ಸಿಪಿಸಿ ಕಾನೂನಿಗೆ ತಿದ್ದುಪಡಿ ಮಾಡಿ ಬಡವರ ಪ್ರಕರಣ ವಿಲೇವಾರಿ ಮಾಡಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಮೈಸೂರು (ಆ.13): ಸಿಪಿಸಿ ಕಾನೂನಿಗೆ ತಿದ್ದುಪಡಿ ಮಾಡಿ ಬಡವರ ಪ್ರಕರಣ ವಿಲೇವಾರಿ ಮಾಡಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು. ನಗರದಲ್ಲಿ ಆರಂಭವಾದ 10ನೇ ರಾಜ್ಯ ವಕೀಲರ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಗಾಗಲೇ ತಿದ್ದುಪಡಿಯಾಗಿದ್ದು, ರಾಷ್ಟ್ರಪತಿಗಳ ಅನುಮೋದನೆಗೆ ಹೋಗಿದೆ. ಬಡವರ ಆಸ್ತಿ ಕಿತ್ತುಕೊಳ್ಳುವ ಹುನ್ನಾರ ಇದೆ. ಅವರ ರಕ್ಷಣೆಗೂ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು. ಯಾವುದೇ ದೇಶ, ರಾಜ್ಯ ಇರಲಿ. ಕಾನೂನು ಅನುಷ್ಠಾನ ಸರಿ ಇದ್ದರೆ ಅದರಲ್ಲಿ ವಕೀಲ ಕೊಡುಗೆ ದೊಡ್ಡದಿರುತ್ತದೆ. ಪರಿಣಾಮಕಾರಿಯಾಗಿ ಕೆಲಸ ಮಾಡಿ. ನಾವು ನುಡಿದಂತೆ ನಡೆಯುತ್ತೇವೆ.
ಮುಂದಿನ ಕ್ಯಾಬಿನೇಟ್‌ಗೆ ವಕೀಲರ ರಕ್ಷಣಾ ಕಾಯ್ದೆಯನ್ನು ಮಂಡಿಸಲಾಗುವುದು. ಸರ್ಕಾರ ನೀಡಿದ ಐದು ಗ್ಯಾರಂಟಿಗಳನ್ನು ಸಮರ್ಥವಾಗಿ ಜಾರಿಗೆ ತರುತ್ತಿದೆ. ಬಡತನ ರೇಖೆಯಿಂದ ಬಡವರನ್ನು ಮೇಲೆತ್ತುವುದು ಇದರ ಮುಖ್ಯ ಉದ್ದೇಶ ಎಂದು ಅವರು ಹೇಳಿದರು. ದೊಡ್ಡ ಪ್ರಮಾಣದ ವ್ಯಾಜ್ಯಗಳು ಇವೆ. ನ್ಯಾಯದಾನ ಮನೆ ಬಾಗಿಲಿಗೆ ಹೋಗಬೇಕು. ಲಕ್ಷಾಂತರ ಪ್ರಕರಣಗಳು ನ್ಯಾಯಕ್ಕಾಗಿ ಕಾದು ನಿಂತಿವೆ. ಆದರೆ ದೇಶದಲ್ಲಿ ವ್ಯಾಜ್ಯಗಳನ್ನು ಮುಂದೂಡಲಾಗುತ್ತಿದೆ. ಸರ್ಕಾರ 7ನೇ ಗ್ಯಾರಂಟಿಯಾಗಿ ನ್ಯಾಯ ಭಾಗ್ಯ ಕೊಡಬೇಕು. ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ನ್ಯಾಯಾಲಯ ಸ್ಥಾಪನೆ ಆಗಬೇಕು. ಅದಕ್ಕಾಗಿ ಹಣಕಾಸು ಮೀಸಲಿಡಬೇಕು.
ಸರ್ಕಾರದ 6ನೇ ಗ್ಯಾರಂಟಿ ವಕೀಲರ ರಕ್ಷಣೆ ಕಾಯ್ದೆ: ಸಿದ್ದರಾಮಯ್ಯ ಭರವಸೆ
ವಿಶೇಷ ಮನ್ನಣೆ ಎಂದು ಪರಿಗಣಿಸಬೇಕು. ಇದಕ್ಕೆ ತುಂಬಾ ಸಮಯ ತೆಗೆದುಕೊಳ್ಳುವುದು ಬೇಡ. ಹೈ ಕೋರ್ಟ್ ಆಕ್ಟ್ಗೆ ತಿದ್ದುಪಡಿ ತರಬೇಕು. ಅಡ್ಮಿನಿಸ್ಪ್ರೇಷನ್ ಆಫ್ ಜಸಿಸ್ವ್ ಕಾಯಿದೆ ತರಲು ಉತ್ಸುಕರಾಗಿದ್ದೇವೆ ಎಂದು ಅವರು ತಿಳಿಸಿದರು. ಘನವೆತ್ತ ವೃತ್ತಿಗಳಲ್ಲಿ ವಕೀಲ ವೃತ್ತಿಯೂ ಒಂದು. ವಕೀಲ ವೃತ್ತಿಗೆ ವಿಶೇಷ ಗೌರವ ಮನ್ನಣೆ ಇದೆ. ಕಾನೂನು ವಿದ್ಯಾರ್ಥಿಗಳಿಗೆ ಶಿಕ್ಷಣ ಪರಿಣಾಮಕಾರಿಯಾಗಿ ಸಿಗಬೇಕು. ಕಾನೂನು ಶಿಕ್ಷಣ ನಿರ್ದೇಶನಾಲಯ ಜಾರಿಗೊಳಿಸುತ್ತೇನೆ. ಯುವ ವಕೀಲರಿಗೆ ಕೌಶಲ್ಯ, ಸಂವಿಧಾನದ ಮಹತ್ವ ತಿಳಿಸಿಕೊಡಲಾಗುವುದು. ಇದಕ್ಕೆ ಹಣಕಾಸಿನ ನೆರವು ನೀಡುವಂತೆ ಮನವಿ ಮಾಡಿರುವುದಾಗಿ ಅವರು ಹೇಳಿದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎ.ಎಸ್. ಬೊಪಣ್ಣ ಮಾತನಾಡಿ, ನಾನು ನಿಮ್ಮ ಹಾಗೆಯೇ ವಕೀಲನಾಗಿ ವೃತ್ತಿ ಜೀವನ ಆರಂಭಿಸಿದೆ. ಲೇಬರ್ ಕೋರ್ಟ್‌ನಲ್ಲಿ ನಾನು ಕೆಲಸ ಮಾಡಿದೆ. ಪರಿಷತ್‌ನಲ್ಲಿ ನಿಮಗೆ ಸಾಕಷ್ಟುಅವಕಾಶವಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವಿ. ವರಾಳೆ ಮಾತನಾಡಿ, ಲೋಕ ಅದಾಲತ್ ಮೂಲಕ ಇತ್ಯರ್ಥಪಡಿಸಿರುವ ಪ್ರಕರಣಗಳ ಕುರಿತು ಮತ್ತು ಇದಕ್ಕೆ ನೆರವಾದ ವಕೀಲರನ್ನು ಅಭಿನಂದಿಸಿದರು.
ಕಾಂಗ್ರೆಸ್ ವಿರುದ್ಧ ವ್ಯವಸ್ಥಿತ ಷಡ್ಯಂತ್ರ: ಸಚಿವ ಕೃಷ್ಣ ಬೈರೇಗೌಡ
ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಭಾರತೀಯ ಬಾರ್ ಕೌನ್ಸಿಲ್ ಅಧ್ಯಕ್ಷ ಮನನ್ ಕುಮಾರ್ ಮಿಶ್ರ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ನ್ಯಾ. ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಬೋಜೇಗೌಡ, ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಕರ್ನಾಟಕ ಬಾರ್ ಕೌನ್ಸಿಲ್‌ನ ಉಪಾಧ್ಯಕ್ಷ ವಿನಯ್ ವಿ. ಮಂಗಳೇಕರ್, ರಾಜ್ಯ ವಕೀಲರ ಪರಿಷತ್ ಸದಸ್ಯ ಬಿ.ಆರ್. ಚಂದ್ರಮೌಳಿ, ಮೈಸೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ. ಮಹದೇವಸ್ವಾಮಿ, ಕಾರ್ಯದರ್ಶಿ ಎಸ್. ಉಮೇಶ್ ಮೊದಲಾದವರು ಇದ್ದರು.