ಶಿರಸಿ: ಆಸ್ಪತ್ರೆಯಲ್ಲಿ ರೋಗಿಯಿಂದ ದಾಂಧಲೆ, 9 ಲಕ್ಷ ರೂ. ಹಾನಿ

By Kannadaprabha NewsFirst Published Aug 29, 2020, 2:48 PM IST
Highlights

ರೋಟರಿ ಚಾರಿಟೇಬಲ್‌ ಆಸ್ಪತ್ರೆಯಲ್ಲಿ ರೋಗಿಯಿಂದ ದಾಂಧಲೆ| ಉತ್ತರ ಕನ್ನಡ ಜಿಲ್ಲೆ ಶಿರಸಿ ಪಟ್ಟಣದಲ್ಲಿ ನಡೆದ ಘಟನೆ| ಆಸ್ಪತ್ರೆಗೆ ಸಂಬಂಧಿಸಿದ 9 ಲಕ್ಷ ಮೌಲ್ಯದ ವೈದ್ಯಕೀಯ ಉಪಕರಣಗಳಿಗೆ ಹಾನಿ| ರೋಗಿಯ ವಿರುದ್ಧ ಶಿರಸಿ ಮಾರುಕಟ್ಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು| 

ಶಿರಸಿ(ಆ. 29): ಇಲ್ಲಿನ ರೋಟರಿ ಚಾರಿಟೇಬಲ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಯೊಬ್ಬ ದಾಂಧಲೆ ನಡೆಸಿ ಆಸ್ಪತ್ರೆಗೆ ಸಂಬಂಧಿಸಿದ 9 ಲಕ್ಷ ಮೌಲ್ಯದ ವೈದ್ಯಕೀಯ ಉಪಕರಣಗಳಿಗೆ ಹಾನಿ ಮಾಡಿದ್ದು, ಆತನ ವಿರುದ್ಧ ಶಿರಸಿ ಮಾರುಕಟ್ಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾರಗೋಡ ಗುಡ್ಡೆಕೊಪ್ಪದ ಪ್ರಕಾಶ ನಾಯ್ಕ (38) ಆರೋಪಿ. ಈತ ಆ. 26ರಂದು ವಿಷ ಸೇವನೆ ಮಾಡಿದ್ದ. ಚಿಕಿತ್ಸೆಗಾಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಲಾಗಿತ್ತು. ಚೇತರಿಸಿಕೊಳ್ಳುತ್ತಿದ್ದ ಈತ ಗುರುವಾರ ರಾತ್ರಿ ವೇಳೆ ದಾಂಧಲೆ ನಡೆಸಿದ್ದಾನೆ.

ಯಲ್ಲಾಪುರ: ಮಹಿಳೆಯ ಕೊಳೆತ ಶವ ಪತ್ತೆ, ಕಾರಣ..?

ಸಿಬ್ಬಂದಿ ಈತನನ್ನು ತಡೆಯಲು ಬಂದಾಗ ಅವರನ್ನು ನೂಕಿದ್ದಾನೆ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಶಿವಕುಮಾರ ದೂರು ನೀಡಿದ್ದರು. ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಮಾರುಕಟ್ಟೆ ಠಾಣೆ ಪೊಲೀಸರು ತಿಳಿಸಿದ್ದಾರೆ.
 

click me!