮೈಸೂರು ಜನರಿಗೆ ನೀರು ಸಿಗದೇ ಪೇಪರ್‌ ಬಳಸುವ ಸ್ಥಿತಿ ಬರುತ್ತದೆ. 


ಮಂಡ್ಯ (ಸೆ.05): ಕನ್ನಡ ನಾಡಿನ ಜೀವನದಿ ಆಗಿರುವ ಕಾವೇರಿ ನದಿಗೆ ನಿರ್ಮಿಸಲಾದ ಕೃಷ್ಣರಾಜ ಸಾಗರ (ಕೆಆರ್‌ಎಸ್‌) ಜಲಾಶಯದಿಂದ ತಮಿಳುನಾಡಿಗೆ ನೀರನ್ನು ಸಂಕಷ್ಟದ ಸ್ಥಿತಿ ಎದುರಾಗುತ್ತದೆ. ಬೆಂಗಳೂರು ಮೈಸೂರು ಜನ ಮುಂದೆ ಪೇಪರ್ ಬಳಸಬೇಕಾದ ಸ್ಥಿತಿ ಬರುತ್ತದೆ ಎಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ. 

ಮಂಡ್ಯದಲ್ಲಿ ಕೆಆರ್‌ಎಸ್‌ ಡ್ಯಾಂನಿಂದ ನೀರನ್ನು ತಮಿಳುನಾಡಿಗೆ ಹರಿಸದಂತೆ ಆಗ್ರಹಿಸಿ ಬಿಜೆಪಿಯಿಂದ ಪ್ರತಿಭಟನೆ ಮಾಡಲಾಗುತ್ತಿದೆ. ಈ ವೇಳೆ ಬೆಂಗಳೂರು ಮತ್ತು ಮೈಸೂರು ಜನರು ಕಾವೇರಿ ನೀರಿಗಾಗಿ ಹೋರಾಟ ಮಾಡಬೇಕು ಎಂದು ಕರೆ ನೀಡಿದ್ದಾರೆ. ಕಾಂಗ್ರೆಸ್‌ ಸರ್ಕಾರ ಇದೇ ರೀತಿಯಾಗಿ ಕಾವೇರಿ ನದಿಯಿಂದ ತಮಿಳುನಾಡಿಗೆ ನೀರನ್ನು ಹರಿಸುತ್ತಿದ್ದರೆ, ಬೆಂಗಳೂರು ಮತ್ತು ಮೈಸೂರಿನ ಜನರೆ ನೀರಿಲ್ಲದೇ ಪೇಪರ್‌ ಬಳಸಬೇಕಾದ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಅಂತಹ ಪರಿಸ್ಥಿತಿ ಬರಬಾರದು ಎಂದರೆ ಕೂಡಲೇ ಬೆಂಗಳೂರು, ಮೈಸೂರು ಜನತೆ ಕಾವೇರಿ ನೀರಿಗಾಗಿ ಹೋರಾಟ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Tap to resize

Latest Videos

99 ಅಡಿಗೆ ಕುಸಿದ ಕೆಆರ್‌ಎಸ್‌ ಡ್ಯಾಂ ನೀರು: ಸರ್ಕಾರಕ್ಕೆ ಸೆಡ್ಡು ಹೊಡೆದು ಸುಪ್ರೀಂ ಕೋರ್ಟ್‌ ಮೊರೆ ಹೋದ ರೈತ ಸಂಘ

ಕತ್ತು ಕೊಯ್ದುಕೊಂಡ್ರೂ ನೀರು ನಿಲ್ಲಿಸದ ಸರ್ಕಾರ: ನಾವು ರಕ್ತ ಸಹಿ ಮಾಡಿದರೆ ಮಾತ್ರವಲ್ಲ, ಕತ್ತು ಕುಯ್ದುಕೊಂಡ್ರು ಕಾಂಗ್ರೆಸ್‌ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸೋ ಹಾಗೆ ಕಾಣಲ್ಲ. ಎಂಪಿ, ಎಂಎಲ್‌ಎ‌ಗಳು ಈ ಬಗ್ಗೆ ಧ್ವನಿ ಎತ್ತಬೇಕು. ಮಂಡ್ಯ, ಮೈಸೂರು, ಬೆಂಗಳೂರು ಭಾಗದ ಎಂಪಿಗಳು ಮಾತಾಡಲೇ ಬೇಕು. ಇಲ್ಲ ಅಂದ್ರೆ ಇಲ್ಲಿನ ಜನರಿಗೆ ಯಾವುದಕ್ಕೂ ನೀರು ಸಿಗಲ್ಲ. ಹೀಗೆ KRSನಿಂದ ತಮಿಳುನಾಡಿಗೆ ನೀರು ಬಿಟ್ರೆ ಸಂಕಷ್ಟದ ಸ್ಥಿತಿ ಎದುರಾಗುತ್ತದೆ. ಬೆಂಗಳೂರು ಮೈಸೂರು ಜನ ಮುಂದೆ ಪೇಪರ್ ಬಳಸಬೇಕಾದ ಸ್ಥಿತಿ ಬರುತ್ತದೆ. ಕಾವೇರಿ ನೀರು ಬೇಕು ಅಂದ್ರೆ ಬೆಂಗಳೂರು ಮೈಸೂರು ಜನರು ಪ್ರತಿಭಟನೆ ಮಾಡಬೇಕು. ಸಿನೆಮಾ ಹೀರೋಗಳು ಹೋರಾಟದಲ್ಲಿ ಭಾಗಿಯಾಗಬೇಕು ಎಂದು ಕರೆ ನೀಡಿದರು.

ರಕ್ತದ ಸಹಿ ಮಾಡಿ ರಾಜ್ಯಪಾಲರಿಗೆ ಪತ್ರ ರವಾನೆ: ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಬಳಿ ಬಿಜೆಪಿ ಕಾರ್ಯಕರ್ತರಿಂದ ರಾಜ್ಯಪಾಲರಿಗೆ ರಕ್ತ ಸಹಿ ಪತ್ರ ಚಳುವಳಿ ಮಾಡಲಾಗುತ್ತಿದೆ. ರಕ್ತ ಸಹಿ ಮಾಡುವುದನ್ನು ತಡೆದ ಪೊಲೀಸರು. ಪೊಲೀಸರ ಜೊತೆ ಬಿಜೆಪಿ ಕಾರ್ಯಕರ್ತರ ವಾಗ್ವಾದ ನಡೆಸಿದರು. ನೀರು ಇಲ್ಲದೇ ಮಂಡ್ಯ ಜನ ಕಷ್ಟದಲ್ಲಿ ಇದ್ದಾರೆ. ರಾಜ್ಯಪಾಲರು ಮಧ್ಯಸ್ಥಿಕೆವಹಿಸಿ ಅಂತಾ ರಕ್ತ ಸಹಿ ಚಳುವಳಿ ಮಾಡ್ತಾ ಇದೀವಿ. ನಮ್ಮನ್ನ ತಡೆಯಬೇಡಿ ಎಂದ ಬಿಜೆಪಿ ಕಾರ್ಯಕರ್ತರು. ರಕ್ತ ಸಹಿ ಮಾಡಬೇಡಿ ಎಂದು ಕಾರ್ಯಕರ್ತರಿಗೆ ಹೇಳಿದ ಪೊಲೀಸರು. ಯಾಕ್ ಸ್ವಾಮಿ ನಿಮಗೆ ನೀರು ಬೇಡ್ವಾ. ನಿಮ್ಮ ಪರವಾಗಿಯೂ ನಾವು ಪ್ರತಿಭಟನೆ ಮಾಡ್ತಾ ಇದೀವಿ. ನಿಮಗೂ ಕಾವೇರಿ ನೀರು ಬೇಕು ಅಲ್ವಾ ಎಂದು ಪೊಲೀಸರಿಗೆ ಪ್ರಶ್ನೆ ಮಾಡಿದ ಬಿಜೆಪಿ ಕಾರ್ಯಕರ್ತರು. ಬಳಿಕ ರಕ್ತ ಸಹಿ ಪ್ರತಿಭಟನೆಗೆ ಪೊಲೀಸರು ಅವಕಾಶ ನೀಡಿದರು. ನಂತರ, ರಾಜ್ಯಪಾಲರಿಗೆ ಬರೆದಿರುವ ಪತ್ರಕ್ಕೆ ರಕ್ತ ಸಹಿ‌ ಮಾಡಿ, ರಕ್ತ ಕೊಟ್ಟೆವೂ ನೀರು ಕೊಡೇವೂ ಎಂದು ಘೋಷಣೆ ಕೂಗಿದರು.

ಜನಾರ್ಧನರೆಡ್ಡಿ ಪಕ್ಷದ ಪರ ಪ್ರಚಾರ: ಪುರಸಭೆಯ ನಾಲ್ವರು ಸದಸ್ಯರನ್ನು ಅನರ್ಹಗೊಳಿಸಿದ ಜಿಲ್ಲಾಧಿಕಾರಿ

ಕಾವೇರಿ ಉಳಿಸಿಕೊಳ್ಳಲು ಸುಪ್ರೀಂ ಕೋರ್ಟ್‌ ಮೊರೆ ಹೋದ ರೈತಸಂಘ: ಸಂಕಷ್ಟದ ನಡುವೆಯೂ ತಮಿಳುನಾಡಿಗೆ ನೀರು ಬಿಡುಗಡೆ ಹಿನ್ನೆಲೆಯಲ್ಲಿ ರೈತಸಂಘದಿಂದ ಇಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಕೆಗಾಗಿ ಶಾಸಕ ದರ್ಶನ್ ಪುಟ್ಟಣ್ಣಯ್ಯ  ದೆಹಲಿಗೆ ತೆರಳಿದ್ದಾರೆ. ಹಿರಿಯ ವಕೀಲ ರವಿವರ್ಮಾ ಮೂಲಕ ಸುಪ್ರೀಂಗೆ ಇಂದು ಅರ್ಜಿ ಸಲ್ಲಿಕೆ ಮಾಡಲಿದ್ದಾರೆ. ಕೋರ್ಟ್ ಗೆ ಕಾವೇರಿ ಕೊಳ್ಳದ ಸಂಕಷ್ಟದ ಪರಿಸ್ಥಿತಿ ಮನವರಿಕೆ ಮಾಡಿಕೊಡಲು ಅರ್ಜಿ ಸಲ್ಲಿಸಲಾಗುತ್ತದೆ. ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳ ನೀರಿನ ಮಟ್ಟವನ್ನು ತಿಳಿಸಲಾಗುತ್ತದೆ. ರೈತರ ಬೆಳೆಗೆ ನೀರಿಲ್ಲದಿರುವ ವಸ್ತುಸ್ಥಿತಿ, ಕುಡಿಯಲು ಅಗತ್ಯ ಇರುವ ನೀರಿನ ಬಗ್ಗೆ ಅಂಕಿ ಅಂಶ ಸಹಿತ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡನೆಗೆ ಸಿದ್ಧತೆ ಮಾಡಲಾಗಿದೆ. ಅರ್ಜಿ ಸಲ್ಲಿಕೆಗಾಗಿ ಕಳೆದ 5 ದಿನದಿಂದ ಪೂರ್ವ ತಯಾರಿ ಮಾಡಿಕೊಂಡು, ಇಂದು ವಕೀಲರೊಂದಿಗೆ ಖುದ್ದು ದೆಹಲಿಗೆ ತೆರಳಿದ್ದಾರೆ. ರಾಜ್ಯ ಸರ್ಕಾರಕ್ಕೆ ಒತ್ತಡ ಹಾಕಲು ಅಹೋರಾತ್ರಿ ಧರಣಿ ನಡೆಸುವ ಜೊತೆಗೆ ಕಾನೂನು ಹೋರಾಟ ಮಾಡಲು ರಾಜ್ಯ ರೈತ ಸಂಘ ಮುಂದಾಗಿದೆ.

click me!