KRS Dam water level: ಕಾವೇರಿ ಒಡಲಲ್ಲಿ ದಿಢೀರ್ ಬದಲಾವಣೆ: ಕೊಂಚ ದೂರವಾಯ್ತು ಆತಂಕ

Published : Oct 26, 2026, 07:34 AM IST
KRS Dam

ಸಾರಾಂಶ

ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್ ಎಸ್ ಜಲಾಶಯದ ಒಳಹರಿವು ದಿಢೀರ್ ಹೆಚ್ಚಳವಾಗಿದೆ. ಇದರಿಂದಾಗಿ ಅಣೆಕಟ್ಟೆಯ ನೀರಿನ ಮಟ್ಟ ಮೂರು ಅಡಿಗಳಷ್ಟು ಏರಿಕೆ ಕಂಡಿದ್ದು, 103.52 ಅಡಿಗೆ ತಲುಪಿದೆ. ತಮಿಳುನಾಡಿಗೆ ನೀರು ಬಿಟ್ಟಿದ್ದರಿಂದ ಎದುರಾಗಿದ್ದ ಆತಂಕ ಸದ್ಯ ಕೊಂಚ ದೂರವಾಗಿದೆ.

ಮಂಡ್ಯ: ಕಳೆದ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಒಳ ಹರಿವಿನ ಪ್ರಮಾಣ ಏರಿಕೆಯಾಗಿರುವುದರಿಂದ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ ಎಸ್ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಮತ್ತೆ 3 ಅಡಿ ಏರಿಕೆ ಕಂಡಿದೆ.

12,282 ಕ್ಯುಸೆಕ್ ಏರಿಕೆ

ಕೆಆರ್ ಎಸ್ ಜಲಾಶಯದ ಹಿಂದಿನ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ 12,282 ಕ್ಯುಸೆಕ್ ಏರಿಕೆಯಾಗಿದೆ. ಅಣೆಕಟ್ಟೆಯ ನೀರಿನ ಮಟ್ಟ 103.52 ಅಡಿ ದಾಟಿದೆ.

ಕೊಡಗು, ಭಾಗಮಂಡಲ ಸೇರಿದಂತೆ ಕಾವೇರಿ ಜಲಾಯನ ಪ್ರದೇಶಗಳಲ್ಲಿ ಮಳೆ ಕೊರತೆಯಿಂದಾಗಿ ಈ ಬಾರಿ ಅಣೆಕಟ್ಟೆಯಲ್ಲಿ 110 ಅಡಿಯಷ್ಟೆ ತುಂಬಿತ್ತು. ನಂತರ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಮತ್ತು ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ನಿರಂತರವಾಗಿ ನೀರು ಹರಿದ ಪರಿಣಾಮ ಕಳೆದ ಒಂದು ವಾರದ ಹಿಂದೆ ಅಣೆಕಟ್ಟೆಯ ನೀರಿನ ಮಟ್ಟ 100 ಅಡಿಗೆ ಕುಸಿದಿತ್ತು.

ಅಲ್ಲದೆ ಮತ್ತೆ ಪ್ರಾಧಿಕಾರ ಕಳೆದ ಮೂರು ದಿನಗಳ ಹಿಂದೆ ತಮಿಳುನಾಡಿಗೆ 1500 ಕ್ಯುಸೆಕ್ ನೀರು ಬಿಡುವಂತೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕೃಷಿಗೆ ಇರಲಿ ಕುಡಿಯುವ ನೀರಿಗೂ ಸಮಸ್ಯೆ ಆಗುವ ಆತಂಕ ಎದುರಾಗಿತ್ತು.

ಕಾವೇರಿ ಜಲಾಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ 12 ಸಾವಿರ ಕ್ಯುಸೆಕ್ ಗೂ ಹೆಚ್ಚು ನೀರು ಬರುತ್ತಿರುವುದರಿಂದ ನೀರಿನ ಮಟ್ಟ 103 ಅಡಿ ದಾಟಿದೆ. ಜಲಾಶಯದಿಂದ 1771 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

ಇದೇ ರೀತಿ ಮಳೆ ಸುರಿದರೆ ಮುಂದಿನ ದಿನಗಳಲ್ಲಿ ಜಲಾಶಯದ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಕೆಆರ್ ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ

ಇಂದಿನ ಮಟ್ಟ – 103.52ಅಡಿ

ಒಳ ಹರಿವು – 12,282 ಕ್ಯುಸೆಕ್

ಹೊರ ಹರಿವು – 1771 ಕ್ಯುಸೆಕ್

ಒಟ್ಟು ಸಂಗ್ರಹ – 25.697 ಟಿಎಂಸಿ

PREV
Read more Articles on
click me!

Recommended Stories

Elections: ಜನವರಿಯೊಳಗೆ ಜಿಪಂ, ತಾಪಂ ಚುನಾವಣೆ: ಸಚಿವ ಈಶ್ವರ ಖಂಡ್ರೆ
ದಸರಾ ರಜೇಲಿ ಕುಂಚಗಳ ಮೂಲಕವೇ ಶಾಲೆಯ ಮೆರುಗು ಹೆಚ್ಚಿಸುವ ಶಿಕ್ಷಕ ಪರಶುರಾಮ ನಗನೂರು