‘ಐ ಲವ್‌ ತಾಲಿಬಾನ್‌’ ಎಂದವನ ಹೆಡೆಮುರಿ ಕಟ್ಟಿದ ಪೊಲೀಸರು

By Kannadaprabha News  |  First Published Aug 21, 2021, 7:51 AM IST

*  ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದ್ದ ಘಟನೆ
* ಪೋಸ್ಟ್‌ ಬಳಿಕ ಪರಾರಿಯಾಗಿದ್ದ ಆರೋಪಿ
* ಆರೋಪಿ ವಿರುದ್ಧ ಮತೀಯಗಲಭೆ ಮತ್ತು ಪ್ರಚಾರ ಪ್ರಕರಣ ದಾಖಲು


ಜಮಖಂಡಿ(ಆ.21): ಆಷ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಹಿಂಸಾಚಾರ ನಡೆಸುತ್ತಿರುವ ತಾಲಿಬಾನ್‌ ಪರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹರಿಬಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಶುಕ್ರವಾರ ನಡೆದಿದೆ. 

"

Tap to resize

Latest Videos

ಜಮಖಂಡಿಯ ಆಶೀಫ್‌ ಗಲಗಲಿ ಬಂಧಿತ ಆರೋಪಿ. ಈತ ‘ತಾಲಿಬಾನ್‌ ಐ ಲವ್‌’ ಎಂದು ಫೇಸ್‌ ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದ. ಇದು ಜಾಲತಾಣದಲ್ಲಿ ಹರಿದಾಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಆಶೀಫ್‌ ತಾಲಿಬಾನ್‌ ಪರ ಹಾಕಿದ್ದ ಪೋಸ್ಟ್‌ ಜನಾಕ್ರೋಶಕ್ಕೆ ಕಾರಣವಾಗಿದ್ದು ಆತನನ್ನು ಕೂಡಲೇ ಬಂಧಿಸಬೇಕೆಂದು ಪೊಲೀಸ್‌ ಇಲಾಖೆಯನ್ನು ಒತ್ತಾಯಿಸಿದ್ದರು. 

ಐ ಲವ್ ಯು ತಾಲಿಬಾನ್: ಫೇಸ್‌ಬುಕ್‌ನಲ್ಲಿ ಉಗ್ರರ ಪರ ಪೋಸ್ಟ್‌ ಮಾಡಿದ ಜಮಖಂಡಿ ಯುವಕ

ಶುಕ್ರವಾರ ಬೆಳಗ್ಗೆಯಿಂದ ಆರೋಪಿ ಪರಾರಿಯಾಗಿದ್ದ. ನಂತರ ಪೊಲೀಸರು ಆರೋಪಿಯನ್ನು ಸಂಜೆ ಬಂಧಿಸಿರುವುದಾಗಿ ತಿಳಿಸಿದ್ದಾರೆ. ಈತನ ವಿರುದ್ಧ ಜಮಖಂಡಿ ಶಹರ ಪೊಲೀಸ್‌ ಠಾಣೆಯಲ್ಲಿ 295(ಎ), 505(2) ಮತೀಯಗಲಭೆ ಮತ್ತು ಪ್ರಚಾರ ಪ್ರಕರಣ ದಾಖಲಾಗಿದೆ.
 

click me!