ಮುಸ್ಲಿಂ ಸಮುದಾಯ ನಿಂದನೆ: 15 ಮಂದಿ ಹಿಂದೂ ಯುವಕರಿಂದ ಮುಚ್ಚಳಿಕೆ

By Kannadaprabha News  |  First Published Apr 11, 2020, 9:25 AM IST

ಕೊರೋನಾ ಲಾಕ್‌ ಡೌನ್‌ಗೆ ಜಿಲ್ಲೆಯ ಸಾಮಾನ್ಯ ಜನತೆ ಅತ್ಯಂತ ಸಂಯಮದಿಂದ ಸಹಕಾರ ನೀಡುತಿದ್ದಾರೆ. ಆದರೆ ನಿಷೇದಾಜ್ಞೆಯನ್ನು ಉಲ್ಲಂಘಿಸಿದ ಚರ್ಚಿನ ಧರ್ಮಗುರು ಮತ್ತು ಅನುಯಾಯಿಗಳ ಮೇಲೆ ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲೀಂ ಸಮುದಾಯವನ್ನು ನಿಂದಿಸಿದ ಬಗ್ಗೆ ಯುವಕನೊಬ್ಬನ ಮೇಲೆಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 15 ಮಂದಿ ಹಿಂದೂ ಯುವಕರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ.


ಉಡುಪಿ(ಏ.11): ಕೊರೋನಾ ಲಾಕ್‌ ಡೌನ್‌ಗೆ ಜಿಲ್ಲೆಯ ಸಾಮಾನ್ಯ ಜನತೆ ಅತ್ಯಂತ ಸಂಯಮದಿಂದ ಸಹಕಾರ ನೀಡುತಿದ್ದಾರೆ. ಆದರೆ ನಿಷೇದಾಜ್ಞೆಯನ್ನು ಉಲ್ಲಂಘಿಸಿದ ಚರ್ಚಿನ ಧರ್ಮಗುರು ಮತ್ತು ಅನುಯಾಯಿಗಳ ಮೇಲೆ ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲೀಂ ಸಮುದಾಯವನ್ನು ನಿಂದಿಸಿದ ಬಗ್ಗೆ ಯುವಕನೊಬ್ಬನ ಮೇಲೆಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 15 ಮಂದಿ ಹಿಂದೂ ಯುವಕರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ.

ಬೈಂದೂರು ತಾಲೂಕಿನ ನಾಡ ಗ್ರಾಮದ ಪಡುಕೋಣೆ ಸಂತ ಅಂತೋನಿ ಚಚ್‌Üರ್‍ಲ್ಲಿ ಶುಕ್ರವಾರ ಗುಡ್‌ ಫ್ರೈಡೆ ಹಬ್ಬದ ಪ್ರಯುಕ್ತ ಅಲ್ಲಿನ ಧರ್ಮಗುರು ಪಾ. ಫ್ರೆಡ್‌ ಮಸ್ಕರೇನಸ್‌ ಹಾಗೂ ಇತರ 6 ಜನರು ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಠಾಣೆಗೆ ಸಾರ್ವಜನಿಕ ಕರೆಯಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಲಾಕ್‌ ಡೌನ್‌ - ನಿಷೇದಾಜ್ಞೆಯನ್ನು ಉಲ್ಲಂಘಿಸಿದ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Latest Videos

undefined

ಶೇರ್‌ ಮಾಡಿದ್ದಕ್ಕೆ ಕೇಸು:

ಕುಂದಾಪುರ ತಾಲೂಕಿನ ಸೌಕೂರು ನಿವಾಸಿ ನಾಗರಾಜ್‌ ಮೊಗವೀರ (28) ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದಕ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವ ಬರಹವನ್ನು ಪ್ರಸಾರ ಮಾಡಿದ ಬಗ್ಗೆ ಪ್ರಕರಣ ದಾಖಲಿಕೊಳ್ಳಲಾಗಿದೆ.

ಕಲಘಟಗಿಯ ಯುವ ಕಾರ್ಯಕರ್ತರು ಎಂಬ ಫೇಸ್‌ ಬುಕ್‌ ಪೇಜ್‌ನಲ್ಲಿ ದೆಹಲಿಯ ಮಸೀದಿಗೆ ಹೋದವರನ್ನು ಎನ್ಕೌಂಟರ್‌ ಮಾಡಬೇಕು ಎಂಬ ಪೋಸ್ಟ್‌ ಪ್ರಕಟವಾಗಿತ್ತು. ಅದನ್ನು ನಾಗರಾಜ್‌ ಮೊಗವೀರ ಶೇರ್‌ ಮಾಡಿದ್ದ.

ಗಡಿ ದಾಟಲು ಹೆಲ್ತ್‌ ಎಮೆರ್ಜೆನ್ಸಿ ಡ್ರಾಮಾ..! ಅಡ್ಮಿಟ್ ಆಗಿ ರೋಗಿಗಳು ಪರಾರಿ

ಆರೋಪಿಸಿದಕ್ಕೆ ಮುಚ್ಚಳಿಕೆ: ತಬ್ಲೀಘಿಗಳಿಂದ ದೇಶದಾದ್ಯಂತ ಕೊರೋನಾ ಸೋಂಕು ಹೆಚ್ಚಳವಾಗಿದೆ ಜಿಲ್ಲೆಯ ಕೆಲವು ಯುವಕರು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸುತಿದ್ದಾರೆ. ಕೊರೋನಾದ ಬಗ್ಗೆ ಒಂದು ಧರ್ಮವನ್ನು ಅವಹೇಳನ ಮಾಡಬೇಡಿ ಎಂದು ಸಿಎಂ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲೀಂ ಸಮುದಾಯದ ಮೇಲೆ ಆರೋಪಿಸುತ್ತಿದ್ದ ಸುಮಾರು 15 ಜನ ಹಿಂದೂ ಕಾರ್ಯಕರ್ತರನ್ನು ಪೊಲೀಸ್‌ ಠಾಣೆಗೆ ಕರೆಸಿಕೊಂಡು, ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಿದ್ದಾರೆ.

ಇದರಿಂದ ಆಕ್ರೋಶಗೊಂಡ ಮತ್ತಷ್ಟುಹಿಂದೂ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸ್ಟೇಟಸ್‌ನಲ್ಲಿ ಕೇಸರಿ ಧ್ವಜವನ್ನು ಹಾಕಿ, ಠಾಣೆಗೆ ಕರೆಸಲಾದ ಹಿಂದು ಯುವಕರಗೆ ಬೆಂಬಲ ಸೂಚಿಸಬೇಕು ಎಂಬ ಸಂದೇಶವನ್ನು ವೈರಲ್‌ ಮಾಡಲಾಗಿದೆ. ಅದರಂತೆ ಸಾವಿರಾರು ಹಿಂದುಗಳು ಕೇಸರಿ ಧ್ವಜವನ್ನು ತಮ್ಮ ಸ್ಟೇಟಸ್‌ ಐಡಿಯನ್ನಾಗಿ ಮಾಡಿದ್ದಾರೆ.

ಕೊರೋನಾ ವಿರುದ್ಧ ಸದ್ದಿಲ್ಲದೆ ಯುದ್ಧ ಮಾಡುವ ಯೋಧರಿವರು!

ಇದರ ವಿರುದ್ಧ ಕೆಲವು ಪ್ರಗತಿಪರರು ತಮ್ಮ ಸ್ಟೇಟಸ್‌ ಐಡಿಯಾಗಿ ತ್ರಿವರ್ಣ ಧ್ವಜವನ್ನು ಹಾಕಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕರೆ ನೀಡಿದ್ದು, ಒಂದಷ್ಟುಮಂದಿ ಅದನ್ನು ಪಾಲಿಸಿದ್ದಾರೆ.

click me!