ಕೆಲಸದಿಂದ ವಜಾ ಮಾಡಿದ್ದಕ್ಕೆ ಬೌನ್ಸ್‌ ವಾಹನಕ್ಕೆ ಬೆಂಕಿ!

Kannadaprabha News   | Asianet News
Published : Jan 22, 2020, 07:33 AM IST
ಕೆಲಸದಿಂದ ವಜಾ ಮಾಡಿದ್ದಕ್ಕೆ ಬೌನ್ಸ್‌ ವಾಹನಕ್ಕೆ ಬೆಂಕಿ!

ಸಾರಾಂಶ

ಕೆಲಸದಿಂದ ವಜಾ ಮಾಡಿದರೆಂಬ ಕಾರಣಕ್ಕೆ ಇಬ್ಬರು ವ್ಯಕ್ತಿಗಳು ಬೌನ್ಸ್ ವಾಹನಕ್ಕೆ ಬೆಂಕಿ ಇಟ್ಟಿದ್ದು ಇವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. 

ಬೆಂಗಳೂರು [ಜ.22]:  ದ್ವಿಚಕ್ರಗಳನ್ನು ಬಾಡಿಗೆಗೆ ನೀಡುವ ‘ಬೌನ್ಸ್‌’ ಕಂಪನಿಯಿಂದ ವಜಾ ಮಾಡಿದರೆಂಬ ಕಾರಣಕ್ಕೆ ರಸ್ತೆಯಲ್ಲಿ ನಿಂತಿದ್ದ ಬೌನ್ಸ್‌ ದ್ವಿಚಕ್ರ ವಾಹನಕ್ಕೆ ಆರೋಪಿಗಳಿಬ್ಬರು ಬೆಂಕಿ ಹಚ್ಚಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕೆ.ಆರ್‌.ಪುರಂನಲ್ಲಿ ಘಟನೆ ನಡೆದಿದ್ದು, ಸಂಸ್ಥೆಯ ಮ್ಯಾನೇಜರ್‌ ಚಂದ್ರೇಗೌಡ ಆರೋಪಿಗಳಾದ ಯೋಗಿಶ್‌ ಮತ್ತು ಸತೀಶ್‌ ಕುಮಾರ್‌ ಎಂಬುವರ ವಿರುದ್ಧ ದೂರು ನೀಡಿದ್ದಾರೆ.

ಬೌನ್ಸ್ ಸ್ಕೂಟರ್‌ಗೆ ಬೆಂಕಿ; ಆರೋಪಿಗಳನ್ನು ಬಂಧಿಸಿದ ಪೊಲೀಸ್!.

ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಕೆ.ಆರ್‌.ಪುರಂ ಪೊಲೀಸರು ತಿಳಿಸಿದ್ದಾರೆ. ಯೋಗಿಶ್‌, ಸತೀಶ್‌ ಕುಮಾರ್‌ ಹಾಗೂ ದರ್ಶನ್‌ ಮೂವರು ಬೌನ್ಸ್‌ ಕಂಪನಿಯಲ್ಲಿ ಸಿಬ್ಬಂದಿಯಾಗಿದ್ದರು. ಕೆಲ ವರ್ಷಗಳಿಂದ ಅಲ್ಲಿಯೇ ಕೆಲಸ ಮಾಡುತ್ತಿದ್ದ ಆರೋಪಿಗಳು ಕಂಪನಿಯಲ್ಲಿ ಇಂಧನ ಕಳವು ಮಾಡುತ್ತಿದ್ದರು. ಕಂಪನಿ ಆಂತರಿಕ ತನಿಖೆ ನಡೆಸಿದಾಗ ಆರೋಪಿಗಳು ಇಂಧನ ಕಳವು ಮಾಡುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದರು. ಹೀಗಾಗಿ ಮೂವರು ಆರೋಪಿಗಳನ್ನು ನ.26ರಂದು ಇಬ್ಬರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು.

ಬೌನ್ಸ್‌ನಲ್ಲಿ ಬರ್ತಾರೆ ಸರಗಳ್ಳರು..! ಬಾಡಿಗೆ ಬೈಕ್ ಪಡೆದು ಕೃತ್ಯ...

ಇದರಿಂದ ಆಕ್ರೋಶಗೊಂಡಿದ್ದ ಆರೋಪಿಗಳಾದ ಯೋಗಿಶ್‌ ಮತ್ತು ಸತೀಶ್‌ಕುಮಾರ್‌ ಡಿ.1ರಂದು ಸಂಜೆ 7.30ರ ಸುಮಾರಿಗೆ ಕೆ.ಆರ್‌.ಪುರಂನ ಆಲ್ಫಾ ಗಾರ್ಡನ್‌ನಲ್ಲಿ ನಿಲ್ಲಿಸಿದ್ದ ಬೌನ್ಸ್‌ ಕಂಪನಿಯ ದ್ವಿಚಕ್ರ ವಾಹನಕ್ಕೆ ಬೆಂಕಿ ಇಟ್ಟಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ