ಜಾತಿ, ಧರ್ಮಾಧಾ​ರಿತ ರಾಜ​ಕೀ​ಯಕ್ಕೆ ಮನ್ನಣೆ ನೀಡಲ್ಲ: ಅನಿತಾ ಕುಮಾ​ರ​ಸ್ವಾಮಿ

By Govindaraj S  |  First Published Dec 30, 2022, 1:30 AM IST

ರಾಮ​ನ​ಗರ ಕ್ಷೇತ್ರದ ಜನರು ಸಹೋ​ದ​ರ​ರಂತೆ ಸಹ​ಬಾ​ಳ್ವೆ​ಯಿಂದ ಜೀವನ ನಡೆ​ಸು​ತ್ತಿ​ದ್ದಾರೆ. ಇಲ್ಲಿ ಯಾರೂ ಜಾತಿ, ಮತ, ಧರ್ಮದ ಆಧಾ​ರಿತ ರಾಜ​ಕೀ​ಯಕ್ಕೆ ಮನ್ನಣೆ ನೀಡು​ವು​ದಿಲ್ಲ ಎಂದು ಬಿಜೆಪಿ ನಾಯ​ಕರ ವಿರುದ್ಧ ಶಾಸಕಿ ಅನಿತಾ ಕುಮಾ​ರ​ಸ್ವಾಮಿ ಕಿಡಿ​ಕಾ​ರಿ​ದ​ರು. 


ರಾಮ​ನ​ಗರ (ಡಿ.30): ರಾಮ​ನ​ಗರ ಕ್ಷೇತ್ರದ ಜನರು ಸಹೋ​ದ​ರ​ರಂತೆ ಸಹ​ಬಾ​ಳ್ವೆ​ಯಿಂದ ಜೀವನ ನಡೆ​ಸು​ತ್ತಿ​ದ್ದಾರೆ. ಇಲ್ಲಿ ಯಾರೂ ಜಾತಿ, ಮತ, ಧರ್ಮದ ಆಧಾ​ರಿತ ರಾಜ​ಕೀ​ಯಕ್ಕೆ ಮನ್ನಣೆ ನೀಡು​ವು​ದಿಲ್ಲ ಎಂದು ಬಿಜೆಪಿ ನಾಯ​ಕರ ವಿರುದ್ಧ ಶಾಸಕಿ ಅನಿತಾ ಕುಮಾ​ರ​ಸ್ವಾಮಿ ಕಿಡಿ​ಕಾ​ರಿ​ದ​ರು. ತಾಲೂಕಿನ ಕೈಲಂಚಾ ಹೋಬಳಿ ಕವಣಾಪುರದಲ್ಲಿ ಸಮುದಾಯ ಭವನ ನಿರ್ಮಾಣ ಅಭಿವೃದ್ಧಿ ಕಾಮ​ಗಾ​ರಿಗೆ ಭೂಮಿಪೂಜೆ ನೆರವೇರಿಸಿದ ನಂತರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಜಾತಿ, ಧರ್ಮದ ವಿಷ ಬೀಜ ಬಿತ್ತುವ ಕೆಲಸ ಫಲ ನೀಡು​ವು​ದಿಲ್ಲ. ಎಲ್ಲ ಸಮು​ದಾ​ಯ​ದ​ವರು ಒಂದೇ ಎಂಬ ಭಾವ​ನೆ​ಯಲ್ಲಿ ಅಣ್ಣ ತಮ್ಮಂದಿ​ರಂತೆ ಜೀವನ ನಡೆ​ಸು​ತ್ತಾರೆ. 

ಬಿಜೆ​ಪಿ​ಯ​ವ​ರಿ​ಗಿಂತ ನಮಗೆ ದೇವರ ಮೇಲೆ ಭಕ್ತಿ ಹೆಚ್ಚಾ​ಗಿದೆ. ದೇವೇಗೌಡರಿಗಿಂತ ದೊಡ್ಡ ದೈವಾರಾಧಕರು ಯಾರೂ ಇಲ್ಲ. ನಾವು ಸದಾ ದೇವರಲ್ಲಿ ನಂಬಿಕೆ ಇಟ್ಟಿದ್ದೇವೆ. ಅದಕ್ಕಾಗಿಯೇ ರಾಮನಗರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಮಾಡಿಸಿ ಲಕ್ಷಾಂತರ ಜನ​ರಿಗೆ ದೇವರ ದರ್ಶನ ಮಾಡಿ​ಸಿ​ದೆವು. ಭಕ್ತಿಗೆ ಇದ​ಕ್ಕಿಂತ ಇನ್ನೊಂದು ನಿದ​ರ್ಶನ ಬೇಕಿಲ್ಲ ಎಂದು ಹೇಳಿ​ದ​ರು. ಈ ಹಿಂದೆ ಕುಮಾರಸ್ವಾಮಿಯವರು ಮುಖ್ಯ​ಮಂತ್ರಿ​ಯಾ​ಗಿದ್ದ ಅವ​ಧಿ​ಯಲ್ಲಿ ತಿರುಪತಿ ದೇವಾ​ಲಯ ಟ್ರಸ್ಟ್‌ ನವರು ರಾಮನಗರದಲ್ಲಿ ದೇವಾಲಯ ನಿರ್ಮಿಸಲು ಮುಂದಾಗಿ ಸ್ಥಳವನ್ನು ಹುಡುಕುತ್ತಿದ್ದರು. 

Tap to resize

Latest Videos

ಲಿಂಗಪ್ಪರಿಗೆ ವಯ​ಸ್ಸಾಗಿದೆ ಅಭಿ​ವೃದ್ಧಿ ಕೆಲಸ ಕಾಣು​ತ್ತಿಲ್ಲ: ಅನಿತಾ ಕುಮಾರಸ್ವಾಮಿ

ಆಗ 10 ಎಕರೆ ಜಾಗ ಗುರುತಿಸುವ ಕೆಲಸ ನಡೆ​ದಿತ್ತು. ನಾವು ಹೆಚ್ಚು ಮಾತನಾಡುವುದಿಲ್ಲ, ಕೆಲಸ ಮಾಡಿ ತೋರಿಸುತ್ತೇವೆ. ವಿರೋಧಿಗಳಿಗೆ ಅಭಿವೃದ್ಧಿ ಕೆಲಸಗಳ ಮೂಲಕವೇ ಪ್ರತ್ಯುತ್ತರ ನೀಡುತ್ತೇವೆ. ನಮ್ಮದು ಅಭಿವೃದ್ಧಿ ರಾಜಕಾರಣ ಮಾತ್ರ. ಕೆಲವರು ಓಡಾಡಿಕೊಂಡು ಕೆಲಸ ಮಾಡುವವರ ವಿರುದ್ಧ ಟೀಕೆ ಮಾಡುವುದು ಸುಲಭ. ಆದರೆ, ಕ್ಷೇತ್ರದ ಹಲವು ಅಭಿವೃದ್ದಿ ಕಾರ್ಯಗಳನ್ನು ಮಾಡುವ ನಿಟ್ಟಿ​ನಲ್ಲಿ ನಾನು ಗಮನ ಹರಿ​ಸಿ​ಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಅನಿತಾ ಕುಮಾ​ರ​ಸ್ವಾಮಿ ಹೇಳಿ​ದರು.

ಸಮುದಾಯ ಭವನಗಳ ಅಗತ್ಯವಿರುವ ಗ್ರಾಮಗಳಾದ ಮೊಟ್ಟೆದೊಡ್ಡಿ, ಕೆ.ಜಿ.ಹೊಸಹಳ್ಳಿ, ಕವಣಾಪುರ ಗ್ರಾಮಗಳಲ್ಲಿ ಪೂಜೆ ನೆರವೇರಿಸಿದ್ದು, ಹಾರೋಹಳ್ಳಿ-ಮರಳವಾಡಿ ಭಾಗದ 9 ಗ್ರಾಮಗಳಲ್ಲಿ ಸಮುದಾಯ ಭವನಕ್ಕೆ ಶುಕ್ರವಾರ ಚಾಲನೆ ನೀಡುತ್ತಿದ್ದೇನೆ ಎಂದು ತಿಳಿ​ಸಿದರು.

Ramanagara: ಶೇ.68ರಷ್ಟು ಇ-ಖಾತೆ ಪೂರ್ಣ: ಶಾಸಕಿ ಅನಿತಾ ಕುಮಾರಸ್ವಾಮಿ

ಜೆಡಿಎಸ್‌ ತಾಲೂಕು ಅಧ್ಯಕ್ಷ ರಾಜಶೇಖರ್‌, ಬಿಡಿಸಿಸಿ ಬ್ಯಾಂಕ್‌ ಮಾಜಿ ನಿರ್ದೇಶಕ ಅಶ್ವತ್‌, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ಪಾಂಡುರಂಗ, ವಿಎಸ್‌ಎಸ್‌ಎನ್‌ ನಿರ್ದೇಶಕ ಮೊಟ್ಟೆದೊಡ್ಡಿ ಮಹೇಶ್‌, ಗ್ರಾಪಂ ಸದಸ್ಯರಾದ ಭವ್ಯಸುರೇಂದ್ರ, ವೆಂಕಟೇಶ್‌, ವಾಸು, ಮುಖಂಡರಾದ ಗುನ್ನೂರು ದೇವರಾಜು, ಕೆ.ಜಿ ಹೊಸಹಳ್ಳಿ ದೇವರಾಜು, ರಾಜು, ಗೋಪಾಲ… ನಾಯಕ್‌, ಕಾಳು ನಾಯಕ್‌, ಅವೇರಹಳ್ಳಿ ಸ್ವಾಮಿ, ಚಂದ್ರಶೇಖರ್‌, ಬೈರಪ್ಪ, ಶಿವರಾಜು, ಸಿದ್ದು ಮತ್ತಿತರರು ಹಾಜ​ರಿದ್ದರು.

click me!