ಮೈಸೂರು ವಿವಿಯಲ್ಲಿ ಫ್ರೀ ಕಾಶ್ಮೀರ ಪ್ಲೆಕಾರ್ಡ್ ತೋರಿಸಿದ ವಿಚಾರವಾಗಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಪ್ರತಿಭಟನೆಯಲ್ಲಿ ಭಾಗಿಯಾದವರ ಗುರುತು ಪತ್ತೆಗೆ ತನಿಖೆ ಆರಂಭವಾಗಿದೆ.
ಮೈಸೂರು(ಜ.09): ಮೈಸೂರು ವಿವಿಯಲ್ಲಿ ಫ್ರೀ ಕಾಶ್ಮೀರ ಪ್ಲೆಕಾರ್ಡ್ ತೋರಿಸಿದ ವಿಚಾರವಾಗಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಪ್ರತಿಭಟನೆಯಲ್ಲಿ ಭಾಗಿಯಾದವರ ಗುರುತು ಪತ್ತೆಗೆ ತನಿಖೆ ಆರಂಭವಾಗಿದೆ.
ವಿವಿಯಲ್ಲಿ ಫ್ರೀ ಕಾಶ್ಮಿರ ಪ್ಲೆಕಾರ್ಡ್ ಪ್ರದರ್ಶನ ವಿಚಾರವಾಗಿ ಘಟನೆ ಬಗ್ಗೆ ಸ್ವಯಂ ಪ್ರೇರಿತ ದೂರು ದಾಖಲಿಸುವಂತೆ ಮೈಸೂರು ನಗರ ಪೊಲೀಸ್ ಆಯುಕ್ತ ಸೂಚನೆ ನೀಡಿದ್ದಾರೆ. ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಜಯಲಕ್ಷೀಪುರಂ ಠಾಣೆಗೆ ಸೂಚನೆ ನೀಡಿದ್ದಾರೆ.
ಮೈಸೂರು: ಮೇಯರ್, ಉಪಮೇಯರ್ ಎಲೆಕ್ಷನ್‌ಗೆ ಡೇಟ್ ಫಿಕ್ಸ್
ಘಟನೆ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುತ್ತಿರುವ ಜಯಲಕ್ಷೀಪುರಂ ಪೊಲೀಸ್ ಠಾಣೆ ಸಿಬ್ಬಂದಿಗಳು ಪ್ಲೆಕಾರ್ಡ್ ಪ್ರದರ್ಶನ ವಿಚಾರವಾಗಿ ಪ್ರತಿಭಟನೆ ಆಯೋಜಕರ ವಿರುದ್ಧ ದೂರು ದಾಖಲಿಸಿದ್ದಾರೆ.
ಯಾವ ಸಂಘಟನೆಯ ಪ್ರತಿಭಟನೆಗೆ ಕರೆ ಕೊಡಲಾಗಿತ್ತು ಆ ಸಂಘಟನೆಯ ಮುಖ್ಯಸ್ಥರು ಹಾಗೂ ಸದಸ್ಯರ ಮೇಲೆ ದೂರು ದಾಖಲಿಸಲಾಗಿದ್ದು, ಪ್ರತಿಭಟನೆಯಲ್ಲಿ ಭಾಗಿಯಾದವರ ಗುರುತು ಪತ್ತೆಗೆ ತನಿಖೆ ಆರಂಭವಾಗಿದೆ. ಘಟನೆ ಸಂಪೂರ್ಣ ಮಾಹಿತಿ ಪಡೆದು ಪ್ಲೆಕಾರ್ಡ್ ಹಿಡಿದವರ ಗುರುತು ಪತ್ತೆಗೆ ತನಿಖೆ ನಡೆಸಲಾಗುತ್ತಿದೆ.
ಪ್ರತಿಭಟನೆಗೆ ಅನುಮತಿಯನ್ನೇ ಪಡೆದಿಲ್ಲ
ಆಯೋಜಕರು ಪ್ರತಿಭಟನೆಗೆ ಅನುಮತಿ ಪಡೆದಿರಲಿಲ್ಲ. ಜಯಲಕ್ಷೀಪುರಂ ಠಾಣೆಯಲ್ಲಿ ಪ್ರತಿಭಟನೆಗೆ ಅನುಮತಿ ಪಡೆದಿರಲಿಲ್ಲ. ಈ ಬಗ್ಗೆ ವಿವಿ ಕುಲಪತಿಗಳಿಂದ ಮಾಹಿತಿ ಪಡೆಯುತ್ತಿದ್ದೇವೆ. ಎಲ್ಲ ಮಾಹಿತಿ ಪಡೆದು ತನಿಖೆ ನಡೆಸುತ್ತೇವೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಹೇಳಿದ್ದಾರೆ.