ಡ್ರಗ್‌ ಮಾಫಿಯಾ ಕಿತ್ತೆಸೆಯಲು ನಮ್ಮ ಸರ್ಕಾರ ಬದ್ಧ: ಕಟೀಲ್‌

By Kannadaprabha News  |  First Published Aug 29, 2020, 1:25 PM IST

ಅಂದಿನ ಸರ್ಕಾರದ ಕುಮ್ಮಕ್ಕಿನಿಂದ ರಾಜ್ಯದ ಎಲ್ಲಡೆ ಡ್ರಗ್‌ ಮಾಫಿಯಾ ಜೀವಂತ| ಇದನ್ನು ಬೇರು ಸಮೇತ ಕಿತ್ತೆಸೆಯಲು ರಾಜ್ಯ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ|ಡ್ರಗ್‌ ಮಾಫಿಯಾಯಲ್ಲಿ ಸಿನಿಮಾ ತಾರೆಯರೇ ಇರಲಿ ಬೇರೆ ಯಾರೇ ಇರಲಿ ಸರ್ಕಾರ ತನಿಖೆ ನಡೆಸಿ ಕಠಿಣ ಕ್ರಮ: ಕಟೀಲ್‌| 


ಕಲಬುರಗಿ(ಆ.29): ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಡ್ರಗ್‌ ಮಾಫಿಯಾ ಇನ್ನೂ ರಾಜಾರೋಷವಾಗಿ ನಡೆಯುತ್ತಿದೆ. ಈ ಹಿಂದೆ ಈ ವಿಚಾರವಾಗಿ ಮಂಗಳೂರಲ್ಲಿ ನಾನೇ ಪ್ರತಿಭಟನೆ ಮಾಡಿದ್ದೇನೆ. ಆಗಿನ ಸರ್ಕಾರ ಡ್ರಗ್‌ ಮಾಫಿಯಾ ದಂಧೆಗೆ ಬ್ರೇಕ್‌ ಹಾಕಲು ಮನಸ್ಸು ಮಾಡಲಿಲ್ಲ. ಆದ್ರೆ ನಮ್ಮ ಬಿಜೆಪಿ ಸರ್ಕಾರ ಡ್ರಗ್‌ ಮಾಫಿಯಾ ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ಕಲಬುರಗಿ ಜಿಲ್ಲಾ ಪ್ರವಾಸದಲ್ಲಿರುವ ಕಟೀಲ್‌ ಅವರು, ಸುದ್ದಿಗಾರರೊಂದಿಗೆ ಮಾತನಾಡಿ, ಅಂದಿನ ಸರ್ಕಾರದ ಕುಮ್ಮಕ್ಕಿನಿಂದ ರಾಜ್ಯದ ಎಲ್ಲಡೆ ಡ್ರಗ್‌ ಮಾಫಿಯಾ ಜೀವಂತವಾಗಿದೆ. ಇದನ್ನು ಬೇರು ಸಮೇತ ಕಿತ್ತೆಸೆಯಲು ರಾಜ್ಯ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

Tap to resize

Latest Videos

ಕೊನೆಗೂ ಕಲಬುರಗಿ ಜಿಲ್ಲಾಧಿಕಾರಿಯನ್ನ ಎತ್ತಂಗಡಿ ಮಾಡಿದ ರಾಜ್ಯ ಸರ್ಕಾರ

ಈ ದಂಧೆಯಲ್ಲಿ ಭಾಗಿದವರ ವಿರುದ್ಧ ತನಿಖೆ ಶುರು ಮಾಡಲಾಗಿದೆ. ಮುಖ್ಯಮಂತ್ರಿಗಳು ಗೃಹ ಇಲಾಖೆಗೆ ಫುಲ್‌ ಫ್ರೀಡಂ ಕೊಟ್ಟಿದ್ದಾರೆ. ಡ್ರಗ್‌ ಮಾಫಿಯಾಯಲ್ಲಿ ಸಿನಿಮಾ ತಾರೆಯರೇ ಇರಲಿ ಬೇರೆ ಯಾರೇ ಇರಲಿ ಸರ್ಕಾರ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.

click me!